ಪಕಳಕುಂಜ ಗಜಾನನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾಟ

0

ವಿಟ್ಲ: ಪಕಳಕುಂಜ ಗಜಾನನ ಸ್ಪೋರ್ಟ್ಸ್ ಕ್ಲಬ್  ವತಿಯಿಂದ 7 ಜನರ  ಆಯ್ದ 24 ತಂಡಗಳ ಮುಕ್ತ ಕ್ರಿಕೆಟ್ ಪಂದ್ಯಾಟವು ಪಕಳಕುಂಜ ವೇಣುಗೋಪಾಲ ಅನುದಾನಿತ ಹಿ.ಪ್ರಾ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟವನ್ನು  ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪಕಳಕುಂಜರವರು ಉದ್ಘಾಟಿಸಿದರು. 

 

 

ಸಾಯಂಕಾಲ ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಬಾಳೆಕಲ್ಲು ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.  ಸೂರಜ್ ರೈ ಕೆಳಗಿನ ಮನೆ, ಚಿದಾನಂದ ಪಕಳಕುಂಜ, ಚಂದ್ರಶೇಖರ ಸಾಯ, ಸತೀಶ್ ಮಣಿಯಾಣಿ ಪೆರುವಾಯಿ ಮೊದಲಾದವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂದ್ಯಾಟದ ತೀರ್ಪುಗಾರರಾಗಿ ಸತೀಶ್ ಮಾಣಿಯಾಣಿ ಪೆರುವಾಯಿ ಹಾಗೂ ಪ್ರಶಾಂತ್ ಸಾಯ ಸಹಕರಿಸಿ, ಮಹೇಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಥಮ ಬಹುಮಾನ ಎಲೈಟ್ ಅಡ್ಯನಡ್ಕ ಬಿ ತಂಡ ಪಡೆದುಕೊಂಡರೆ, ದ್ವಿತೀಯ  ಬಹುಮಾನವನ್ನು ಶ್ರೀ ಮಹಾಲಿಂಗೇಶ್ವರ ಬಜಕೂಡ್ಲು ತಂಡವು ಪಡೆದುಕೊಂಡಿತು.

LEAVE A REPLY

Please enter your comment!
Please enter your name here