ಜೋಸ್ ಆಲುಕ್ಕಾಸ್ ಫೌಂಡೇಶನ್ ನಿಂದ ಸುಳ್ಯ ‘ಸಾಂದೀಪ್ ವಿಶೇಷ ಚೇತನ ಶಾಲೆಗೆ’  ಸಹಾಯಹಸ್ತದ ಚೆಕ್ ಹಸ್ತಾಂತರ

0

  • ಜೋಸ್ ಆಲುಕ್ಕಾಸ್ ಸಂಸ್ಥೆಯ ಕಾರ್ಯವೈಖರಿ ಇತರರಿಗೆ ಮಾದರಿ: ಮಠಂದೂರು
  • ಲಾಭವನ್ನು ನೋಡದೆ ಸಹಾಯ ಮಾಡುವ ಸಂಸ್ಥೆಗೆ ಸದಾ ಯಶಸ್ಸಿದೆ: ಸದಾಶಿವ

 

ಪುತ್ತೂರು: ಇದೊಂದು‌ ವಿಶಿಷ್ಟ ಕಾರ್ಯಕ್ರಮವಾಗಿದೆ‌. ಸಮಾಜದಲ್ಲಿರುವ ಅಶಕ್ತರ ಭಾಳಿಗೆ ದೀವಿಗೆಯಾಗುತ್ತಿರುವ ಜೋಸ್ ಆಲುಕ್ಕಾಸ್  ಫೌಂಡೇಶನ್ ನ ಪ್ರಯತ್ನ ಅಭಿನಂದನೀಯ. ಮಾನವೀಯತೆಯ ನೆಲೆಯಲ್ಲಿ ಸಮಾಜದಲ್ಲಿರುವಂತಹ ಅಸಾಯಕರನ್ನು ಗುರುತಿಸಿ ಅವರ ಸೇವೆ ಮಾಡುತ್ತಿರುವ ಎಂ.ಬಿ ಫೌಂಡೇಶನ್ ನ ಕಾರ್ಯ ಚಟುವಟಿಕೆ ಮೆಚ್ಚುವಂತದ್ದಾಗಿದೆ ಎಂದು ಶಾಸಕರಾದ ಸಂಜೀವ ಮಠಂದೂರುರವರು ಹೇಳಿದರು.

ಅವರು ಎ.9ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾನಭರಣ ಮಳಿಗೆ  ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಜೋಸ್ ಆಲುಕ್ಕಾಸ್ ಫೌಂಡೇಶನ್ ವತಿಯಿಂದ ಕೊಡಮಾಡುವ ‘ಆಶ್ರಮಗಳಿಗೆ ಸಾಂತ್ವನ’ ಯೋಜನೆಯ ಚೆಕ್ ವಿತರಣಾ ಸಮಾರಂಭವನ್ನು ದೀಪಬೆಳಗಿಸಿ ಉದ್ಘಾಟಿಸಿದರು.

ಎಂ.ಬಿ. ಫೌಂಟೇಶನ್ ಇನ್ನಷ್ಟು ಮಕ್ಕಳಿಗೆ ಬದುಕು ನೀಡಲಿ ಎನ್ನುವ ನಿಟ್ಟಿನಲ್ಲಿ ಜೋಸ್ ಆಲುಕ್ಕಾಸ್ ಸಂಸ್ಥೆಯು ತನ್ನ ಸಿ.ಎಸ್.ಆರ್. ಫಂಡ್ ನಿಂದ ೧,೧೨,೫೦೦ರೂಪಾಯಿಯ ಚೆಕ್ ಅನ್ನು ಹಸ್ತಾಂತರ ಮಾಡಿದೆ. ಆಲುಕ್ಕಾಸ್ ಸಂಸ್ಥೆ ಸುಳ್ಯದ ಗ್ರಾಮೀಣ ಭಾಗದಲ್ಲಿರುವ ವಿಕಲ ಚೇತನರಿಗೆ ಆಸರೆಯಾಗಿರುವ ಸಂಸ್ಥೆಯನ್ನು ಹುಡುಕಿಕೊಂಡು ಹೋಗಿ ಅವರಿಗೆ ಸಹಕಾರ ನೀಡಿರುವುದು ಒಂದು‌ ಮಾದರಿ ಕಾರ್ಯವಾಗಿದೆ ಎಂದರು. ಸರಕಾರದ ಜೊತೆಗೆ ಇಂತಹ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮುತುವರ್ಜಿ‌ವಹಿಸಿ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದಲ್ಲಿ ಅವರು ಕೂಡ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದರು.

ಸುಳ್ಯ ಎಂ.ಬಿ. ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ಸದಾಶಿವರವರು ಮಾತಮಾಡಿ ಕಳೆದ ಇಪ್ಪತ್ತೆರಡು ವರುಷಗಳಿಂದ ವಿಕಲಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಾವುಗಳು ಮಾಡುತ್ತಾ ಬಂದಿದ್ದೇವೆ. ಈವರೆಗೆ ಯಾವೊಬ್ಬನೂ ಸ್ವತಃ ಸಹಾಯಮಾಡಲು ಮುಂದೆ ಬಂದಿಲ್ಲ. ಆದರೆ ಪುತ್ತೂರಿನಲ್ಲಿರುವ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ಸ್ವ ಇಚ್ಚೆಯಿಂದ ನಮ್ಮನ್ನು ಗುರುತಿಸಿ ಸಹಾಯಮಾಡಿದೆ ಅವರಿಗೆ ನಾವು ಅಭಾರಿಯಾಗಿದ್ದೇವೆ. ನಾವ್ಯಾರೂ ಈ ಸಂಸ್ಥೆಯ ಗ್ರಾಹಕರಲ್ಲ. ನಮಗೂ ಇವರಿಗೂ ಯಾವುದೇ ಸಂಬಂದವಿಲ್ಲ. ಆದರೆ ನಾವು ಮಾಡುತ್ತಿರುವ ಕೆಲಸವನ್ನು ಕಂಡು ನಮ್ಮನ್ನು ಗುರುತಿಸಿ ನಮಗೆ ಸಹಾಯ ಮಾಡುವ ಮನಸ್ಸನ್ನು ಸಂಸ್ಥೆ ಮಾಡಿದೆ ಎಂದರೆ ಅವರ ಹೃದಯವಿಶಾಲತೆಯನ್ನು ಮೆಚ್ಚುವಂತದ್ದೇ. ಗ್ರಾಮಾಂತರ ಪ್ರದೇಶದಲ್ಲಿರುವ ಸಂಸ್ಥೆ ನಮ್ಮದಾಗಿದ್ದು, ನಮ್ಮಲ್ಲಿ ೮ ಅದ್ಯಾಪಕರು, ವಿಶೇಷ ಅದ್ಯಾಪಿಕೆಯರು, ಸಂಗೀತ, ಯೋಗ, ಫಿಸಿಯೋಥೆರಪಿ ಅದ್ಯಾಪಿಕೆಯರು, ಮಾನಸೀಕ ತಜ್ಞೆಯರು ಇದ್ದಾರೆ. ಇವರೊಂದಿಗೆ ಈ ಮಕ್ಕಳನ್ನು ಸಂಬಾಳಿಸಿಕೊಂಡು ೨೨ವರುಷ ಕಳೆದಿದ್ದೇವೆ. ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕಾಗಿ ಎಂ.ಆರ್.ಪಿ.ಎಲ್.,  ಎಂ.ಸಿ.ಎಫ್., ಇಂಡಿಯನ್ ಆಯಿಲ್ ಕಾರ್ಪೊರೇಷನ್, ಡಿ.ಎಸ್.ಎಫ್. ರವರಲ್ಲಿ‌ಸಹಾಯವನ್ನು ಕೇಳಿದ್ದೇವೆ ಆದರೆ ನಮಗೆ ಎಲ್ಲಿಯೂ ನಮಗೆ ಸ್ಪಂದನೆ ದೊರೆತಿಲ್ಲ‌. ಆದರೆ ಜೋಸ್ ಆಲುಕ್ಕಾಸ್ ಸಂಸ್ಥೆಯ ಸಿಬ್ಬಂದಿಗಳು ನಮ್ಮನ್ನು ಹುಡುಕಿಕೊಂಡು ಬಂದು ನಮ್ಮ ವಿಚಾರವನ್ನು ತಿಳಿದುಕೊಂಡು ಬಂದು ಮರುದಿನವೇ ನಮಗೆ ಫರ್ನೀಚರ್ ಖರೀದಿಗಾಗಿ ೧,೧೨,೫೦೦ರೂಪಾಯಿಯನ್ನು ಮಂಜೂರು ಮಾಡಿದ್ದಾರೆ. ವ್ಯಾಪಾರ ಸಂಸ್ಥೆಗಳು ಲಾಭದ ಲೆಕ್ಕಾಚಾರವನ್ನು ನೋಡಿಕೊಂಡು ಸಹಾಯಮಾಡುತ್ತದೆ. ಆದರೆ ಜೋಸ್ ಆಲುಕ್ಕಾಸ್ ಮಾತ್ರ ತದ್ವಿರುದ್ಧವಾಗಿ ಕೆಲಸ ನಿರ್ವಹಿಸುತ್ತಿದೆ. ಅದರ ಉದ್ದೇಶ ಕೇವಲ ಸಮಾಜ ಸೇವೆಯಾಗಿದೆ ಎನ್ನುವುದಕ್ಕೆ ನಮ್ಮನ್ನು ಹುಡುಕಿಕೊಂಡು ಬಂದು ಸಹಾಯ‌ಮಾಡಿರುವುದು ಒಂದು ಪ್ರತ್ಯಕ್ಷ ಸಾಕ್ಷಿಯಾಗಿದೆ.  ಇಂತಹ ಸಂಸ್ಥೆಗಳಿಗೆ ನಾವೆಲ್ಲರು ಸಹಕಾರ ನೀಡುವುದು ಅಗತ್ಯ ಎಂದರು.

ಸುಳ್ಯ ಎಂ.ಬಿ. ಫೌಂಡೇಶನ್ ನ  ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಸಾಂದೀಪ್ ವಿಶೇಷ ಚೇತನ ಶಾಲೆಗೆ’ ಅಗತ್ಯ ಸಾಮಾಗ್ರಿ ಖರೀದಿಗೆ ೧,೧೨,೫೦೦ರೂಪಾಯಿ ಮೌಲ್ಯದ ಚೆಕ್ ಅನ್ನು‌  ಶಾಸಕ‌‌ ಸಂಜೀವ ಮಠಂದೂರುರವರು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಎಂ.ಬಿ. ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ಸದಾಶಿವ ಹಾಗೂ ಅವರ ಪತ್ನಿ ಹರಿಣಿರವರನ್ನು ಸನ್ಮಾನಿಸಲಾಯಿತು.
ಜೋಸ್ ಆಲುಕ್ಕಾಸ್ ಸಂಸ್ಥೆಯ ಪುತ್ತೂರು ಶಾಖಾ ಮ್ಯಾನೇಜರ್ ರತೀಶ್  ಸಿ.ಪಿ ಹಾಗೂ ಸಹಾಯಕ ಮ್ಯಾನೇಜರ್ ಶಿಬು ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು‌. ಸಿಬ್ಬಂದಿ ಅಕ್ಷತ್ ಇಚ್ಲಂಪಾಡಿ ಸನ್ಮಾನ ಪತ್ರ ಓದಿದರು. ಮಂಗಳೂರು ಶಾಖಾ ಸಿಬ್ಬಂದಿ ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

10 ಸಾವಿರದಿಂದ 3ಕೋಟಿ ವರೆಗೆ

ಜೋಸ್ ಆಲುಕ್ಕಾಸ್ ಸಂಸ್ಥೆಯು ಹಲವಾರು ವರುಷಗಳಿಂದ ಸಮಾಜದಲ್ಲಿರುವ ಅಶಕ್ತರನ್ನು ಮೇಲಕ್ಕೆತ್ತುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. 10000ರೂಪಾಯಿಯಿಂದ ಆರಂಭಗೊಂಡ ಸಹಾಯಹಸ್ತ ಯೋಜನೆಯೂ ಇದೀಗ ಮೂರು ಕೋಟಿ ರೂಪಾಯಿಗೆ ತಲುಪಿದೆ. ಎ.9ರಂದು ಸಂಸ್ಥೆಯ  42 ಶಾಖೆಗಳಲ್ಲಿ ಏಕಕಾಲದಲ್ಲಿ  ಸಾಯಂಕಾಲ 4ಘಂಟೆಯಿಂದ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ವ್ಯಾಪಾರದಲ್ಲಿ ಸಂಸ್ಥೆಗೆ ಬಂದ ಲಾಭದ ಒಂದಂಶವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುವ ಕೆಲಸವನ್ನು ಹಿಂದಿನಿಂದಲೂ ಸಂಸ್ಥೆ ಮಾಡುತ್ತಾ ಬಂದಿದೆ. ಇದರಿಂದಾಗಿಯೇ ಸಂಸ್ಥೆ ಎಲ್ಲಾಕಡೆಗಳಲ್ಲಿಯೂ ಉತ್ತಮ ವ್ಯವಹಾರದೊಂದಿಗೆ ಯಶಸ್ಸು ಕಾಣುತ್ತಾ ಅಲ್ಪ ಸಮಯದಲ್ಲಿ ಜನರ ಮನಸ್ಸನ್ನು ಮುಟ್ಟುವಲ್ಲಿ ಸಫಲವಾಗಿದೆ. –  ರತೀಶ್ ಸಿ.ಪಿ. ವ್ಯವಸ್ಥಾಪಕರು ವ್ಯವಸ್ಥಾಪಕರು ಜೋಸ್ ಆಲುಕ್ಕಾಸ್ ಪುತ್ತೂರು ಶಾಖೆ

LEAVE A REPLY

Please enter your comment!
Please enter your name here