ಜಿಡೆಕಲ್ಲು ಎಂಡೋ ಪೀಡಿತೆ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನಿವಾಸಿ ಭರತ್ ಎಂಬವ 7 ವರ್ಷ ಪ್ರಾಯ ಪುತ್ರಿ ಎಂಡೋ ಪೀಡಿತೆ ಶ್ರದ್ಧಾ ಎ.24ರಂದು ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಮೆದುಳಿನ ಪಕ್ಷಪಾತ ಸೇರಿದಂತೆ ಶೇ.90 ವಿಕಲಚೇತನ ಆಗಿದ್ದ ಶ್ರದ್ಧಾ ಅವರಿಗೆ ಎಂಡೋ ಪೀಡಿತರನ್ನಾಗಿ ಗುರುತಿಸಲಾಗಿತ್ತು. ಮಲಗಿದ್ದ ಸ್ಥಿತಿಯಲ್ಲೇ ಇದ್ದ ಆಕೆ ಎ.24ರಂದು ನಿಧನರಾದರು. ಮೃತರು ತಂದೆ ಭರತ್ ಮತ್ತು ಸುಜನಾ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಬಡತನದಲ್ಲಿರುವ ಕುಟುಂಬ:
ಕಡು ಬಡತನದಲ್ಲಿರುವ ಭರತ್ ಮತ್ತು ಸುಜನಾ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮೂವರು ಪುತ್ರಿಯರಲ್ಲಿ ಒಬ್ಬಾಕೆ ಹುಟ್ಟಿನಿಂದಲೇ ವಿಕಲಚೇತನರಾಗಿದ್ದು, ನಡೆದಾಡಲು ಅಶಕ್ತವಾದ್ದರಿಂದ ಮಲಗಿದ್ದಲ್ಲೇ ಇದ್ದರು. ಸುಜನಾ ಅವರು ಕೂಲಿ ಕೆಲಸದ ನಡುವೆಯೂ ವಿಕಲಚೇತನ ಪುತ್ರಿಯ ಆರೈಕೆ ಮಾಡುತ್ತಿದ್ದರು.

LEAVE A REPLY

Please enter your comment!
Please enter your name here