ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

 

ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನ.12 ರಂದು ಸುಳ್ಯದಲ್ಲಿ ನಡೆಯಲಿರುವ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಅ.30 ರಂದು ಯುವಜನ ಸಂಯುಕ್ತ ಮಂಡಳಿಯ ಎದುರಿನ ಜೆ.ಒ.ಸಿ.ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ಸುಳ್ಯದಲ್ಲಿ ವಿಧಾನ ಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಮೂರು ಮಂದಿ ಸಾಧಕರಿಗೆ ಸನ್ಮಾನ ಸಮಾರಂಭವು ನಡೆಯಲಿರುವುದು. ಈ ಸಂದರ್ಭದಲ್ಲಿಸಂಘದ ಗೌರವಾಧ್ಯಕ್ಷ ಎಸ್. ಪಿ. ಲೋಕನಾಥ್, ಅಧ್ಯಕ್ಷ ಗಿರಿಧರ್ ಸ್ಕಂದ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ (ಸ್ವಾತಿ ) ಜತೆ ಕಾರ್ಯದರ್ಶಿ ಶಿವಪ್ರಕಾಶ್ ಸುಳ್ಯ, ಖಜಾಂಜಿ ಮಧುಸೂಧನ್ ನಾಯರ್ ಸುಳ್ಯ, ಉಪಾಧ್ಯಕ್ಷ ಜಿ. ಎ ಮಹಮ್ಮದ್, ಶರತ್ ಕುಮಾರ್ ಅಲೆಕ್ಕಾಡಿ, ಶಾಫಿ ಪೈಚಾರ್ (ಪ್ರಗತಿ), ರಾಜೇಶ್ ಕಡಬ, ಗುರುದತ್ ನಾಯಕ್ (ಗುರು ಶಾಮಿಯಾನ), ಚಂದ್ರಶೇಖರ್ ಪಂಜ, ರವಿಪ್ರಕಾಶ್ ಸುಳ್ಯ, ರಕ್ಷಿತ್, ರೇಗನ್ ಗುತ್ತಿಗಾರು, ಹಸನ್ ಸುಳ್ಯ, ವೆಂಕಟ್ರಮಣ ಅರಂತೋಡು, ಸತೀಶ್ ಕಲ್ಲುಗುಂಡಿ, ವಿಶ್ವನಾಥ್ ಭಟ್ ಕೆದಿಲ,ರಾಜೇಶ್ ರೈ ಉಬರಡ್ಕ, ಜಯಂತ್ ಮಂಡೆಕೋಲು, ಜಯಂತ್ ಮಂಡೆಕೋಲು, ಗುಣಪಾಲ ಜಾಲ್ಸೂರು, ಪ್ರಶಾಂತ್ ಬೆಳ್ಳಾರೆ, ಸುಧೀರ್ ಕಲ್ಲುಗುಂಡಿ, ಪ್ರವೀಣ್ ಜಾಲ್ಸೂರು, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here