ಭರತಪುರ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನಿಂದ ಸಾಮೂಹಿಕ ಹನುಮಯಜ್ಞ,

0

  • ಹನುಮಾನ್ ಕಲ್ಪೋಕ್ತ ಪೂಜೆ, ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ


ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ಭರತಪುರ ಇದರ ಅಂಗಸಂಸ್ಥೆ ಧ್ಯಾನಸ್ಥ ಶ್ರೀ ಹನುಮಾನ್ ಸಾಂತ್ವನ ಸೇವಾ ಮಂದಿರ ಸಮಿತಿ ಇದರ ವತಿಯಿಂದ ಹನುಮ ಜಯಂತಿಯ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಹನುಮಯಜ್ಞ ಮತ್ತು ಹನುಮಾನ್ ಕಲ್ಪೋಕ್ತ ಪೂಜೆ ಹಾಗೂ ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ಎ.16ರಂದು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದಲ್ಲಿ ನಡೆಯಿತು.

ವೇ.ಮೂ. ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿ ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯಹೋಮ, ಸಾಮೂಹಿಕ ಹನುಮಯಜ್ಞ, ಹನುಮಾನ್ ಕಲ್ಪೋಕ್ತ ಪೂಜೆ, ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ನಡೆದು ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

`ಒಳಿತು ಮಾಡು ಮನುಷ್ಯ’ ಸಂಘಟನೆಯ 5ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ 13ನೇ ಯೋಜನೆಯಾಗಿ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ ಆಹಾರ ಸಾಮಾಗ್ರಿ ವಿತರಣಾ ಕಾರ್ಯಕ್ರಮ ವಿತರಿಸಲಾಯಿತು.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಚೇತನ್ ಕುಮಾರ್, ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಸಂಚಾಲಕ ಕಲಾವಿದ ಕೃಷ್ಣಪ್ಪ, ಕಾರ್ಯದರ್ಶಿ ಮೋಹನ್ ಸಿಂಹವನ, ಕೋಶಾಧಿಕಾರಿ ವಾಸಂತಿಶೀಲಾ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here