ಬಿ.ಎಸ್ಸಿ ಇಂಟಿರೀಯರ್ ಡಿಸೈನ್ ಸ್ವರ್ಣ ಪೊಸವಳಿಕೆಗೆ ಪ್ರಥಮ ರ‍್ಯಾಂಕ್

0

ರಾಮಕುಂಜ: 2021ನೇ ಸಾಲಿನ ಬಿ.ಎಸ್ಸಿ ಇಂಟಿರೀಯರ್ ಡಿಸೈನ್‌ನಲ್ಲಿ ಮಂಗಳೂರು ಶ್ರೀನಿವಾಸ ಯುನಿವರ್ಸಿಟಿಯ ವಿದ್ಯಾರ್ಥಿನಿ ಸ್ವರ್ಣ ಪೊಸವಳಿಕೆ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇವರು ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೌಢ, ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದುಕೊಂಡಿದ್ದಾರೆ. ಪ್ರಸ್ತುತ ಉಪ್ಪಿನಂಗಡಿಯಲ್ಲಿ ಸ್ವರ್ಣ ಇಂಟೀರಿಯರ್ ವರ್ಲ್ಡ್ ಕಚೇರಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕೆಮ್ಮಾರ ’ಶ್ರೀ ಮಂಗಳ ’ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಕುಶಾಲಪ್ಪ ಗೌಡ ಹಾಗೂ ರಾಮಕುಂಜ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯ ಸಹಶಿಕ್ಷಕಿ ಶ್ರೀಮತಿ ಪುಷ್ಪಾವತಿ ಎಂ.,ರವರು ಪುತ್ರಿ.

LEAVE A REPLY

Please enter your comment!
Please enter your name here