ಬೆಳಂದೂರಿನಲ್ಲಿ ಸಾರ್ವಜನಿಕ ಶ್ರೀ ಅಶ್ವತ್ಥ ವಿವಾಹ ದಶಮಾನೋತ್ಸವ- ಸನ್ಮಾನ

0

 

ಕಾಣಿಯೂರು: ಬೆಳಂದೂರು ಅಶ್ವತ್ಥ ವಿವಾಹ ಮಹೋತ್ಸವ ಸಮಿತಿಯ ಆಶ್ರಯದಲ್ಲಿ 11ನೇ ವರ್ಷದ ಶ್ರೀ ಅಶ್ವತ್ಥ ವಿವಾಹ ಮಹೋತ್ಸವವು ವೇದಮೂರ್ತಿ ಶ್ರೀ ನರಸಿಂಹ ಶ್ರೀ ನರಸಿಂಹ ಪಾಂಗಣ್ಣಾಯ ಕುವೆತ್ತೋಡಿಯವರ ಮಾರ್ಗದರ್ಶನದಲ್ಲಿ ಮಾ. 21ರಂದು ನಡೆಯಿತು. ಬೆಳಿಗ್ಗೆ ಅಭಿಷೇಕ, ಗಣಹೋಮ, ಅಶ್ವತ್ಥ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಸಂಜೆ ಶ್ರೀ ಮಾರಿಯಮ್ಮ ಸೇವಾ ಸಮಿತಿ ಬೆಳಂದೂರು ಇವರ ಪ್ರಾಯೋಜಕತ್ವದಲ್ಲಿ ಶ್ರೀ ಹರಿಭಜನಾ ಮಂಡಳಿ ದೇವಸ್ಯ ಸವಣೂರು ಮತ್ತು ಪ್ರೀತಮ್ ಗೌಡ ಮುಂಡಾಳ ಇವರ ನೇತೃತ್ವದಲ್ಲಿ ವಿಘ್ನೇಶ್ವರ ಭಜನಾ ಮಂಡಳಿ ನೆಟ್ಟಣ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಪಾಕತಜ್ಞ ಪ್ರಕಾಶ್ ಭಟ್ ಬರೆಪ್ಪಾಡಿ ಇವರಿಗೆ ಸನ್ಮಾನ, ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಇವರಿಂದ ಯಕ್ಷಗಾನ ಬಯಲಾಟ ಪಾಪಣ್ಣ ವಿಜಯ-ಗುಣಸುಂದರಿ ನಡೆಯಿತು. ಅಶ್ವತ್ಥ ವಿವಾಹ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here