ಉರಿಮಜಲು ಮೂಲಮನೆಯಲ್ಲಿ ‘ಕಬ್ಬಿನ ಹಿತ್ತಿಲು ಕಲ್ಪವೃಕ್ಷ’ ಪುಸ್ತಕ ಬಿಡುಗಡೆ

0

  • ಸಾಮರಸ್ಯದ ಸಮಾಜ ನಿರ್ಮಾಣ ಮಾಡುವಲ್ಲಿ ಉರಿಮಜಲು ಕುಟುಂಬ ಪ್ರಯತ್ನ ಅಪಾರ: ದು. ಗು. ಲಕ್ಷಣ

ವಿಟ್ಲ:  ಕಬ್ಬಿನ ಹಿತ್ತಿಲು ಕುಟುಂಬ ಚರಿತ್ರೆಯನ್ನೊಳಗೊಂಡ ‘ಕಬ್ಬಿನ ಹಿತ್ತಿಲು ಕಲ್ಪವೃಕ್ಷ’ ಪುಸ್ತಕ ಬಿಡುಗಡೆ ಸಮಾರಂಭ  ಎ.೧೧ರಂದು ಇಡ್ಕಿದು ಗ್ರಾಮದ ಉರಿಮಜಲು ಮೂಲಮನೆಯಲ್ಲಿ ನಡೆಯಿತು. ಉರಿಮಜಲು ಕುಟುಂಬದ ಕುಲಪುರೋಹಿತರಾದ ವೇದಮೂರ್ತಿ  ಗೋಪಾಲಕೃಷ್ಣ ಭಟ್ಟ್ ನೂಜಿರವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ಹೊಸದಿಗಂತ ಪತ್ರಿಕೆಯ ನಿರ್ದೇಶಕರಾದ ದು. ಗು. ಲಕ್ಷಣರವರು ಕೃತಿಬಿಡುಗಡೆ ಮಾಡಿ ಮಾತನಾಡಿ, ಒಬ್ಬ ವ್ಯಕ್ತಿ ಸಮಾಜಕ್ಕೆ ಸ್ಮರಣೀಯ ಕೆಲಸ ಮಾಡಿದರೆ ಆ ವ್ಯಕ್ತಿಯ ಹೆಸರು ಸಮಾಜದಲ್ಲಿ ಅಮರವಾಗಿ ಉಳಿಯಲು ಸಾಧ್ಯ. ‘ಕಬ್ಬಿನ ಹಿತ್ತಿಲು ಕಲ್ಪವೃಕ್ಷ’ ಪುಸ್ತಕದಲ್ಲಿ ಎಲ್ಲಾ ಕವಲುಗಳ ವಿಚಾರವನ್ನು  ಅಡಕ ಮಾಡಲಾಗಿದೆ. ಕಬ್ಬಿನ ಹಿತ್ತಿಲು ಕುಟುಂಬದ ಇತಿಹಾಸ ನೆನಪಿಟ್ಟುಕೊಳ್ಳುವಂತದ್ದಾಗಿದೆ‌. ಹಲವಾರು ಸಾಹಸಗಳನ್ನು ಮಾಡಿದ ಕುಟುಂಬವಿದು. ಕುಟುಂಬದ ಇತಿಹಾಸವನ್ನು ದಾಖಲು ಮಾಡುವುದು ಸುಲಭದ ಮಾತಲ್ಲ‌. ಕುಟುಂಬದ ಹಿರಿಯರಾದ ತಿಮ್ಮಪ್ಪಯ್ಯರವರು ಪ್ರಾತಸ್ಮರಣೀಯರು. ಹಿರಿಯರು ಬಾಳಿ ಬದುಕಿದ್ದು ಬದುಕಿನ ನಿರ್ವಹಣೆಗಾಗಿ. ಹಿರಿಯರು ಸಮಾಜದ ಏಳಿಗೆಗೆ ಕಷ್ಟ ಪಟ್ಟ ಹೆಜ್ಜೆಗಳು ಈ ಪುಸ್ತಕದಲ್ಲಿದೆ. ಯಾರೂ ಅರಿಯದ ಆ  ಇತಿಹಾಸವನ್ನು ತಿಮ್ಮಪ್ಪಯ್ಯನವರು ಬರೆದಿಟ್ಟು ಹೋದರು‌. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಯಾದವರಲ್ಲಿ ೪೦ಮಂದಿ ಉರಿಮಜಲು ಕುಟುಂಬಸ್ಥರಾಗಿದ್ದರು.

ಸಮಾಜಕ್ಕಾಗಿ ಸವಿದೆಯಾಗಿ ಉರಿದು ಹೋದ ಕುಟುಂಬವೆಂದರೆ ಅದು ಉರಿಮಜಲು ಕುಟುಂಬ.

ಸಾಮರಸ್ಯದ ಸಮಾಜ ನಿರ್ಮಾಣ ಮಾಡುವಲ್ಲಿ ಉರಿಮಜಲು ಕುಟುಂಬ ಪ್ರಯತ್ನ ಅಪಾರ. ಸಮಾಜಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು ಈ ಕುಟುಂಭದ ಹಿರಿಯರು. ದೇಶದ ಭವಿಷ್ಯದ ಹಿನ್ನೆಲೆ ಈ ಕುಟುಂಬಕ್ಕಿತ್ತು. ಒಂದು ಕುಟುಂಬದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಈ ಪುಸ್ತಕದಿಂದ ಆಗಿದೆ. ಸಮಾಜಕ್ಕೆ ಪ್ರೇರಣೆ ನಮ್ಮ ಹಿರಿಯರ ಜೀವನ. ಹಿರಿಯರ ನಡೆ ಮಾದರಿ ಎಂದರು.

“ಕಬ್ಬಿನ ಹಿತ್ತಿಲು ಕಲ್ಪವೃಕ್ಷ” ಗ್ರಂಥದ ಸಂಪಾದಕರಾದ  ಡಾ. ಶ್ರೀಧರ ಎಚ್. ಜಿ. ಮುಂಡಿಗೆಹಳ್ಳ ರವರು ಪುಸ್ತಕದ ಕುರಿತಾಗಿ ಮಾತನಾಡಿ‌ ಕೈಫಿಯತ್ ಸಾಲಿಗೆ ಸೇರಲು ಈ ಕೃತಿ ಅರ್ಹವಾಗಿದೆ. ಚರಿತ್ರೆಗೆ ಪೂರಕವಾದ ವಿಚಾರ ಈ ಕೃತಿಯಲ್ಲಿದೆ‌. ಇಡೀ ಈ ಪರಿಸರದ ಸಂಸ್ಕೃತಿ ಈ ಪುಸ್ತಕದಲ್ಲಿ ಅಡಕವಾಗಿದೆ. ಒಂದು ಪ್ರದೇಶದ ಸಾಂಸ್ಕೃತಿಕ ಚಿತ್ರಣ ಇದರಲ್ಲಿದೆ. ಇಡೀ ಕುಟುಂಬದ ಸಹಕಾರದಿಂದ ಪುಸ್ತಕ ಹೊರತರಲು ಸಾಧ್ಯವಾಗಿದೆ ಎಂದರು.  ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲರವರು ಸಂದರ್ಭೋಚಿತವಾಗಿ‌ ಮಾತನಾಡಿದರು. ಮನೆಯ ಹಿರಿಯರಾದ  ಗೋವಿಂದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ  ಸಂಪಾದಕರಾದ  ಡಾ. ಶ್ರೀಧರ ಎಚ್. ಜಿ. ಮುಂಡಿಗೆಹಳ್ಳ ಹಾಗೂ ಅವರ ಧರ್ಮಪತ್ನಿ, ಸಂಪಾದಕೀಯ ಮಂಡಳಿಯಲ್ಲಿ ಕೆಲಸ ನಿರ್ವಹಿಸಿದ  ರಾಮಕೃಷ್ಣ ಭಟ್ ಚೂಂತಾರು, ಸವಿತಾ ಎಸ್ ಭಟ್ ಅಡ್ವಾಯಿರವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಕೆ.ಎಸ್ ಉರಿಮಜಲು ಸ್ವಾಗತಿಸಿದರು.  ಸವಿತಾ ಎಸ್. ಭಟ್ ಅಡ್ವಾಯಿರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈಶ್ವರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ಭಟ್ ಚೂಂತೂರು ವಂದಿಸಿದರು.

LEAVE A REPLY

Please enter your comment!
Please enter your name here