ಎ.20: ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದ ಮಾಲಕ ಪನ್ನೆಗುತ್ತು ಬೆಳ್ಳಾರೆ ಸಂಜೀವ ಶೆಟ್ಟಿಯವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಇತ್ತೀಚೆಗೆ ಅಗಲಿದ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದ ಮಾಲಕ ಪನ್ನೆಗುತ್ತು ಬೆಳ್ಳಾರೆ ಸಂಜೀವ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಎ.20 ರಂದು ದುಗ್ಗಮ್ಮ ದೇರಣ ಶೆಟ್ಟಿ ಸಭಾಸದನದಲ್ಲಿ ಮಧ್ಯಾಹ್ನ ಜರಗಲಿದೆ.

 

ಇಂಜಿನಿಯರ್ ಪದವೀಧರರಾಗಿರುವ ಅಗಲ್ಪಾಢಿ ದೇರಣ್ಣ ಶೆಟ್ಟಿ ಹಾಗೂ ಪನ್ನೆಗುತ್ತು ದುಗ್ಗಮ್ಮರವರ ಪುತ್ರ ಬೆಳ್ಳಾರೆ ಸಂಜೀವ ಶೆಟ್ಟಿಯವರು ಬೆಂಗಳೂರಿನ ಹಿಡ್ಕಲ್ ಡ್ಯಾಂನಲ್ಲಿ ಪ್ರಪ್ರಥಮವಾಗಿ ಕಾರ್ಯನಿರ್ವಹಿಸಿದ್ದು, ಬಳಿಕ ವಿಜಯಮಾತಾ ಇಂಡಸ್ಟ್ರೀಸ್ ಹೆಸರಿನಲ್ಲಿ ಕೈಗಾರಿಕೋದ್ಯಮವನ್ನು ಆರಂಭಿಸಿದ್ದರು. ಉದ್ಯಮದ ಜೊತೆಗೆ ಕೃಷಿಗೂ ಬಹಳಷ್ಟು ಒತ್ತು ನೀಡಿರುವ ಶಿಸ್ತಿನ ಸಿಪಾಯಿ ಬೆಳ್ಳಾರೆ ಸಂಜೀವ ಶೆಟ್ಟಿಯವರು ಓರ್ವ ಕುಟುಂಬ ಪ್ರೇಮಿಯಾಗಿ, ಹಲವಾರು ಮಂದಿಗೆ ವಿದ್ಯೆಯನ್ನು ನೀಡುವ ಮೂಲಕ ವಿದ್ಯೆದಾತಾರೆನಿಸಿಕೊಂಡಿದ್ದರು. ದೂರದೃಷ್ಟಿತ್ವದ ಚಿಂತನೆ ಹಾಗೂ ಸಮಯ ಪಾಲನೆಗೆ ಬಹಳ ಪ್ರಾತಿನಿಧ್ಯ ನೀಡುತ್ತಿದ್ದ ಬೆಳ್ಳಾರೆ ಸಂಜೀವ ಶೆಟ್ಟಿಯವರು ೨೦೦೨-೦೩ರಲ್ಲಿ ತನ್ನ ತಂದೆ-ತಾಯಿಯ ಹೆಸರಿನಲ್ಲಿ ದರ್ಬೆಯಲ್ಲಿ ದುಗ್ಗಮ್ಮ ದೇರಣ ಶೆಟ್ಟಿ ಸಭಾಸದನವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದರು. ಮಾತ್ರವಲ್ಲದೆ ಸಭಾಸದನ ಆವರಣದಲ್ಲಿ ಗಣಪತಿ ದೇವಸ್ಥಾನವನ್ನು ನಿರ್ಮಿಸಿ ಭಕ್ತರಿಗೆ ಪೂಜೆ ಮಾಡಲು ಅನುವು ಮಾಡಿಕೊಟ್ಟಿದ್ದರು. ಬೆಂಗಳೂರಿನ ಬಂಟರ ಸಂಘದ ಸ್ಥಾಪಕ ಟ್ರಸ್ಟಿಯಾಗಿ, ಉಪಾಧ್ಯಕ್ಷರಾಗಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಓರ್ವ ಭ್ರಷ್ಟಾಚಾರ ವಿರೋಧಿ ಜೊತೆಗೆ ಸರಕಾರಿ ನೌಕರಿಯಲ್ಲಿನ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಹೊಂದಿರುವ ಮಾಜಿ ತಹಶೀಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈಯವರ ನಿಧನದ ಸುದ್ದಿ ತಿಳಿದೊಡನೆ ಬೆಳ್ಳಾರೆ ಸಂಜೀವ ಶೆಟ್ಟಿಯವರು ಕೋಚಣ್ಣ ರೈಯವರ ಸದ್ಗತಿ ಕಾರ್ಯಗಳಿಗೆ ತಾನು ನಿರ್ಮಿಸಿದ ದುಗ್ಗಮ್ಮ ದೇರಣ ಶೆಟ್ಟಿ ಸಭಾಸದನವನ್ನು ಅಭಿಮಾನಿ ನೆಲೆಯಲ್ಲಿ ಉಚಿತವಾಗಿ ಒದಗಿಸಿದ್ದರು. ಸಕಾಲದಲ್ಲಿ ಯಾರಿಗಾದರೂ ಆಮಂತ್ರಣ ಸಿಗದವರು ಇದುವೇ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ ಆಗಮಿಸಿ ಅಗಲಿದ ಪನ್ನೆಗುತ್ತು ಬೆಳ್ಳಾರೆ ಸಂಜೀವ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಮೃತರ ಪತ್ನಿ ಕೂರ್ಯಾಲಗುತ್ತು ಎಲಿಯಾರು ವೇದ ಎಸ್.ಶೆಟ್ಟಿ, ಪುತ್ರರಾದ ದೀಪಕ್ ಶೆಟ್ಟಿ, ಡಾ|ಚೇತಕ್ ಶೆಟ್ಟಿ, ಸೊಸೆಯಂದಿರಾದ ಸಪ್ನ ಶೆಟ್ಟಿ, ಡಾ|ಸಮನ್ವಿತಾ ಶೆಟ್ಟಿ, ಸಹೋದರಿ, ಸಹೋದರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here