ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ-ಹೊರೆಕಾಣಿಕೆ ಸಮರ್ಪಣೆ

0

ನೆಲ್ಯಾಡಿ: 2007ರಲ್ಲಿ ಪುನರ್‌ನಿರ್ಮಾಣಗೊಂಡು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದ ಕಡಬ ತಾಲೂಕಿನ ಆಲಂತಾಯ ಗ್ರಾಮದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಇದೀಗ 14 ವರ್ಷಗಳ ಬಳಿಕ 2ನೇ ಬಾರಿಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮಾ.22ರಂದು ಅದ್ದೂರಿಯಾಗಿ ಚಾಲನೆ ದೊರೆತಿದ್ದು ಮಾ.27ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

 


ಮೊದಲ ದಿನವಾದ ಮಾ.22ರಂದು ಬೆಳಿಗ್ಗೆ ವಿವಿಧ ಗ್ರಾಮಸ್ಥರಿಂದ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಆಲಂತಾಯ, ನೆಲ್ಯಾಡಿ, ಗೋಳಿತ್ತೊಟ್ಟು, ಕೊಣಾಲು, ಹಳೆನೇರೆಂಕಿ, ರಾಮಕುಂಜ, ಬಜತ್ತೂರು, ಕಾಂಚನ, ಪೆರಿಯಡ್ಕ ಗ್ರಾಮಸ್ಥರು ಹಸಿರು ಹೊರೆಕಾಣಿಕೆ ಸಮರ್ಪಣೆ ಮಾಡಿದರು. ಗೋಳಿತ್ತೊಟ್ಟಿನಿಂದ ವಾಹನ ಜಾಥಾದ ಮೂಲಕ ಹೊರೆಕಾಣಿಕೆ ಮೆರವಣಿಗೆಯೂ ಆಲಂತಾಯ ಭಜನಾ ಮಂದಿರಕ್ಕೆ ಆಗಮಿಸಿತು. ಅಲ್ಲಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಂಡಿತು. ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ ಅವರು ಹೊರೆಕಾಣಿಕೆ ಹೊತ್ತ ವಾಹನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಸುಮಂಗಲೆಯರ ಪೂರ್ಣಕುಂಭ ಸ್ವಾಗತ, ಚೆಂಡೆ ವಾದನ, ಬ್ಯಾಂಡ್‌ಸೆಟ್, ಭಜನಾ ತಂಡ, ಗೊಂಬೆ ಕುಣಿತದೊಂದಿಗೆ ಹೊರೆಕಾಣಿಕೆ ಮೆರವಣಿಗೆಯೂ ದೇವಸ್ಥಾನಕ್ಕೆ ಆಗಮಿಸಿತು. ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಅಭಿವೃದ್ಧಿ ಸಮಿತಿಯವರು ಹೊರೆಕಾಣಿಕೆ ಬರಮಾಡಿಕೊಂಡರು. ಬಳಿಕ ಹೊರೆಕಾಣಿಕೆಯನ್ನು ಉಗ್ರಾಣದಲ್ಲಿ ತುಂಬಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಬಡೆಕ್ಕಿಲ್ಲಾಯರವರು ಉಗ್ರಾಣ ಉದ್ಘಾಟಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂರವರು ಬ್ರಹ್ಮಕಲಶೋತ್ಸವದ ಕಾರ್ಯಾಲಯ ಉದ್ಘಾಟಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಗೌಡ ಪೆರ್ಲ, ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದುಮಾರುಗುತ್ತು, ಕಾರ್ಯದರ್ಶಿ ರಜತ್‌ಕುಮಾರ್ ಶಾಂತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಕೋಶಾಧಿಕಾರಿ ರಮೇಶ್ ಭಟ್ ಬಿ.ಜಿ., ಉಪಾಧ್ಯಕ್ಷರಾದ ಡಾ.ರಾಮಕೃಷ್ಣ ಭಟ್ ಅಂಜರ, ಯೋಗೀಶ್ವರಿ ಡೆಂಬಲೆ, ಪ್ರಶಾಂತ ರೈ ಅರಂತಬೈಲು, ರಮೇಶ ಗೌಡ ಪೆರ್ಲ, ಜೊತೆ ಕಾರ್ಯದರ್ಶಿಗಳಾದ ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ರವಿ ಯಾನೆ ಶಿವಪ್ರಸಾದ್ ಶಿವಾರು, ಮಹೇಶ್ ಆಚಾರ್ಯ ಪಾತೃಮಾಡಿ, ಶಾಲಿನಿಶೇಖರ ಪೂಜಾರಿ, ಶ್ರೀ ಷಣ್ಮುಖ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಜಿನೇಂದ್ರಕುಮಾರ್, ಉಪಾಧ್ಯಕ್ಷ ನಾರಾಯಣ ಪೂಜಾರಿ, ಜೊತೆ ಕಾರ್ಯದರ್ಶಿ ನೇಮಣ್ಣ ಪೂಜಾರಿ, ಸದಸ್ಯರಾದ ಗುಲಾಬಿ ಶೆಟ್ಟಿ ಪುರ, ವಿಶ್ವನಾಥ ಗೌಡ ಪೆರಣ, ವೆಂಕಟ್ರಮಣ ಕೆ.ಪಿ.ಸುಲ್ತಾಜೆ, ಕೆ.ವಿ.ಕಾರಂತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ, ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಚಂದ್ರಶೇಖರ್, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಟೇರಿ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಪಾರ್ಶ್ವನಾಥ ಜೈನ್, ಮಹೇಂದ್ರ ವರ್ಮ ಮೇಲೂರು, ಸದಸ್ಯರಾದ ವೇದಕುಮಾರ್ ಪುಲಾರ, ಚಲ್ಲಮುಗೇರ ಬೊರ್ಜಾಲು, ನೀಲಪ್ಪ ನಾಯ್ಕ್ ಆಲಂಗಪೆ, ವಾಯುಪ್ರಭಾ ಹೆಗ್ಡೆ ಶಾಂತಿಮಾರು, ಉದಯಕುಮಾರ್ ಬಟ್ಲಡ್ಕ, ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಸದಸ್ಯರುಗಳು, ಗ್ರಾಮಸ್ಥರು, ಭಕ್ತಾದಿಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

 

LEAVE A REPLY

Please enter your comment!
Please enter your name here