ರಾಮಕುಂಜ: ಎನ್.ಟಿ.ಎಸ್.ಇ. ಗೈಡ್ಸ್, ಕ್ರೀಡಾ ತರಬೇತಿ ಶಿಬಿರ

0


ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎ.12ರಿಂದ 16 ರ ತನಕ ನಡೆಯಲಿರುವ ಎನ್.ಟಿ.ಎಸ್.ಇ. ಗೈಡ್ಸ್ ಹಾಗೂ ಕ್ರೀಡಾ ತರಬೇತಿ ಶಿಬಿರದ ಉದ್ಘಾಟನೆ ಎ.12ರಂದು ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಿವೃತ್ತ ಪ್ರಾಂಶುಪಾಲರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಎಸ್.ಎ.ಭಟ್‌ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎನ್.ಟಿ.ಎಸ್.ಇ ಪರೀಕ್ಷೆಯು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಳಹದಿ. ಎನ್.ಟಿ.ಎಸ್.ಇ ಪರೀಕ್ಷೆಗೆ ತಯಾರಾಗುವುದರಿಂದ ಬುದ್ಧಿಶಕ್ತಿ ವಿಕಾಸವಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಇಟ್ಟುಕೊಂಡು ಸತತ ಪ್ರಯತ್ನದಿಂದ ಆ ಗುರಿಯನ್ನು ತಲುಪಬೇಕು” ಎಂದು ಹೇಳಿ ಶುಭ ಹಾರೈಸಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶರತ್‌ರವರು ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಶಿಬಿರವನ್ನು ಉತ್ತಮವಾಗಿ ಸದುಪಯೋಗ ಪಡೆದುಕೊಂಡು ನಿರಂತರ ಪ್ರಯತ್ನದಿಂದ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಹೇಳಿದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಕಬಡ್ಡಿ ತರಬೇತುದಾರ ಸುಜಿತ್ ಕುಮಾರ್ ಸಿ., ಹಾಗೂ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಸ್ಟೇಟ್ ಯೂತ್ ಫಾರಂ ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಇದರ ಸದಸ್ಯರಾಗಿರುವ ಚೇತನ್‌ರವರು ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲಾ ಶಿಕ್ಷಕಿ ರಶ್ಮಿ ಕೆ., ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ವಂದಿಸಿದರು. ಶಿಕ್ಷಕಿ ಭವ್ಯ ಎಸ್., ನಿರೂಪಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here