ಬೆಳಂದೂರು ಗ್ರಾ.ಪಂ.ಘನ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಪೂಜೆ

0

 

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್‌ನ ಘನ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಪೂಜೆಯು ಮಾ. 25ರಂದು ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಸದಸ್ಯರಾದ ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರ್, ಜಯಂತ ಅಬೀರ, ಉಮೇಶ್ವರಿ ಅಗಳಿ, ತಾರಾ ಅನ್ಯಾಡಿ, ಗೀತಾ ಕುವೆತ್ತೋಡಿ, ಪಾರ್ವತಿ ಮರಕ್ಕಡ, ಹರಿಣಾಕ್ಷಿ ಬನಾರಿ, ಗೌರಿ ಮಾದೋಡಿ, ಕುಸುಮಾ ಅಂಕಜಾಲು ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here