ಮೇ 1ರಿಂದ 2: ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ

0


ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ದೇವಾಲಯದ ವಾರ್ಷಿಕ ಹಬ್ಬ ಮೇ 1ರಿಂದ 7ರ ತನಕ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ರೆ.ಫಾ.ಡಾ| ಜೋನ್ಸ್ ಅಬ್ರಹಾಂ ಕೋನಾಟ್‌ರವರ ನೇತೃತ್ವದಲ್ಲಿ ಮತ್ತು ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಪೌಲ್ ಜೇಕಬ್, ಕಾರ್ಯದರ್ಶಿ ವಿ.ಎನ್.ಚಾಕೋ, ಕೋಶಾಧಿಕಾರಿ ಜೋನ್ ಅಬ್ರಹಾಂ ಚೀರಮಟ್ಟಂರವರು ತಿಳಿಸಿದ್ದಾರೆ.

ಮೇ 1ರಂದು ಬೆಳಿಗ್ಗೆ 9.3೦ಕ್ಕೆ ಹಬ್ಬದ ಧ್ವಜಾರೋಹಣ ನಡೆಯಲಿದೆ. ಮೇ ೧ರಿಂದ ೭ರ ತನಕ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಪ್ರಭಾತ ಪ್ರಾರ್ಥನೆ, 8 ಗಂಟೆಗೆ ಪವಿತ್ರ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ, ಸಂಜೆ 6 ಗಂಟೆಗೆ ಸಂಧ್ಯಾ ಪ್ರಾರ್ಥನೆ ನಡೆಯಲಿದೆ. ಮೇ 1ರಂದು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾ, ಮೇ 2ರಂದು ಎನ್.ಆರ್.ಪುರ ಕರುಗುಂದ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ತೋಮಸ್ ಮ್ಯಾಥು, ಮೇ 3ರಂದು ರೆಂಜಿಲಾಡಿ ಸೈಂಟ್ ತೋಮಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಕುರಿಯಾಕೋಸ್ ತೋಮಸ್ ಪಳ್ಳಿಚ್ಚಿರ, ಮೇ 4ರಂದು ಮರ್ದಾಳ ಸೈಂಟ್ ಮೇರಿಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಜೋನ್ ಮಾಥ್ಯು, ಮೇ ೫ರಂದು ಬ್ರಹ್ಮಾವರ ಕುರಾಡಿ ಸೈಂಟ್ ಪೀಟರ‍್ಸ್ ಮತ್ತು ಸೈಂಟ್ ಪೌಲ್ಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಲಾರೆನ್ಸ್ ಡಿ.ಸೋಜ, ಮೇ ೬ರಂದು ಕಾಸರಗೋಡು ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಗೀವರ್ಗೀಸ್ ಮಾಥ್ಯು, ಮೇ ೭ರಂದು ಮಲಂಕರ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಪ್ರಿನ್ಸಿಪಲ್ ಸೆಕ್ರೆಟರಿ ಪರಮಾಧ್ಯಕ್ಷರಾದ ರೆ.ಫಾ.ಡಾ.ಜೋನ್ಸ್ ಅಬ್ರಹಾಂ ಕೋಣಾಟ್‌ರವರ ನೇತೃತ್ವದಲ್ಲಿ ಪವಿತ್ರ ದಿವ್ಯ ಬಲಿಪೂಜೆ ನಡೆಯಲಿದೆ.

ಮೇ 6ರಂದು ಸಂಜೆ ಪಾದಯಾತ್ರಿಗರಿಗೆ ಸ್ವಾಗತ, ರಾತ್ರಿ ಹಬ್ಬದ ಸಂದೇಶ, ಕಾಯರ್ತಡ್ಕ ಶಿಲುಬೆಯ ತನಕ ಮೆರವಣಿಗೆ, ಆಶೀರ್ವಾದ, ಅನ್ನಸಂತರ್ಪಣೆ ನಡೆಯಲಿದೆ. ಮೇ ೭ರಂದು ಮಧ್ಯಾಹ್ನ ಹಬ್ಬದ ಸಂದೇಶ, ಜೋರ್ಜಿಯನ್ ಪುರಸ್ಕಾರ, ಅನ್ನಸಂತರ್ಪಣೆ, ಏಲಂ. ಹೊಸಂಗಡಿ ಶಿಲುಬೆ ಗೋಪುರದ ತನಕ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಸಂಜೆ ಹಬ್ಬದ ಧ್ವಜ ಇಳಿಸುವಿಕೆ, ಹಬ್ಬದ ಸಮಾರೋಪ ಪ್ರಾರ್ಥನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಹರಕೆ ಸಲ್ಲಿಸಲು, ಉರುಳು ಸೇವೆಗೆ ಅವಕಾಶ:
ಮೇ 1ರಿಂದ 7ರ ತನಕ ದಿವ್ಯಬಲಿಪೂಜೆಯ ನಂತರ ಭಕ್ತರಿಗೆ ಹರಕೆ, ಕಾಣಿಕೆಗಳನ್ನು ಸಲ್ಲಿಸಲು, ಭಜನೆ ಕೂರಲು ಅವಕಾಶವಿದೆ. ಮೇ 1 ರಿಂದ 5ರ ತನಕ ಪವಿತ್ರ ದಿವ್ಯ ಬಲಿಪೂಜೆಯ ನಂತರ ಹಾಗೂ ಪ್ರತಿದಿನ ಸಂಜೆಯ ನಮಸ್ಕಾರ ನಂತರ ಉರುಳು ಸೇವೆಗೆ ಅವಕಾಶವಿದೆ. ಮೇ 6 ಮತ್ತು 7ರಂದು ಮೆರವಣಿಗೆಗೆ ಮೊದಲು ಉರುಳು ಸೇವೆಗೆ ಅವಕಾಶವಿದೆ. ಉರುಳು ಸೇವೆ ಮಾಡುವವರು ಸಭ್ಯವಾದ ಸಮವಸ್ತ್ರ ಧಾರಣೆ ಮಾಡತಕ್ಕದ್ದು. ಮೇ 7ರಂದು ಇಚ್ಲಂಪಾಡಿಯಿಂದ ನೆಲ್ಯಾಡಿ, ಕಡಬ, ಧರ್ಮಸ್ಥಳ, ಉಪ್ಪಿನಂಗಡಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸರ್ವೀಸ್ ಇದೆ ಎಂದು ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here