ಕುದ್ಮಾರು ಶ್ರೀ ಶಿರಾಡಿ ರಾಜನ್ ದೈವಸ್ಥಾನ ಕಟ್ಟೆಯಲ್ಲಿ ಅನುಜ್ಞಾ ಕಲಶ

0

ಕಾಣಿಯೂರು: ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರಿ ಶಿರಾಡಿ ರಾಜನ್ ದೈವಸ್ಥಾನಕ್ಕೆ ಸಂಬಂಧಪಟ್ಟ ದೈಪಿಲ ದ್ವಾರದ ಬಳಿ ಕಟ್ಟತ್ತಾರು ಎಂಬಲ್ಲಿಯ ಕಟ್ಟೆಯಲ್ಲಿ ಕಟ್ಟೆ ನಿರ್ಮಾಣದ ಜೀರ್ಣೋದ್ಧಾರದ ಪ್ರಯುಕ್ತ ಕ್ಷೇತ್ರದಲ್ಲಿ ಅನುಜ್ಞಾ ಕಲಶವು ಎ. 16ರಂದು ನಡೆಯಿತು.

 

ವೇದಮೂರ್ತಿ ಕೇಶವ ಭಟ್ ಕೇಕಣಾಜೆ ಅವರು ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಕುದ್ಮಾರು ಅನ್ಯಾಡಿ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ. ಕೆಡೆಂಜಿ, ಅನ್ಯಾಡಿ ಬಾರಿಕೆ ಕುಟುಂಬದ ಹಿರಿಯರಾದ ಪದ್ಮಯ್ಯ ಗೌಡ ಅನ್ಯಾಡಿ, ಪದ್ಮಯ್ಯ ಗೌಡ ಕೆಡೆಂಜಿ, ಮೋನಪ್ಪ ಗೌಡ ಅನ್ಯಾಡಿ, ದೇವಣ್ಣ ಗೌಡ ಅನ್ಯಾಡಿ, ಅನ್ಯಾಡಿ ಬಾರಿಕೆ ಕುಟುಂಬದ ಅಧ್ಯಕ್ಷ ಯೋಗೀಶ್.ಕೆ. ಕೆಡೆಂಜಿ, ಕುದ್ಮಾರು ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಆನಂದ ಅನ್ಯಾಡಿ, ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಸದಸ್ಯರಾದ ರೇವತಿ ವಾಲ್ತಾಜೆ ಕುದ್ಮಾರು, ಜನಾರ್ದನ ಗೌಡ ಕೂರ, ಚೆನ್ನಪ್ಪ ಗೌಡ ಅನ್ಯಾಡಿ, ನಾರ್ಣಪ್ಪ ಗೌಡ ಕೆಡೆಂಜಿ, ದಯಾನಂದ ಅನ್ಯಾಡಿ, ಸತೀಶ್ ಅನ್ಯಾಡಿ, ಪೂವಣಿ ಗೌಡ ಅನ್ಯಾಡಿ, ಅಶೋಕ್ ಅನ್ಯಾಡಿ, ಜಯರಾಮ ಅನ್ಯಾಡಿ, ನಾರ್ಣಪ್ಪ ಗೌಡ ಅನ್ಯಾಡಿ, ಬೆಳಿಯಪ್ಪ ಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here