ನೆಟ್ಟಣಿಗೆಮುಡ್ನೂರು: ಅನಾಮಧೇಯ ವ್ಯಕ್ತಿಗಳಿಂದ ಯುವಕನಿಗೆ ಬೆದರಿಕೆ ಕರೆ – ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು

0

ಪುತ್ತೂರು: ಅನಾಮಧಯೆ ವ್ಯಕ್ತಿಗಳು ಯುವಕರೊಬ್ಬರಿಗೆ ಮೊಬೈಲ್ ನಂಬರ್‌ನಿಂದ ಕರೆ ಮಾಡಿ ಬೆದರಿಕೆಯೊಡ್ಡಿರುವ ಕುರಿತು ನ್ಯಾಯಾಲಯದ ಆದೇಶದಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆಟ್ಟಣಿಗೆಮುಡ್ನೂರು ಮುಂಡ್ಯ ನಿವಾಸಿ ದಾಮೋದರ್ ಅವರ ಪುತ್ರ ಚಂದ್ರಹಾಸ ಎಮ್(24ವ)ರವರಿಗೆ ಮಾ.12ರಂದು ಅಪರಿಚಿತ ಮೊಬೈಲ್ ನಂಬರ್‌ನಿಂದ ವ್ಯಕ್ತಿಯೊಬ್ಬರು ಕರೆ ಮಾಡಿ ಶರತ್ ಮಡಿವಾಳನ ಹೆಣ ಹೇಗೆ ಬಿದ್ದಿದೆ. ಅದೇ ರೀತಿ ನಿನ್ನ ಹೆಣ ನಾಳೆ ಸಂಜೆಯೊಳಗೆ ಬೇಳುತ್ತದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದರು. 10 ನಿಮಿಷಗಳ ಬಳಿಕ ಮತ್ತೆರಡು ಅಪರಿಚಿತ ಮೊಬೈಲ್ ಸಂಖ್ಯೆಯಿಂದಲೂ ಕರೆ ಬಂದಿದ್ದು, ಅದರಲ್ಲೂ ಬೆದರಿಯೊಡ್ಡಿದ್ದರು. ಈ ಕುರಿತು ಚಂದ್ರಹಾಸ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ನ್ಯಾಯಾಲಯದ ಅನುಮತಿ ಪಡೆಯಲು ತಿಳಿಸಿದ್ದರು. ಚಂದ್ರಹಾಸ ಅವರು ಮಾ.20ರಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಕುರಿತು ಪುತ್ತೂರು ಸಂಪ್ಯ ಪೊಲೀಸ್ ಠಾಣೆಗೆ ಮಾ.23ರಂದು ಆದೇಶ ನೀಡಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here