ಶ್ರವಣರಂಗ ಕಲಾವಿದವರಿಗೆ ಸನ್ಮಾನ

0

 

 ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ಇವರಿಂದ ಶ್ರವಣರಂಗ ಕಲಾವಿದರಿಗೆ ಬಾಲವನದಲ್ಲಿ ಗೌರವ ಸನ್ಮಾನ ಮಾಡಿದರು. ಶ್ರವಣರಂಗದ ಕಲಾವಿದರಾದ ಪೂಕಳ ಲಕ್ಷ್ಮೀನಾರಾಯಣ ಭಟ್ , ಗುಡ್ಡಪ್ಪ ಬಲ್ಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರವಣರಂಗದ ಸಂಚಾಲಕ ತಾರಾನಾಥ ಸವಣೂರು, ಅಧ್ಯಕ್ಷ ಆನಂದ ಸವಣೂರು, ಬಾಲಕಲಾವಿದರಾದ ನೇಸರ ಟಿ ಎಸ್, ಶ್ರೇಯಾ ಸವಣೂರು ಇವರನ್ನು ಗೌರವಿಸಲಾಯಿತು. ತಿಂಗಳ ಕಾರ್ಯಕ್ರಮದ ಪ್ರಯುಕ್ತ ತುಳುನಾಡ ಬಲಿಯೇಂದ್ರೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಸಿಕೊಡಲಾಯಿತು. ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ಸಹಕರಿಸಿದರು.

LEAVE A REPLY

Please enter your comment!
Please enter your name here