ವಿಟ್ಲ ಕಮ್ಯೂನಿಟಿ ಸೆಂಟರ್ ಶುಭಾರಂಭ

0

  • ವಿದ್ಯಾರ್ಥಿಗಳ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಸಂಸ್ಥೆಯಿಂದ ಆಗುತ್ತಿರುವುದು ಶ್ಲಾಘನೀಯ: ಡಾ. ಗೀತಾ ಪ್ರಕಾಶ್

 

ವಿಟ್ಲ: ವಿಟ್ಲದ ಖಾಸಗಿ ಬಸ್ಸುನಿಲ್ದಾಣದಲ್ಲಿರುವ ಹಿರಾ ಟವರ್ ನಲ್ಲಿ ಆರಂಭಗೊಂಡ ವಿಟ್ಲ ಕಮ್ಯೂನಿಟಿ ಸೆಂಟರನ್ನು ಮಾ.31೧ರಂದು ಮಹಮೂದ್ ಫೈಝಿ ವಾಲೆಮುಂಡೊವು ಉಸ್ತಾದರು ಉದ್ಘಾಟಿಸಿ ದುವಾ ನೆರವೇರಿಸಿದರು.

ವಿಟ್ಲದ ವೈದ್ಯ, ನಿಕಟಪೂರ್ವ  ಲಯನ್ಸ್ ಗವರ್ನರ್ ಡಾ. ಗೀತಾ ಪ್ರಕಾಶ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಈ ಭಾಗದಲ್ಲಿ ಹಲವಾರು ಶಾಲಾ ಕಾಲೇಜುಗಳಿವೆ ಆದರೆ ಅಲ್ಲಿ ವಿದ್ಯಾರ್ಥಿಗಳಿಗೆ ಡಿಗ್ರಿ ಕೊಡಲಾಗುತ್ತದೆ. ಮೌಲ್ಯ ಮತ್ತು ಸಾಮಾಜಿಕ ಕಾಳಜಿ ನೀಡುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಇರುವ ಅಭಿರುಚಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಕಮ್ಯೂನಿಟಿ ಸೆಂಟರ್ ನಿಂದ ಆಗುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಪರಿಹಾರ ಹಾಗೂ ಪ್ರೋತ್ಸಾಹ ಕೊಡುವ ಸೆಂಟರಿನ ಯೋಜನೆ ವಿಟ್ಲ ಪ್ರದೇಶದಲ್ಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಇಲ್ಲಿ ಸಾಮರ್ಥ್ಯ ಇರುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಮರ್ಥ್ಯ ಇಲ್ಲದ ವಿದ್ಯಾರ್ಥಿಗಳಿಗೂ ಕೌಶಲ್ಯ ಮತ್ತು ತಂತ್ರಜ್ಞಾನ ತರಬೇತಿ ನೀಡುವುದು ಖುಷಿ ತಂದ ಯೋಜನೆ ಎಂದರು.‌

ವಿದ್ಯಾಭ್ಯಾಸದ ಅಸಮತೋಲನ ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಠಿಸಲಿದೆ:
ಕಲ್ಲಡ್ಕ ಮಸೀದಿಯ ಖತೀಬರಾದ ಶೈಖ್ ಮಹಮ್ಮದ್ ಇರ್ಫಾನಿ ಫೈಝಿರವರು ಮಾತನಾಡಿ, ಬಾಲಕರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ, ವಿದ್ಯಾರ್ಥಿನಿಯರು ಹೆಚ್ಚು ಕಲಿಯುತ್ತಿದ್ದಾರೆ, ಈ ಅಸಮತೋಲನ ಭವಿಷ್ಯದಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಠಿಸಲಿದೆ ಹೀಗಾಗಿ ಡ್ರಾಪೌಟ್ ಆಗುವ ಯುವಕರನ್ನು ಗುರುತಿಸುವ ಕೆಲಸ ಮತ್ತು ಅವರಿಗೆ ಕೌನ್ಸಿಲಿಂಗ್ ನಡೆಸಿ ಗುರಿ ತಲುಪಿಸುವ ಪ್ರಯತ್ನ ನಡೆಯಬೇಕು ಎಂದರು.

ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ:ಮಾಜಿ ಜಿ.ಪಂ.ಸದಸ್ಯ ಎಂ.ಎಸ್ ಮಹಮ್ಮದ್ ರವರು ಮಾತನಾಡಿ ಕಳೆದ ಒಂದು ವರ್ಷ ಪುತ್ತೂರಿನಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸಿದ ಸಂಸ್ಥೆ ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳಲ್ಲಿ ಇರುವ ಬೌದ್ಧಿಕ ಸಾಮರ್ಥ್ಯ ಮತ್ತು ಆಸಕ್ತಿಗಳನ್ನು ಬೆಳೆಸುವ ಇಂತಹ ಸೆಂಟರ್, ಅವರ ವ್ಯಕ್ತಿತ್ವ ನಿರ್ಮಿಸುವ ಹಾಗೂ ಸಾಮಾಜಿಕ ಕಾಳಜಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಇಂತಹ ಸಂಸ್ಥೆಯ ಅಗತ್ಯತೆ ಸಮಾಜಕ್ಕಿದೆ: ಎಂ.ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲುರವರು ಮಾತನಾಡಿ ಸೆಂಟರಿನ ಸಿಸ್ಟಂ, ಪದ್ದತಿ, ಫಾರ್ಮೆಟ್ ಮತ್ತು ಇದುವರೆಗೂ ಮಾಡಿದ ಯೋಜನೆ ನೋಡಿ ಅಚ್ಚರಿಯಾಗಿದೆ, ಇಂತಹ ಸೆಂಟರ್‌ನ್ನು ಸಾಮಾಜಿಕ ಜೀವನದಲ್ಲಿ ಎಲ್ಲೂ ನೋಡಿಲ್ಲ. ವಿದ್ಯಾರ್ಥಿಗಳನ್ನು ಮೋನಿಟರಿಂಗ್ ಮಾಡುವ ಲೆಜ್ಜರ್ ಹಾಗೂ ನಿಬಂಧನೆಗಳು ನೋಡಿ ಎಲ್ಲಾ ಕಡೆಯೂ ಇಂತಹ ಸೆಂಟರ್‌ಗಳ ಅಗತ್ಯತೆ ಇದೆ ಎಂದರು.

ಪುತ್ತೂರು ಕಮ್ಯೂನಿಟಿ ಸೆಂಟರ್‌ನ ಸಂಚಾಲಕರಾದ ಸಲೀಂ ಹಾಜಿ ಕಬಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಬಕ ಖತೀಬರಾದ ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ವಿಟ್ಲ ಕಮ್ಯೂನಿಟಿ ಸೆಂಟರಿನ ಸಂಚಾಲಕರಾದ ಶಂಸುದ್ದೀನ್ ಬೈರಿಕಟ್ಟೆ, ಹೆಲ್ಪ್ ಲೈನ್ ನ ಡಿ.ಬಿ. ಮುಸ್ತಫಾ, ಎಂ.ಫ್ರೆಂಡ್ಸ್ ನ ರಶೀದ್ ವಿಟ್ಲ, ಮೋಟಿವೇಷನ್ ಟ್ರೈನರ್ ಉಮರುಲ್ ಫಾರೂಕ್ ರಝಾ ಅಮ್ಜದಿ, ವಿಷನ್ ಎಜುಕೇಶನ್ ಟ್ರಸ್ಟ್ ನ ಮಹಮ್ಮದ್ ಬ್ಯಾರಿ, ಸಲೀಂ ಹಾಜಿ ಬೈರಿಕಟ್ಟೆ, ಪುತ್ತೂರು ಕಮ್ಯೂನಿಟಿ ಸೆಂಟರಿನ ಇಮ್ತಿಯಾರh ಪಾರ್ಲೆ ಉಪಸ್ಥಿತರಿದ್ದರು. ಖ್ಯಾತ ಮೊಟಿವೇಷನಲ್ ಟ್ರೈನರ್ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಹನೀಫ್ ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.

ಪ್ರಥಮ ಶಾಖೆ ವರುಷಗಳ ಹಿಂದೆ ಪುತ್ತೂರಿನಲ್ಲಿ ಆರಂಭ

ಕಮ್ಯೂನಿಟಿ ಸೆಂಟರ್ ೨೦೨೧ರ ಎಪ್ರಿಲ್ ನಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರ್ ಅವರಿಂದ ಪುತ್ತೂರಿನಲ್ಲಿ ಉದ್ಘಾಟನೆಗೊಂಡು ಸುಮಾರು ೩೫೦೦ ವಿದ್ಯಾರ್ಥಿಗಳಿಗೆ ಉತ್ತೇಜನಾ ಶಿಬಿರ, ೧೪೦೦ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುರಿ ನಿಶ್ಚಯಿಸುವ ಕೌನ್ಸಿಲಿಂಗ್ ಮಾಡಿದೆ. ಎಲ್ಲಾ ಧರ್ಮೀಯ ೩೦೦ ವಿದ್ಯಾರ್ಥಿಗಳಿಗೆ ೩೧ ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಿದೆ. ೧೬ ಗ್ರಾಮಾಂತರ ಟ್ಯೂಷನ್ ಸೆಂಟರ್ ಮತ್ತು ೧೦೦ ಕ್ಕಿಂತ ಹೆಚ್ಚು ಡ್ರಾಪೌಟ್ ಆದ ವಿದ್ಯಾರ್ಥಿಗಳನ್ನು ಮರಳಿ ಶಾಲೆ-ಕಾಲೇಜಿಗೆ ಸೇರಿಸಿದೆ. ಇದೀಗ ಸಂಸ್ಥೆಯು ವಿಟ್ಲದ ಗ್ರಾಮೀಣ ಭಾಗದಲ್ಲಿ ತನ್ನ ಎರಡನೇ ಶಾಖೆಯನ್ನು ತೆರೆದಿದೆ.

ವಿಟ್ಲ ಕಮ್ಯೂನಿಟಿ ಸೆಂಟಲಿನ ಉಚಿತ ಸೇವೆಗಳು

ಶೈಕ್ಷಣಿಕ ಗುರಿ ಮತ್ತು ವೃತ್ತಿ ಮಾರ್ಗದರ್ಶನ ಸುಲಭ ಕಲಿಕಾ ವಿಧಾನ ಮತ್ತು ವ್ಯಕ್ತಿತ್ವ ನಿರ್ಮಾಣದ ತರಬೇತಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸರಕಾರಿ ಪರೀಕ್ಷೆಗಳ ಸೂಚನೆ ಮತ್ತು ಮಾಹಿತಿ ದೇಶ-ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಬೇಕಾದ ದಾಖಲೆ ಮತ್ತು ನಿಯಮಗಳ ಸಲಹೆಗಳು ನೀಟ್, ಜೆ.ಇ.ಇ. ಕ್ಯಾಟ್, ಸಿವಿಲ್ ಸರ್ವಿಸ್ ಪರೀಕ್ಷೆಗಳ ತರಬೇತಿ ಮೌಲ್ಯಮಾಪನ ಮತ್ತು ಕೌನ್ಸಿಲಿಂಗ್ ಜಾಗತಿಕ ವೃತ್ತಿ ಅವಕಾಶದ ಕೋರ್ಸ್‌ಗಳ ಮಾಹಿತಿ ಸರಕಾರಿ ಮತ್ತು ಎನ್.ಜಿ.ಓ ವಿದ್ಯಾರ್ಥಿ ವೇತನದ ಮಾಹಿತಿ ಕಾಲೇಜು ಮತ್ತು ಹಾಸ್ಟೇಲ್‌ಗಳ ಮಾಹಿತಿ ಕಮ್ಯೂನಿಟಿ ಸೆಂಟರ್ ಸ್ಕಾಲರ್ ಶಿಪ್

LEAVE A REPLY

Please enter your comment!
Please enter your name here