ಬೆಳ್ಳಿಪ್ಪಾಡಿ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ಶಿಬಿರ

0

  • ಕಂಪ್ಯೂಟರ್ ಶಿಕ್ಷಣ ಇಂದು ದೈನಂದಿನ ಜೀವನದ ಭಾಗವಾಗಿದೆ – ರಮೇಶ್ ಉಳಯ

ಪುತ್ತೂರು: ಕಂಪ್ಯೂಟರ್ ಶಿಕ್ಷಣ ಇಂದು ದೈನಂದಿನ ಜೀವನದ ಭಾಗವಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಮೇಶ್ ಉಳಯ ಹೇಳಿದರು.

 

ಅವರು ಬೆಳ್ಳಿಪ್ಪಾಡಿ ಸರಕಾರಿ ಶಾಲೆಯಲ್ಲಿ ನಡೆಯುತ್ತಿರುವ ಕಂಪ್ಯೂಟರ್ ತರಬೇತಿಯ ಮಕ್ಕಳ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಂಪ್ಯೂಟರ್ ಮತ್ತು ಇಂಗ್ಲಿಷ್ ಶಿಕ್ಷಣ ಇಂದಿನ ಬಹು ಅಗತ್ಯಗಳಲ್ಲಿ ಒಂದು, ಇವೆರಡೂ ಸ್ವತಂತ್ರವಾಗಿ ಕಲಿಯಬಲ್ಲ ವಿಷಯಗಳು. ಬಾಲ್ಯದಲ್ಲಿ ಕಲಿಕೆಯ ಪ್ರೇರಣೆ. ಬಾಲ್ಯದಲ್ಲೇ ಈ ಕಲಿಕೆಯ ಪ್ರೇರಣೆ ನೀಡುತ್ತಿರುವುದು ವಂದನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭವ್ಯ ವಿ.ಶೆಟ್ಟಿ ಮಕ್ಕಳಿಗೆ ಒಂದು ಶಾಲೆಯಲ್ಲಿ ನೀಡಬಹುದಾದ ಎಲ್ಲಾ ಅವಕಾಶಗಳನ್ನು ನೀಡಲು ನಾವು ಸದಾ ಪ್ರಯತ್ನಿಸುತ್ತೇವೆ ಅಂತಹ ಪ್ರಯತ್ನಗಳಲ್ಲಿ ಈ ತರಬೇತಿ ಶಿಬಿರ ಒಂದು ಎಂದರು. ಶಾಲಾ ಮುಖ್ಯಗುರು ಯಶೋದ ಎನ್.ಎಂ ಮಾತನಾಡಿ ಮಕ್ಕಳಿಗೆ ಅವಕಾಶ ನೀಡುವುದು ಶಿಕ್ಷಣದ ಮೊದಲ ಕರ್ತವ್ಯ ಈ ಮನಸ್ಸಿನಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ರಮ್ಯ ಬೆಳ್ಳಿಪ್ಪಾಡಿ, ರಮ್ಯ ಶೆಟ್ಟಿ ವೇದಿಕೆಯಲ್ಲಿದ್ದರು. ತರಬೇತಿ ಶಿಬಿರವು ೬,೭,೮ನೇ ತರಗತಿ ಮಕ್ಕಳಿಗೆ ೫ ದಿನಗಳ ಕಾಲ ನಡೆಯಲಿದೆ. ಶಾಲಾ ಮುಖ್ಯಗುರು ಯಶೋದ ಎನ್.ಎಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here