ಪಡುಮಲೆ ಊರ ಭಕ್ತಾಧಿಗಳಿಂದ ಕರಸೇವೆ

0

 

 

ಬಡಗನ್ನೂರುಃ  ಪಡುಮಲೆ ಶ್ರೀ ಕೊವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ   ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು ಶ್ರೀ ದೇವರ ಗರ್ಭಗುಡಿಯ , ನಮಸ್ಕಾರ ಮಂಟಪ, ಹಾಗೂ ಒಳ ಭಾಗದ ಸುತ್ತು ಗೋಪುರದ ಅಡಿಪಾಯ ಹಾಕುವ ಕೆಲಸ ನಡೆಯುತ್ತಿದ್ದು  ಪ್ರತಿ ದಿನ ಸಂಜೆ ಗಂ 6 ರಿಂದ 9.30 ರವರೆಗೆ  ಊರ ಭಕ್ತಾಧಿಗಳಿಂದ ಕರಸೇವೆ ನಡೆಯುತ್ತಿದೆ. ನೂತನ ರಾಜ ಗೋಪುರ ನಿರ್ಮಾಣದ ನಿಟ್ಟಿನಲ್ಲಿ  ಮಾ 24  ರಂದು   ಹಳೆಯ ರಾಜಗೋಪುರ ಮಾಡು ಕಳಚುವ ಕೆಲಸವನ್ನು ಊರ ಭಕ್ತಾಧಿಗಳಿಂದ  ಕರಸೇವೆ  ಮೂಲಕ ಪಡೆಯಿತು ಸುಮಾರು 30೦ ಕ್ಕೂ ಹೆಚ್ಚು ಭಕ್ತಾಧಿಗಳು ಕರ ಸೇವೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ  ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ ಯಚ್, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ , ಹಾಗೂ ಸಮಿತಿ ಸದಸ್ಯರು  ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here