ಅಡ್ಪಂಗಾಯ : ಆರೋಗ್ಯ ಮಾಹಿತಿ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ಜನತಾ ಕಾಲನಿಯಲ್ಲಿ ಆರೋಗ್ಯ ಸೋಮವಾರ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು. ಸುಳ್ಯ ತಾಲೂಕು ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಡ್ಪಂಗಾಯ ಜನತಾ ಕಾಲನಿಯಲ್ಲಿ ವಾರದ ಕಾರ್ಯಕ್ರಮ ಆರೋಗ್ಯ ಸೋಮವಾರ ಮಾಹಿತಿ ಕಾರ್ಯಕ್ರಮವನ್ನು ಕಾಲನಿಯ ನಿವಾಸಿ ವಿಶ್ವನಾಥ ಇವರ ಮನೆಯಲ್ಲಿ ನಡೆಸಲಾಯಿತು.

ABHA -PMJAY ಕಾರ್ಡ್, ತಂಬಾಕಿನ ದುಷ್ಪರಿಣಾಮ ಮತ್ತು ಋತುಚಕ್ರ ನೈರ್ಮಲ್ಯ ಕುರಿತು ಆರೋಗ್ಯ ಮಾಹಿತಿಯನ್ನು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಜಯಶ್ರೀ ಸ್ವಾಗತಿಸಿ, ಆಶಾ ಕಾರ್ಯಕರ್ತೆ ರುಕ್ಮಿಣಿ ವಂದಿಸಿದರು. ಕಾಲನಿಯ ನಿವಾಸಿಗಳು ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here