ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ- ದ. ಕ ಜಿಲ್ಲೆಗೆ 97.34% ಫಲಿತಾಂಶ.15 ವಿದ್ಯಾರ್ಥಿಗಳಿಗೆ ಟಾಪ್ ಪ್ಲಸ್

0

  • ಮಾಡನ್ನೂರು ಮದರಸ ಜಿಲ್ಲೆಗೆ ಪ್ರಥಮ

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಮಾರ್ಚ್ ಮೊದಲ ವಾರದಲ್ಲಿ ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಆಗಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 9166 ವಿದ್ಯಾರ್ಥಿಗಳ ಪೈಕಿ 8770 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 97.34% ಜಯ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೧೫ ಮಂದಿಗೆ ಟಾಪ್ ಪ್ಲಸ್ ಬಂದಿದೆ. ಐದನೇ ತರಗತಿ ಕುಂಬ್ರ ರೇಂಜ್ ಮಾಡಾವು ನುಸ್ರತುಲ್ ಇಸ್ಲಾಂ ಮದರಸದ ಅಫ್ರಾ ಫಾತಿಮಾ,
ಏಳನೇ ತರಗತಿ ಗುರುಪುರ ರೇಂಜ್ ಅಸ್ರಾರ್ ನಗರ ರಹ್ಮಾನಿಯ ಮದರಸದ ಫಾತಿಮಾ ಇರ್ಫತ್, ಪುತ್ತೂರು ರೇಂಜ್ ಬೊಳ್ವಾರು ಖಿಳ್ರಿಯಾ ಮದರಸದ ಸಾನಿಯಾ ಮಿರ್ಜಾ ಮತ್ತು ಫಾತಿಮಾ ಅಜ್ಮಿನಾ, ಹತ್ತನೇ ತರಗತಿ ದೇರಳಕಟ್ಟೆ ರೇಂಜ್ ಗ್ರೀನ್ ಗ್ರೌಂಡ್ ಮನಾರುಲ್ ಹುದಾ ಮದರಸದ ಮುಹಮ್ಮದ್ ಆಶಿಕ್, ಪುತ್ತೂರು ರೇಂಜ್ ಪರ್ಲಡ್ಕ ಹಯಾತುಲ್ ಇಸ್ಲಾಂ ಮದರಸದ ಆಶಾ ಆಯಿಷಾ, ಕುಂಬ್ರ ರೇಂಜ್ ಮಾಡನ್ನೂರು ನೂರುಲ್ ಇಸ್ಲಾಂ ಮದರಸದ ಅಬ್ದುಸ್ಸಮದ್, ಮುಹಮ್ಮದ್ ಸದಕತುಲ್ಲಾ, ಅಹ್ಮದ್ ಮಿಕ್ದಾದ್, ಸುಹೈನಾ, ಆಯಿಷಾ ಮುಫೀದ, ಸೌದ, ಆಯಿಶಾ ಶಜ್ನಾ, ಪ್ಲಸ್ ಟು ತರಗತಿ ಪುತ್ತೂರು ರೇಂಜ್ ಪರ್ಲಡ್ಕ ಹಯಾತುಲ್ ಇಸ್ಲಾಂ ಮದರಸದ ಖದೀಜಾ ಮರ್ಜಾ, ಕೂರ್ನಡ್ಕ ರೇಂಜ್ ಚಾಪಳ್ಳ ಹಿದಾಯತುಲ್ ಇಸ್ಲಾಂ ಮದರಸದ ಮಾಜಿದಾ ಎಂಬೀ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿಯೂ ೯೭+ ಅಂಕ ಗಳಿಸಿ ಟಾಪ್ ಪ್ಲಸ್ ಪಡೆದಿದ್ದಾರೆ.

ಇದರಲ್ಲಿ ಮಾಡನ್ನೂರು ಮದರಸದ ೧೦ನೇ ತರಗತಿಯಲ್ಲಿ ಭಾಗವಹಿಸಿದ ಎಲ್ಲಾ ೭ ಮಂದಿ ವಿದ್ಯಾರ್ಥಿಗಳು ಟಾಪ್ ಪ್ಲಸ್ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಮಾಹಿತಿ ನೀಡಿದ್ದಾರೆ.

 

 

LEAVE A REPLY

Please enter your comment!
Please enter your name here