ಪುತ್ತೂರು ಜಾತ್ರಾ ಗದ್ದೆಯಲ್ಲಿ ‘ಜಾಗೋ ಹಿಂದುಸ್ಥಾನಿ’

0

  • ಭಾರತ ದೇಶದಲ್ಲಿ ಭಾರತೀಯರಿಗೆ ಮಾತ್ರ ಅವಕಾಶ-ಕೇಶವಪ್ರಸಾದ್ ಮುಳಿಯ
  • ಏಕತೆಗಾಗಿ ಕ್ಷಣಕ್ಷಣಕ್ಕೂ ಜಾಗೃತಿ ಅಗತ್ಯ-ಡಾ.ಕೆ.ಎಂ.ಕೃಷ್ಣ ಭಟ್
  • ಸಂಸ್ಕಾರ ಉಳಿಯಲು ದೇವಳದ ದೊಡ್ಡ ಪ್ರಯತ್ನ-ಚಂದ್ರಶೇಖರ್ ಶೆಟ್ಟಿ
  • ಕಲಾ ಕ್ಷೇತ್ರದ ಮೂಲಕವೇ ಸಮಾಜದ ಜಾಗೃತಿ-ಶ್ರೀಪತಿ ಪಿ

 

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ದೇವಸ್ಥಾನದ ಎದುರುಗದ್ದೆಯಲ್ಲಿರುವ ಶ್ರೀ ಪಾರ್ವತಿ ವೇದಿಕೆಯಲ್ಲಿ 10 ದಿನಗಳ ಕಾಲ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎ.11ರಂದು ಸಂಜೆ ಸಂಸ್ಕಾರ ಭಾರತಿ ಮತ್ತು ರೇಡಿಯೋ ಪಾಂಚಜನ್ಯ ಸಂಯೋಜನೆಯಲ್ಲಿ ಜಾಗೋ ಹಿಂದುಸ್ಥಾನೀ ಕಾರ್ಯಕ್ರಮ ನಡೆಯಿತು.

ದೇಶದಾದ್ಯಂತ 3200, ಅಮೇರಿಕದಲ್ಲಿ 27ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಸಾದರಪಡಿಸಿರುವ ಅದ್ಭುತ ವಾದ್ಯವೃಂದಗಳನ್ನೊಳಗೊಂಡ ಅಮೋಘ ಕಾರ್ಯಕ್ರಮವಾಗಿ ಜನಮನದಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವ ‘ಜಾಗೋ ಹಿಂದುಸ್ಥಾನಿ’ ಯಶಸ್ವಿಯಾಗಿ ನಡೆಯಿತು.  ಕಾರ್ಯಕ್ರಮದ ಆರಂಭದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.



ಭಾರತ ದೇಶದಲ್ಲಿ ಭಾರತೀಯರಿಗೆ ಮಾತ್ರ ಅವಕಾಶ: ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ಇವತ್ತಿನ ವ್ಯವಸ್ಥೆಯಲ್ಲಿ ಹಿಜಾಬ್, ಹಲಾಲ್ ಮೂಲಕ ದೇಶದ ಸಂಸ್ಕೃತಿಗೆ ಧಕ್ಕೆ ತರುವ ಸಂದರ್ಭದಲ್ಲಿ ಭಾರತವನ್ನು ಮತ್ತೆ ಒಂದು ಮಾಡಬೇಕಾಗಿದೆ.ಈ ನಿಟ್ಟಿನಲ್ಲಿ ಭಾರತೀಯರು ಮಾತ್ರ ಭಾರತ ದೇಶದಲ್ಲಿ ಇರಬೇಕು.ಬೇರೆ ಯಾರಿಗೂ ಅವಕಾಶವಿಲ್ಲ.ನಾವೆಲ್ಲ ಭಾರತ ಮಾತೆಯ ಮಕ್ಕಳಾಗಿರಬೇಕೆಂದರು.

ಏಕತೆಗಾಗಿ ಕ್ಷಣಕ್ಷಣಕ್ಕೂ ಜಾಗೃತಿ ಅಗತ್ಯ: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಮ್.ಕೃಷ್ಣ ಭಟ್ ಅವರು ಮಾತನಾಡಿ ನಮ್ಮ ದೇಶದಲ್ಲಿ ವೈವಿಧ್ಯಮಯ ಸಂಸ್ಕೃತಿ ಇದ್ದರೂ ವಿವಿಧತೆಯಲ್ಲಿ ಏಕತೆ ಇದ್ದದ್ದರಿಂದ ಜಗತ್ತಿನ ಪ್ರಭಾವಿ ಶಕ್ತಿಯಾಗಿ ನಮ್ಮ ದೇಶವಿದೆ.ವಿವಿಧತೆಯಲ್ಲಿ ಏಕತೆ ಇರಬೇಕಾದರೆ ಏಕತೆಯ ತಳಹದಿ ಸಂಸ್ಕಾರ ನಮ್ಮಲ್ಲಿ ಇರಬೇಕು.ಏಕತೆ ಇದ್ದಾಗ ದೇಶ ಬಲಿಷ್ಠವಾಗಿ ಬೆಳೆಯುತ್ತದೆ.ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಇಂತಹ ಜಾಗೋ ಹಿಂದೂಸ್ಥಾನಿ ಕಾರ್ಯಕ್ರಮ ಅಗತ್ಯ ಎಂದರು.

ಸಂಸ್ಕಾರ ಉಳಿಯಲು ದೇವಳದ ದೊಡ್ಡ ಪ್ರಯತ್ನ: ಸಂಸ್ಕಾರ ಭಾರತೀಯ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿಯವರು ಮಾತನಾಡಿ ಇವತ್ತು ಸಂಸ್ಕೃತಿ ಉಳಿಯಬೇಕಾದರೆ ಯಕ್ಷಗಾನ, ಕುಣಿತ ಭಜನೆ, ಭರತನಾಟ್ಯಗಳು ಪ್ರತಿ ಹಳ್ಳಿಗಳಲ್ಲೂ ನಿರಂತರ ನಡೆಯಬೇಕು.ಈ ಕುರಿತು ದೊಡ್ಡ ಆಂದೋಲನ ಆಗಬೇಕು. ಮಹಾಲಿಂಗೇಶ್ವರ ದೇವಸ್ಥಾನದಿಂದ ಸಂಸ್ಕಾರ ಉಳಿಸುವ ದೊಡ್ಡ ಪ್ರಯತ್ನ ನಡೆದಿದೆ. ಅದರಲ್ಲೂ ಸಂಸ್ಕಾರ ಬೆಳೆಸುವಲ್ಲಿ ಪುತ್ತೂರು ಸಂಸ್ಕಾರ ಭಾರತಿ ಮುಂಚೂಣಿಯಲ್ಲಿದೆ ಎಂದರು.

ಕಲಾ ಕ್ಷೇತ್ರದ ಮೂಲಕವೇ ಸಮಾಜದ ಜಾಗೃತಿ: ಸಂಸ್ಕಾರ ಭಾರತಿ ಪ್ರಾಂತ ಸಹಕಾರ್ಯದರ್ಶಿ ಶ್ರೀಪತಿ ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕಾರ ಭಾರತಿಯ ಚಿಂತನೆಯಂತೆ ದೇಶದ ಉಳಿವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಹಲವು ಕೆಲಸ ಮಾಡಿದ್ದಾರೆ.ಈ ನಿಟ್ಟಿನಲ್ಲಿ ಕಲಾ ಕ್ಷೇತ್ರದ ಮೂಲಕವೇ ಸಮಾಜವನ್ನು ಜಾಗೃತಗೊಳಿಸಲು ಕಲಾವಿದರ ಸಂಘಟನೆ ಆರಂಭಗೊಂಡಿತ್ತು ಎಂದರು. ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿ ರಾಮಚಂದ್ರ, ಸಂಸ್ಕಾರ ಭಾರತಿಯ ಜಿಲ್ಲಾ ಉಪಾಧ್ಯಕ್ಷೆ ರೂಪಲೇಖ ಪಾಣಾಜೆ, ರೇಡಿಯೋ ಪಾಂಚಜನ್ಯದ ಅಧ್ಯಕ್ಷರು, ಸಂಸ್ಕಾರ ಭಾರತಿ ಸದಸ್ಯೆಯೂ ಆಗಿರುವ ಕೃಷ್ಣವೇಣಿ ಪ್ರಸಾದ್ ಮುಳಿಯ, ಕಾರ್ಯದರ್ಶಿ ಪದ್ಮಾ ಕೆ.ಆರ್.ಆಚಾರ್ಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಐತ್ತಪ್ಪ ನಾಯ್ಕ್, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರನಾಥ ಕೊಟ್ಟರಿ, ಜಿಲ್ಲಾ ಸಂಯೋಜಕ ವಿದ್ವಾನ್ ದೀಪಕ್ ಕುಮಾರ್, ಜಾಗೋ ಹಿಂದೂಸ್ಥಾನಿ ಕಾರ್ಯಕ್ರಮದ ಸ್ವರ್‌ನಿಧಿ ತಂಡದ ನಿರ್ದೇಶಕ ಶುರೇಶ್ ಶುಕ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಸ್ಕಾರ ಭಾರತಿಯ ಸದಸ್ಯರು ಜಾಗೋ ಹಿಂದೂಸ್ಥಾನಿ ಕಾರ್ಯಕ್ರಮದ ಕಲಾವಿದರನ್ನು ಗೌರವಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಸಂಸ್ಕಾರ ಭಾರತಿ ಅವರಿಂದ ಧ್ಯೇಯ ಗೀತೆ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅವಿನಾಶ್ ಕೊಡಂಕೇರಿ ಕಾರ್ಯಕ್ರಮ ನಿರೂಪಿಸಿದರು.ಜಾಗೋ ಹಿಂದೂಸ್ಥಾನಿ ಕಾರ್ಯಕ್ರಮದ ಆರಂಭದಲ್ಲಿ ಪದ್ಮಾ ಕೆ ಆರ್ ಆಚಾರ್ಯ ಅವರ ಸಂಯೋಜನೆಯಲ್ಲಿ ಕಾವ್ಯಶ್ರೀ ಅಜೇರು ಅವರ ಭಾಗವತಿಕೆಯಲ್ಲಿ ಧೀ ಶಕ್ತಿ ಯಕ್ಷಗಾನ ಬಳಗದವರಿಂದ ಮಕ್ಕಳ ಯಕ್ಷಗಾನ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here