ಸುಳ್ಯ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ

0

 

ನ್ಯಾಯಾಧೀಶೆ ಕು.ಅರ್ಪಿತಾ ರವರಿಂದ ಭ್ರಷ್ಟಾಚಾರ ನಿರ್ಮೂಲನಾ ಪ್ರಮಾಣವಚನ ಬೋಧನೆ

ಅಕ್ಟೋಬರ್ 31 ಭ್ರಷ್ಟಾಚಾರ ವಿರೋಧಿ ದಿನಾಚರಣೆ ಅಂಗವಾಗಿ ಇಂದು ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸುಳ್ಯ, ತಾಲೂಕು ಆಡಳಿತ ಸಮಿತಿ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಆರೋಗ್ಯ ಇಲಾಖೆ ಸುಳ್ಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸುಳ್ಯ, ಅರಣ್ಯ ಇಲಾಖೆ ಸುಳ್ಯ, ಸುದ್ದಿ ಸಮೂಹ ಮಾಧ್ಯಮ ಸುಳ್ಯ ಇವುಗಳ ಸಂಯುಕ್ತಾಕ್ಷರದಲ್ಲಿ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಇಂದು ಸುಳ್ಯ ವಕೀಲರ ಸಂಘ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ಕಿರಿಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ ಅಕ್ಟೋಬರ್ 31 ರಂದು ವಿಶ್ವದಾದ್ಯಂತ ಭ್ರಷ್ಟಾಚಾರ ವಿರೋಧಿ ದಿನಾಚರಣೆ ಆಚರಿಸಲಾಗುತ್ತಿದ್ದು ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ, ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಭ್ರಷ್ಟಾಚಾರ ಎಂಬುವುದು ಇಡೀ ವಿಶ್ವದಲ್ಲೇ ಪಸರಿಸಿಕೊಂಡಿರುವ ಒಂದು ಅವ್ಯವಸ್ಥೆ ಅಂಗವಾಗಿದೆ.

ಇದನ್ನು ನಿರ್ಮೂಲನೆ ಮಾಡಬೇಕಾದರೆ ಪ್ರತಿಯೊಬ್ಬ ಅಧಿಕಾರಿಗಳಿಂದ ಹಿಡಿದು ಆಡಳಿತದಾರರವರೆಗೆ ಇದರ ಜಾಗೃತಿ ಅರಿವು ಅವಶ್ಯಕವಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿದ್ದಾಗ ಭ್ರಷ್ಟಾಚಾರ ಉದ್ಭವಿಸಲು ಕಾರಣವಾಗುತ್ತದೆ. ಸ್ವಜಾತಿಯವರಿಗೆ ಅಥವಾ ಸ್ವಪಕ್ಷದವರ ಬೇಡಿಕೆಗಳನ್ನು ಪೂರೈಸಿ ಕೊಡುವಾಗ ನಮ್ಮವರೇ ಎಂಬ ಭಾವನೆಯಿಂದ ಕಾನೂನಾತ್ಮಕವಾಗಿ ಮಾಡಿಕೊಡಲು ಸಾಧ್ಯವಾಗದಿದ್ದಾಗ, ಬೇರೆ ದಾರಿಯಿಂದ ಮಾಡಿಕೊಡುವ ಸಂದರ್ಭಗಳು ಬಂದಾಗ ಅಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇವೆಲ್ಲವನ್ನೂ ಕಡಿವಾಣ ಹಾಕಿದಾಗ ಸಮಾಜದಿಂದ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ವಕೀಲ ಸುಬ್ರಾಯ ಭಟ್ ಬ್ರಷ್ಟಾಚಾರ ಜಾಗೃತಿ ಕುರಿತು ಮಾಹಿತಿ ನೀಡಿ ಊದು ದೊಡ್ಡ ಪಿಡುಗು, ಈ ಒಂದು ವ್ಯವಸ್ಥೆ ಗೌಪ್ಯವಾಗಿ ನಡೆಯುವಂತದ್ದು. ಕಾನೂನಿನಲ್ಲಿ ಇದರ ಬಗ್ಗೆ ಕಾಯ್ದೆಗಳಿದ್ದರೂ ಕೂಡ ಸಾಕ್ಷಿ ಆಧಾರಗಳ ಕೊರತೆಯಿಂದ ಇದಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಶಿಕ್ಷೆಯಾಗುವುದು ಕಡಿಮೆ. ಇದರ ನಿರ್ಮೂಲನೆಗಾಗಿ ಕಠಿಣ ಶಿಕ್ಷೆಗಳ ನಿಯಮಗಳು ಬರಬೇಕು. ಲಂಚ ಪಡೆಯುವವನು ಮತ್ತು ಲಂಚ ನೀಡುವವನಿಗೂ ಒಂದೇ ರೀತಿಯ ಶಿಕ್ಷೆಯಾಗಬೇಕು. ಬ್ರಿಟಿಷರ ಕಾಲದಿಂದಲೇ ಬ್ರಷ್ಟಾಚಾರ ದೇಶದಲ್ಲಿ ನಡೆದುಕೊಂಡು ಬಂದಿದೆ. ಇದನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಬೇಕೆ ವಿನ: ಒಮ್ಮೆಲೆ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ಶಿಶು ಮತ್ತು ಮಹಿಳಾ ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ, ಸುಳ್ಯ ವಲಯ ಅರಣ್ಯ ಅಧಿಕಾರಿ ಗಿರೀಶ್, ಸುಳ್ಯ ನ್ಯಾಯಾಲಯದ ಎಪಿಪಿ ಅರೋನ್ ಡಿ’ಸೋಜ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಮಾತನಾಡಿದರು.
ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ಮಾತನಾಡಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬಹಳಷ್ಟು ಪರಿಶ್ರಮವನ್ನು ಪಡುತ್ತಿದ್ದು ಇದರ ಬಗ್ಗೆ ದೇಶದಾದ್ಯಂತ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಬ್ರಷ್ಟಾಚಾರ ಮುಕ್ತ ಆಡಳಿತ ಮತ್ತು, ಸರ್ಕಾರದಿಂದ ಬರುವ ಯೋಜನೆಗಳು ಭ್ರಷ್ಟಾಚಾರ ರಹಿತವಾಗಿ ಫಲಾನುಭವಿಗಳಿಗೆ ದೊರಕಿದಲ್ಲಿ ಸಮಾಜವು ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ವಕೀಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಜೆ ಎನ್ ಅಬೂಬಕ್ಕರ್ ಅಡ್ಕಾರ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ವಿನಯ ಮುಳುಗಾಡು ಹೊಂದಿಸಿದರು. ವಕೀಲ ದೀಪಕ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಸ್ವಪ್ತಾಹ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಕುಮಾರಿ ಅರ್ಪಿತಾ ಭ್ರಷ್ಟಾಚಾರ ವಿರೋಧಿ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ನಮ್ಮ ದೇಶದ ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಒಂದು ಪ್ರಮುಖ ಅಡಚಣೆಯಾಗಿರುವುದೆಂದು ನಾನು ನಂಬುತ್ತೇನೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ ನಾಗರಿಕರು ಮತ್ತು ಖಾಸಗಿ ವಲಯದಂತಹ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ನಾನು ನಂಬುತ್ತೇನೆ. ಜಾಗರೂಕತನಾಗಿದ್ದು ಉನ್ನತ ಗುಣಮಟ್ಟದ ಪ್ರಾಮಾಣಿಕತೆ ಮತ್ತು ಬದ್ಧನಾಗಿರಬೇಕೆಂದು ಹಾಗೂ ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ನಾನು ಅರಿತಿದ್ದೇನೆ. ಆದ್ದರಿಂದ ನಾನು ಈ ರೀತಿ ಪ್ರತಿಜ್ಞೆ ಮಾಡುತ್ತೇನೆ.


ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ. ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದು ಇಲ್ಲ. ಎಲ್ಲಾ ಕಾರ್ಯಗಳನ್ನು ಪ್ರಾಮಾಣಿಕತೆ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ವೈಯುಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗುತ್ತೇನೆ. ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ಮಾಡುತ್ತೇನೆ. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ ಹಿರಿಯ ವಕೀಲರಿಗೂ, ನ್ಯಾಯಾಲಯದ ಸಿಬ್ಬಂದಿಗಳಿಗೂ, ಪೊಲೀಸ್ ಸಿಬ್ಬಂದಿಗಳಿಗೂ ಬೋಧಿಸಿದರು.

LEAVE A REPLY

Please enter your comment!
Please enter your name here