ಪಾಂಗಳಾಯಿ ಶ್ರೀಮುಂಡ್ಯತ್ತಾಯ ದೈವಸ್ಥಾನದಲ್ಲಿ ಗಣಹೋಮ, ಶ್ರೀದುರ್ಗಾಪೂಜೆ

0

ಪುತ್ತೂರು: ಪರ್ಲಡ್ಕ ಪಾಂಗಳಾಯಿ ಶ್ರೀಮುಂಡ್ಯತ್ತಾಯ ದೈವಸ್ಥಾನದ ಸನ್ನಿಧಿಯಲ್ಲಿ ಎ.೨೭ರಂದು ಗಣಹೋಮ ಹಾಗೂ ಶ್ರೀದುರ್ಗಾ ನಮಸ್ಕಾರ ಪೂಜೆ ನಡೆಯಿತು.

ಶ್ರೀಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ಈ ಹಿಂದೆ ನಡೆದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೈವಜ್ಞರ ನುಡಿಯಂತೆ ಸಕಲ ದೋಷ ಪರಿಹಾರ ಪ್ರಯುಕ್ತ ದೈವಸ್ಥಾನದ ನಾಗ ಸನ್ನಿಧಿಯ ಮುಂದೆ ಬೆಳಿಗ್ಗೆ ದೈವಸ್ಥಾನದ ಅರ್ಚಕ ನಾಗೇಶ್ ಕುದ್ರೆತ್ತಾಯರವರಿಂದ ಗಣಹೋಮ ನಡೆಸಲಾಯಿತು. ಸಂಜೆ ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಸಹವರ್ತಿ ರಮೇಶ್ ಪುದನ್ನಾಯರವರಿಂದ ಶ್ರೀದುರ್ಗಾ ನಮಸ್ಕಾರ ಪೂಜೆ, ಏಳುನೂರು ಶ್ಲೋಕ ಪರಾಯಣ ನಡೆಯಿತು. ಶ್ರೀಮುಂಡ್ಯತ್ತಾಯ ದೈವ ಮತ್ತು ಪರಿವಾರ ದೈವಗಳಿಗೆ ಪ್ರಾರ್ಥನೆ ಮಾಡಲಾಯಿತು.

ನೂತನ ಆಡಳಿತ ಸಮಿತಿಯ ಅಧ್ಯಕ್ಷ ತಾರಾನಾಥ ರೈ ಬಾಲ್ಯೋಟುಗುತ್ತು ವಿದ್ಯಾನಗರ ದರ್ಬೆ ಹಾಗೂ ಪತ್ನಿ ಮಮತಾ ತಾರಾನಾಥ ರೈ ದಂಪತಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಮಿತಿಯ ಉಪಾಧ್ಯಕ್ಷ ಕೆ. ಉಮಾಶಂಕರ್ ಪಾಂಗಳಾಯಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ನಾಕ್ ಪಾಂಗಳಾಯಿ, ಜತೆ ಕಾರ್ಯದರ್ಶಿ ಶಿವಕುಮಾರ್ ಕಲ್ಲಿಮಾರ್, ಖಜಾಂಜಿ ಸರೋಜಿನಿ ಎಸ್. ಅಭಿಕಾರ್, ಸದಸ್ಯರುಗಳಾದ ರಾಜಗೋಪಾಲ ಶಗ್ರಿತ್ತಾಯ, ವಿನಯ ಭಂಡಾರಿ ಪಾಂಗಳಾಯಿ, ಸಂಪತ್ ಕುಮಾರ್ ಬಿ. ಪಾಂಗಳಾಯಿ, ಸಂತೋಷ್ ಬೋನಂತಾಯ, ಪ್ರಶಾಂತ್ ಪಾಂಗಳಾಯಿ, ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್, ಸುರೇಶ್ ನಾಕ್ ಬಾಳೆಪುಣಿ, ಸೂರಪ್ಪ ಗೌಡ ಪಾಂಗಳಾಯಿ, ವೀಕ್ಷಿತ್ ಕಲ್ಲಿಮಾರ್, ಜಯಶಂಕರ್ ರೈ ಪಾಂಗಳಾಯಿ, ಪ್ರದೀಪ್ ಆಚಾರ್ಯ ಪಾಂಗಳಾಯಿ, ಗಂಗಾಧರ ನಾಕ್ ಪಾಂಗಳಾಯಿ, ಪ್ರೇಮ ಶಿವಪ್ಪ ಗೌಡ ದರ್ಬೆ, ಚಂದ್ರಾವತಿ ಆಚಾರ್ಯ ಪಾಂಗಳಾಯಿ, ವೆಂಕಟರಮಣ ಇಂದಾಜೆ ಹಾಗೂ ಲಕ್ಷ್ಮೀ ಮರೀಲ್ ಸಮಿತಿಯ ಸರ್ವಕಾರ್ಯಕಾರಿ ಸದಸ್ಯರು ಗ್ರಾಮಸ್ಥರು ಭಕ್ತಾಧಿಗಳು ಭಾಗವಹಿಸಿದರು.

(ಎಪ್ರಿಲ್ ತಿಂಗಳ ಜಾತ್ರೋತ್ಸವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯ ಪಾಂಗಳಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನದ ಸನ್ನಿಧಿಗೆ ಆಗಮಿಸಲಿದ್ದು. ನೂತನ ಕಟ್ಟೆ ಪೂಜೆ ನೆರವೇರುವ ಈ ಸಂದರ್ಭದಲ್ಲಿ ಮಹಿಳಾ ವತಿಯಿಂದ ತಾಳಮದ್ದಳೆ, ಮಕ್ಕಳಿಂದ ಭಜನೆ ವಿಶೇಷವಾದ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಲಾಯಿತು.) ರಾತ್ರಿ ಶ್ರೀ ದೇವಿಯ ಪೂಜೆಯ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಸಿಡಿಮದ್ದು ಪ್ರದರ್ಶನಗೊಂಡಿತ್ತು. ಸುಧಾಕರ ಕೆ.ಪಿ. ಕಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here