ಬೆಳ್ಳಾರೆ: ಜಲಜೀವನ್ ಮೆಶಿನ್ ಯೋಜನೆಗೆ ಸಚಿವ, ಸಂಸದರಿಂದ ಗುದ್ದಲಿ ಪೂಜೆ

0

ಬೆಳ್ಳಾರೆ ಗ್ರಾಮದ ಜಲಜೀವನ್ ಮಿಷನ್ ಯೋಜನೆಯ ಗುದ್ದಲಿ ಪೂಜೆ ಬೆಳ್ಳಾರೆ ಗ್ರಾ.ಪಂ. ವ್ಯಾಪ್ತಿಯ ಬಸ್ತಿಗುಡ್ಡೆಯ ಗೌರಿಪುರಂ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಕಾಯಿ ಒಡೆಯುವ ಮೂಲಕ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ಮೆ ವಹಿಸಿದ್ದರು. ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಬೆಳ್ಳಾರೆ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ತನುಷಾ ಪಡ್ಪು ಪ್ರಾರ್ಥಸಿದರು. ಬೆಳ್ಳಾರೆ ಗ್ರಾ.ಪಂ. ಪಿಡಿಒ ಶ್ಯಾಮ್ ಪ್ರಸಾದ್ ಸ್ವಾಗತಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಜಲಜೀವನ್ ಮಿಷನ್ ತಾಂತ್ರಿಕ ಅಭಿಯಂತರರಾದ ಮಣಿಕಂಠ ವಂದಿಸಿದರು.

LEAVE A REPLY

Please enter your comment!
Please enter your name here