ಉಪ್ಪಿನಂಗಡಿ-ಪುಳಿತ್ತಡಿ ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರದಲ್ಲಿ 44ನೇ ವಾರ್ಷಿಕೋತ್ಸವ ಸಮಾರಂಭ, ಲೋಗ ಉದ್ಘಾಟನೆ

0

 

ಉಪ್ಪಿನಂಗಡಿ: ಇಲ್ಲಿನ ದಡ್ಡು-ಪುಳಿತ್ತಡಿ ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರದಲ್ಲಿ 44ನೇ ವಾರ್ಷಿಕೋತ್ಸವ ಸಮಾರಂಭ ವಿವಿಧ ಧಾರ್ಮಿಕ ಕಾರ‍್ಯಕ್ರಮದೊಂದಿಗೆ ಎ. 15 ಮತ್ತು 16ರಂದು ಜರಗಿತು.

 

ಎ. 15ರಂದು ಸ್ಥಳ ಶುದ್ಧಿ, ಗಣಹೋಮ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತ ಅಭಿಷೇಕ, ಆಶ್ಲೇಷಾ ಪೂಜೆ ಮತ್ತು ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

ಎ. 16ರಂದು ಶ್ರೀದೇವಿ ಆದಿಶಕ್ತಿ ಅಮ್ಮನವರಿಗೆ ನವಕ ಪ್ರಧಾನ ಹೋಮ ಅಭಿಷೇಕ, ಮಹಾಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪ ಪ್ರಜ್ವಲನೆ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಶರವೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ತಿಮ್ಮಪ್ಪ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ೫೦ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತದ ಲೋಗ ಉದ್ಘಾಟನೆ ನಡೆಯಿತು.

ರಾತ್ರಿ ಮಹಾಗಣಪತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪೂಜೆ ಮತ್ತು ಶ್ರೀ ದೇವಿ ಆದಿಶಕ್ತಿಯ ಮಹಾಪೂಜೆ, ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆ, ನಂತರ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

2 ದಿನಗಳ ಕಾಲ ನಡೆದ ಕಾಯಕ್ರಮದಲ್ಲಿ ಶ್ರೀದೇವಿ ಆದಿಶಕ್ತಿ ಭಜನಾ ಮಂದಿರದ ಅರ್ಚಕರು ಹಾಗೂ ಸಂಸ್ಥಾಪಕರಾದ ಡಿ. ತಿಮ್ಮಪ್ಪ ಶಾಂತಿ ದಡ್ಡು, ಎಸ್. ರವಿಚಂದ್ರ ಶಾಂತಿ ದಡ್ಡು, ಅಧ್ಯಕ್ಷ ವಸಂತ ಕುಕ್ಕಾಜೆ, ಗೌರವಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಉಪಾಧ್ಯಕ್ಷ ಶೀನಪ್ಪ ನಾಯ್ಕ, ಕಾರ‍್ಯದರ್ಶಿ ಮುರಳೀಧರ ಎ.ಎಸ್. ಅರ್ತಿಲ, ಕೋಶಾಧಿಕಾರಿ ಡೀಕಯ್ಯ ಗೌಂಡತ್ತಿಗೆ, ಜೊತೆ ಕಾರ‍್ಯದರ್ಶಿ ಷಣ್ಮುಖ ದಡ್ಡು, ಜೊತೆ ಕೋಶಾಧಿಕಾರಿ ಧರ್ಣಪ್ಪ ನಾಯ್ಕ್ ಬೊಳ್ಳಾವು, ಗೌರವ ಸಲಹೆಗಾರರಾದ ಶೇಖರ ಪಂಚೇರು, ರುಕ್ಮಯ ಗೌಡ ಬೊಳ್ಳಾವು, ಪ್ರತಾಪ್ ಸಪಲ್ಯ ಪೆರಿಯಡ್ಕ, ರಾಮಣ್ಣ ಗೌಡ ನೆಕ್ಕರೆ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here