ಮಂಗಳೂರು ವಿವಿ ಎಂ.ಎಸ್ಸಿ( ಪ್ರಾಣಿಶಾಸ್ತ್ರ) ಸ್ನಾತಕೋತ್ತರ ಪರೀಕ್ಷೆ ಕೂರೇಲು ಹರ್ಷಿತ್ ಕುಮಾರ್‌ಗೆ ಪ್ರಥಮ ರ್‍ಯಾಂಕ್, ಚಿನ್ನದ ಪದಕ

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ 2021 ನೇ ಸಾಲಿನನಲ್ಲಿ ನಡೆದ ಎಂ.ಎಸ್ಸಿ (ಪ್ರಾಣಿಶಾಸ್ತ್ರ) ಪರೀಕ್ಷೆಯಲ್ಲಿ ಹರ್ಷಿತ್ ಕುಮಾರ್ ಕೂರೇಲುರವರು ಪ್ರಥಮ ರ್‍ಯಾಂಕ್‌ನೊಂದಿಗೆ 2 ಚಿನ್ನದ ಪದಕ ಹಾಗೂ 2 ನಗದು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಎ.23 ರಂದು ನಡೆದ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೇಲೊಟ್‌ರವರು ಪ್ರಥಮ ಶ್ರೇಯಾಂಕದ ಸರ್ಟಿಫಿಕೇಟ್ ಹಾಗೂ ಚಿನ್ನದ ಪದಕ ಮತ್ತು ನಗದು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್.ಅಬ್ದುಲ್ ನಝೀರ್, ವಿವಿ ಕುಲಪತಿ ಸುಬ್ರಹ್ಮಣ್ಯ ಎಡಪಡಿತ್ತಾಯ ಸಹಿತ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

ಹರ್ಷಿತ್ ಕುಮಾರ್‌ರವರು ಪ್ರಾಣಿಶಾಸ್ತ್ರ ವಿಭಾಗದ ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡರೆ, ಮಂಜೇಶ್ವರ ಮುಕುಂದ ಪ್ರಭು ಸ್ಮಾರಕ ಮತ್ತು ಪ್ರೊ.ಕೆ.ಕೆ ವಿಜಯಲಕ್ಷ್ಮೀ ಸ್ಮಾರಕ ಚಿನ್ನದ ಪದಕಗಳನ್ನು ಹಾಗೂ ಲಕ್ಕಣ್ಣ ಭಂಡಾರಿ ಸ್ಮಾರಕ ನಗದು ಮತ್ತು ಕೃಷ್ಣಕುಮಾರ್ ನಾಯರ್ ಸ್ಮಾರಕ ವಿಜಯಮಾಲಾ (ಗ್ರೋವರ್)ನಾಯರ್ ಅರ್ಹತಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹರ್ಷಿತ್ ಕುಮಾರ್‌ರವರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಮತ್ತು ಸರಸ್ವತಿಯವರು ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here