ಕೂಡುರಸ್ತೆ ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ವತಿಯಿಂದ ಬಾತಿಷಾ ಸುಲ್ತಾನ್ ಅನುಸ್ಮರಣೆ, ಬೃಹತ್ ಇಫ್ತಾರ್ ಸಂಗಮ

0

ಪುತ್ತೂರು: ಸರ್ವೆ ಗ್ರಾಮದ ಕೂಡುರಸ್ತೆ ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಇದರ ವತಿಯಿಂದ ಬಾತಿಷಾ ಸುಲ್ತಾನ್ ಅನುಸ್ಮರಣೆ ಹಾಗೂ ಇಫ್ತಾರ್ ಕೂಟ ಎ.17ರಂದು ಕೂಡುರಸ್ತೆ ಮದ್ರಸ ವಠಾರದಲ್ಲಿ ನಡೆಯಿತು. ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುರಸ್ತೆ ಮಸೀದಿಯ ಗೌರವಾದ್ಯಕ್ಷ ಮಾಹಿನ್ ಹಾಜಿ ಬಾಳಾಯ ವಹಿಸಿದ್ದರು.

 


ಕೂಡುರಸ್ತೆ ಮಸೀದಿ ಖತೀಬ್ ಇಬ್ರಾಹಿಂ ಫೈಝಿ, ರೆಂಜಲಾಡಿ ಮಸೀದಿ ಖತೀಬ್ ರಫೀಕ್ ಫೈಝಿ, ಯಾಕೂಬ್ ದಾರಿಮಿ ಸವಣೂರು ಮೊದಲಾದವರು ಅನುಸ್ಮರಣಾ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಭಾರ ಖತೀಬ್ ಅಬ್ದುಲ್ ಜಲೀಲ್ ದಾರಿಮಿ, ಕೂಡುರಸ್ತೆ ಮಸೀದಿ ಅಧ್ಯಕ್ಷ ಉಮ್ಮರ್ ಅಝ್ಹರಿ, ಮಾಜಿ ಅದ್ಯಕ್ಷ ಪಿ.ಕೆ ಮಹಮ್ಮದ್, ಆರ್.ವೈ.ಎಫ್ ಅದ್ಯಕ್ಷ ಮಜೀದ್ ಬಾಳಾಯ, ಉಮ್ಮರ್ ಮುಸ್ಲಿಯಾರ್ ಸಾಗು, ಇಬ್ರಾಹಿಂ ಮುಸ್ಲಿಯಾರ್, ಮಹಮ್ಮದ್ ಇಕ್ಬಾಲ್ ಮುಸ್ಲಿಯಾರ್, ಅಬೂಬಕರ್ ಮುಸ್ಲಿಯಾರ್ ರೆಂಜಲಾಡಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಕೋಶಾಧಿಕಾರಿ ಹನೀಫ್ ಕೂಡುರಸ್ತೆ ಉಪಸ್ಥಿತರಿದ್ದರು.

ಬೃಹತ್ ಇಫ್ತಾರ್ ಸಂಗಮ:
ನಂತರ ಇಫ್ತಾರ್ ಸಂಗಮ ನಡೆಯಿತು. ಕೂಡುರಸ್ತೆ ಜಮಾಅತ್ ಹಾಗೂ ನೆರೆಯ ಜಮಾಅತ್‌ಗಳಿಂದ ನೂರಾರು ಮಂದಿ ಭಾಗವಹಿಸಿದ್ದರು. ಜಮಾಅತ್ ಉಪಾಧ್ಯಕ್ಷ ಉಮ್ಮರ್ ಬಾಳಾಯ, ಮುಂಡೂರು ಮಸೀದಿ ಅಧ್ಯಕ್ಷ ಯಾಕೂಬ್ ಮುಲಾರ್, ಯಂಗ್‌ಮೆನ್ಸ್ ಪ್ರಮುಖರಾದ ಇಬ್ರಾಹಿಂ ಅಜ್ಜಿಕಲ್ಲು, ಶರೀಫ್ ಮಜಲುಗದ್ದೆ, ಹಾರಿಸ್ ಕೂಡುರಸ್ತೆ, ಕರೀಂ ಅಜ್ಜಿಕಟ್ಟೆ, ಅಝರುದ್ದೀನ್, ಹಮೀದ್ ಕೂಡುರಸ್ತೆ, ಹಂಝ ಕೂಡುರಸ್ತೆ ಉಪಸ್ಥಿತರಿದ್ದರು.

ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನೌಫಲ್ ಕೂಡುರಸ್ತೆ, ಪ್ರಧಾನ ಕಾರ್ಯದರ್ಶಿ ಸಾದಿಕ್ ಬಾಳಾಯ, ಕೋಶಾಧಿಕಾರಿ ನಾಸಿರ್ ಅಜ್ಜಿಕಲ್ಲು, ಪ್ರಮುಖರಾದ ನೌಫಲ್ ಅಜ್ಜಿಕಲ್ಲು, ಆರಿಫ್ ಕೂಡುರಸ್ತೆ, ಅನ್ಸಾರ್ ಬಾಳಾಯ, ಸಫ್ವಾನ್ ಬಾಳಾಯ, ಆಶಿಕ್ ಅಜ್ಜಿಕಲ್ಲು , ತಮೀಮ್ ಕೂಡುರಸ್ತೆ, ಶೌಕತ್ ಬಾಳಾಯ, ಲತೀಫ್ ಕೂಡುರಸ್ತೆ, ಅನೀಸ್ ಪಿ.ಕೆ, ರಹೀಂ ಕೂಡುರಸ್ತೆ, ಶರೀಫ್ ಬಾಳಾಯ, ಸಂಶು ಬಿ.ಟಿ, ಹುಸೈನ್ ಕೆ, ನೌಶಾದ್, ರಶೀದ್ ಕೂಡುರಸ್ತೆ ಹಾಗೂ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here