ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಾಥಮಿಕ ಶಾಲಾ ಗ್ರಂಥಾಲಯಕ್ಕೆ ಉಚಿತ ಪುಸ್ತಕಗಳ ಕೊಡುಗೆಗೆ ಅರ್ಜಿ ಆಹ್ವಾನ

0

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಪುತ್ತೂರು ತಾಲೂಕಿನಲ್ಲಿರುವ ಸುಮಾರು 60 ಸರಕಾರಿ ಹಾಗೂ ಅನುದಾನಿತ ಶಾಲಾ ಗ್ರಂಥಾಲಯಕ್ಕೆ ಉಚಿತ ಪುಸ್ತಕಗಳ ಕೊಡುಗೆ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಮೇ 5ಕ್ಕೆ ಪುತ್ತೂರು ಕೋ-ಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ನಡೆಯುವ ಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಈ ಕೊಡುಗೆಯನ್ನು ವಿತರಿಸಲಾಗುವುದು. ಆಸಕ್ತ ಶಾಲಾ ಸಮಿತಿಯವರು ಮೇ 3ರ ಒಳಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್‌ರವರ ಮೊ: 9844401295 ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಘಟಕದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here