ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ

0

 

ಪುತ್ತೂರು : ತೆಂಕಿಲ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು. ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ ಭವ್ಯ ಭಾರತವನ್ನು ಸೃಷ್ಟಿಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಉತ್ತಮ ಗುರಿ ಮತ್ತು ಗುರುವಿದ್ದರೆ ಉತ್ತಮ ಸಾಧನೆಯನ್ನು ಮಾಡಬಹುದು ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದಬಹುದು. ಶಿಕ್ಷಕರು ಅಂಬೇಡ್ಕರ್ ಅಂತಹ ವ್ಯಕ್ತಿತ್ವದ ಸಾವಿರ ಶಿಲ್ಪಿಗಳನ್ನು ಸೃಷ್ಟಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ರೈ ಮಾತನಾಡಿ ಅಂಬೇಡ್ಕರ್‌ರವರ ಜೀವನದ ಆದರ್ಶಗಳು ಮಾದರಿಯಾಗಬೇಕು ಎಂದರು.

 

 

ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ಮಾತನಾಡಿ ಶುಭಹಾರೈಸಿದರು. ಪ್ರಶಿಕ್ಷಣಾರ್ಥಿ ಸೌಮ್ಯಶ್ರೀಶರ್ಮ ಸ್ವಾಗತಿಸಿ ವಿದ್ಯಾಲಕ್ಷ್ಮಿ ವಂದಿಸಿದರು. ಪ್ರವೀಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here