ಅಜ್ಜಿಕಲ್ಲು: 2 ಕೋಟಿ 60ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ

0

  • ಕೋಟಿ ಕೋಟಿ ಅನುದಾನಗಳು ಬೂತ್ ಮಟ್ಟಕ್ಕೆ ತಲುಪುತ್ತಿದೆ: ಸಂಜೀವ ಮಠಂದೂರು

 

 


ಪುತ್ತೂರು: ಒಳಮೊಗ್ರು ಗ್ರಾಮದ ನಾಲ್ಕನೇ ವಾರ್ಡ್ ಅಜ್ಜಿಕಲ್ಲನಲ್ಲಿ 2 ಕೋಟಿ 60ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮ ಮಾ. 20 ರಂದು ಅಜ್ಜಿಕಲ್ಲಿನಲ್ಲಿ ನಡೆಯಿತು. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ರವರು ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತ ಕ್ಕೆ ಬಂದ ನಂತರ ಕೋಟಿ-ಕೋಟಿ ಅನುದಾನಗಳು ಬೂತ್ ಮಟ್ಟಕ್ಕೆ ತಲುಪುವಂತಾಗಿದೆ ಎಂದರು. ಸರಕಾರ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳು ಅಭಿವೃದ್ಧಿಯಾಗಲಿದೆ , ಪಕ್ಷ ಸಂಘಟನೆ ಕಾರ್ಯಕರ್ತರು ಬಲಗೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾರ್ಯಗಳು ಕೂಡ ಅಷ್ಟೇ ವೇಗವಾಗಿ ಸಾಗುತ್ತಿದೆ ಎಂದು ಹೇಳಿದರು. ಈ ನಡುವೆ ಅಜ್ಜಿಕಲ್ಲು ಪ್ರದೇಶದಲ್ಲಿ ಪಕ್ಷ ಸಂಘಟನೆಯ ೩೦ ವರ್ಷಗಳ ಒಡನಾಟವನ್ನು ನೆನಪಿಸಿದರು. ವೇದಿಕೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ , ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ , ಒಳಮೊಗ್ರು ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ನಿಮಿತಾ ರೈ ಬಿ , ವನಿತಾ ಕುಮಾರಿ , ನಳಿನಾಕ್ಷಿ , ರೇಖಾ , ಪ್ರದೀಪ್ ಕುಮಾರ್ ಎಸ್ ಸೇರಿದಂತೆ ಕಾರ್ಯಕರ್ತರು , ಪ್ರಮುಖರು ಉಪಸ್ಥಿತರಿದ್ದರು. ಪ್ರಕಾಶ್ ಕುಮಾರ್ ಬೈರೋಡಿ , ಸೂರಜ್ ಶೆಟ್ಟಿ ನಾಯಿಲ , ಸಂಜೀವ ನಾಯ್ಕ ಮುಂಡೋವುಮೂಲೆ , ಉಷಾ ಕುಮಾರಿ ಅಜ್ಜಿಕಲ್ಲು , ಹರಿಪ್ರಸಾದ್ ರೈ ಮೊಡಪ್ಪಾಡಿ ಅತಿಥಿಗಳಿಗೆ ಪುಷ್ಪ ಗೌರವ ನೀಡಿದರು. ಗ್ರಾಮಾಂತರ ಮಂಡಲ ಕಾರ್ಯಕಾರಿಣಿ ಸದಸ್ಯ ಮಹೇಶ್ ಕೇರಿ ಸ್ವಾಗತಿಸಿ. ಈಶ್ವರ ನಾಯ್ಕ ಮುಂಡೋವುಮೂಲೆ ವಂದಿಸಿದರು. ಬೂತ್ ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು ಕಾರ್ಯಕ್ರಮ ನಿರೂಪಿಸಿದರು.

ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕರು
ಹಲವಾರು ದಶಕಗಳ ಬೇಡಿಕೆಯಾಗಿದ್ದ ದೇವಸ್ಯ – ಚೆಲ್ಯಡ್ಕ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಡಾಮಾರೀಕರಣಕ್ಕೆ 1 ಕೋಟಿ 70 ಲಕ್ಷ ರೂ ಅನುದಾನ ಒದಗಿಸುವುದರ ಜೊತೆಗೆ ಅಜ್ಜಿಕಲ್ಲು – ಮುಂಡೋವುಮೂಲೆ ರಸ್ತೆ ಕಾಂಕ್ರೀಟಿಕರಣ 20 ಲಕ್ಷ , ಬೈರೋಡಿ – ದರ್ಖಾಸು ರಸ್ತೆಗೆ 20 ಲಕ್ಷ , ಕಾಪಿಕಾಡು – ಹೊಸಗದ್ದೆ ರಸ್ತೆಗೆ 10 ಲಕ್ಷ , ಮೊಡಪ್ಪಾಡಿ – ಕನರಗದ್ದೆ ರಸ್ತೆಗೆ 10 ಲಕ್ಷ , ಸ.ಹಿ.ಪ್ರಾ ಶಾಲೆ ಕೈಕಾರ ಇದರ ಶೌಚಾಲಯಕ್ಕೆ 4.80 ಲಕ್ಷ , ಕೈಕಾರ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 20 ಲಕ್ಷ , ಮುಂಡೋವುಮೂಲೆ ಎಂಬಲ್ಲಿ ಮಳೆ ನೀರಿನ ಚರಂಡಿ ನಿರ್ಮಾಣಕ್ಕೆ 1.80 ಲಕ್ಷ ಅನುದಾನ ಒದಗಿಸಿದ್ದಾರೆ.

LEAVE A REPLY

Please enter your comment!
Please enter your name here