ಬಡಗನ್ನೂರುಃ ಮಕ್ಕಳ ಶೋಷಣೆ ಮತ್ತು ಪೋಕ್ಸೋ ಕಾನೂನು ಕಾಯ್ದೆ ಕಾರ್ಯಗಾರ

0

ಬಡಗನ್ನೂರುಃ ಪುತ್ತೂರು ಗ್ರಾಮಾಂತರ ವೃತ್ತದ ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯ ಎಸ್.ಜಿ.ಪಿ.ಯು ಫಟಕದ ವತಿಯಿಂದ ಮಕ್ಕಳ ಶೋಷಣೆ, ಮತ್ತು ಪೋಕ್ಸೋ  ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಗಾರ ಏ.25 ರಂದು ಬಡಗನ್ನೂರು ಗ್ರಾ.ಪಂ  ಸಭಾಂಗಣದಲ್ಲಿ  ನಡೆಯಿತು.

ಡಿವೈಎಸ್ಸಿ ಡಾ.ಗಾನ ಪಿ ಕುಮಾರ್  ಮಕ್ಕಳ ಶೋಷಣೆ ಮತ್ತು ಪೋಸ್ಕೋ ಕಾನೂನು ಕಾಯ್ದೆ ಬಗ್ಗೆ ಮತ್ತು ಇಲಾಖಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಗ್ರಾಮದಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳು ನಡೆಯುವ ಸಂದರ್ಭದಲ್ಲಿ  ತಕ್ಷಣ ಪೋಲಿಸ್ ಇಲಾಖಾ ಅಧಿಕಾರಿಗಳಿಗೆ ತಿಳಿಸುವ ಕೆಲಸ ಆಗಬೇಕು ಸಮಾಜದ ಒಳಿತಿನ ದೃಷ್ಟಿಯಿಂದ  ಯಾವುದೇ ಕ್ಲಿಷ್ಟಕರ ಸಮಯದಲ್ಲೂ  ನಾವು ನಮ್ಮ ಕರ್ತವ್ಯ ಮಾಡುತ್ತೇವೆ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಅರೋಗ್ಯ ಕಾರ್ಯಕರ್ತರು. ಗ್ರಾಮದ ಬಗ್ಗೆ ಕಾಳಜಿಯುಳ್ಳ ಜವಾಬ್ದಾರಿ ಸದಸ್ಯರು  ಇದು ಕೊಡ ನಿಮ್ಮ ಹಕ್ಕು  ಎಂದ ಅವರು ಗ್ರಾಮಸ್ಥರ ಸ  ಸಹಕಾರ ನೀಡಿದಾಗ ಮಾತ್ರ ಗ್ರಾಮದ ಒಳಿತು ಮಾಡಲು ಸಾಧ್ಯ ಎಂದು ಅವರು ಹೇಳಿದರು. 
ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು 
ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಅಭಿವೃದ್ಧಿ ಅದಿಕಾರಿ ವಸೀಮ ಗಂಧದ,  ಪಿ.ಎಸ್.ಐ ಹಮೀದ್ ಉಪಸ್ಥಿತರಿದ್ದರು.  ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ವೆಂಕಟೇಶ ಕನ್ನಡ್ಕ, ಲಿಂಗಪ್ಪ ಗೌಡ ಮೋಡಿಕೆ,  ಧರ್ಮೇಂದ್ರ ಕುಲಾಲ್ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ಸವಿತಾ ನೇರೋತ್ತಡ್ಕ  ಕುಮಾರ್ ಅಂಬಟೆಮೂಲೆ, ವಸಂತ ಗೌಡ ಕನ್ನಯ ಹಾಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಅರೋಗ್ಯ ಕಾರ್ಯಕರ್ತರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಬಡಗನ್ನೂರು  ಬಿಟ್ ಪೊಲೀಸ್  ಗುಡದಪ್ಪ ಕೆ   ಕಾರ್ಯಕ್ರಮ ನಿರೂಪಿಸಿದರು  ಪಿಹೆಚ್ ಸಿ ಆಶಾ   ಸ್ವಾಗತಿಸಿ  ವಂದಿಸಿದರು.. 

LEAVE A REPLY

Please enter your comment!
Please enter your name here