ಕಟ್ಟಡವಿದ್ದರೂ ಪುಟ್ಟ ಮಕ್ಕಳು ಬಿಸಿಲಲ್ಲೇ ಕುಳಿತುಕೊಳ್ಳುವ ಸ್ಥಿತಿ..!

0

  • ಕೊಯಿಲತ್ತಡ್ಕ ಅಂಗನವಾಡಿಯಲ್ಲಿ ಬಿಸಿಲು, ಮಳೆಯದ್ದೇ ಸಮಸ್ಯೆ

 

ಪುತ್ತೂರು: ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ ಅಂಗನವಾಡಿ ಸುಸಜ್ಜಿತ ಕಟ್ಟಡದಲ್ಲಿದೆ. ಹಲವು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣವಾಗಿದ್ದರೂ ಸದ್ಯಕ್ಕಂತೂ ತೊಂದರೆಯಿಲ್ಲ. ಆದರೆ ಇಲ್ಲಿ ಮಕ್ಕಳು ಕುಳಿತುಕೊಳ್ಳುವುದು ಮಾತ್ರ ಬಿಸಿಲಲ್ಲಿ! ಯಾಕಂದ್ರೆ ಅಂಗನವಾಡಿ ಕಟ್ಟಡ ಎತ್ತರ ಪ್ರದೇಶದಲ್ಲಿದೆ. ಇಲ್ಲಿ ಮಧ್ಯಾಹ್ನದಿಂದ ಸಂಜೆ ತನಕ ಸುಡುಬಿಸಿಲು ಅಂಗನವಾಡಿಯ ಒಳಗೇ ಬೀಳುತ್ತಿದೆ ಇದಕ್ಕೆ ಕಾರಣ ಹೊರಗಡೆ ಯಾವುದೇ ಶೀಟ್ ಹಾಕದೇ ಇರುವುದು.

ಕಟ್ಟಡದ ಹೊರ ಭಾಗದಲ್ಲಿ ಶೀಟ್ ಹಾಕಿ ಮಾಡು ಮಾಡಿದ್ದಲ್ಲಿ ಬಿಸಿಲು ಒಳಗೆ ಬರುವುದನ್ನು ತಡೆಯಬಹುದಿತ್ತು. ಮಕ್ಕಳು ಮಧ್ಯಾಹ್ನದ ಊಟದ ಬಳಿಕ ಬಿಸಿಲಲ್ಲೇ ಮಗಲಬೇಕಿದೆ , ಬಾಗಿಲು ಹಾಕಿದರೆ ಒಳಗಡೆ ಸೆಖೆಯನ್ನು ತಡೆಯಲು ಸಾಧ್ಯವೇ ಇಲ್ಲ. ಮಳೆಗಾಲದಲ್ಲಿ ಮಳೆ ನೀರು ಒಳಗಡೆ ಬಂದರೆ, ಬೇಸಿಗೆಯಲ್ಲಿ ಬಿಸಿಲು ಒಳಗಡೆ ಬರುತ್ತಿದೆ ಇದಕ್ಕೆ ಮುಕ್ತಿ ನೀಡಬೇಕಿದೆ ಎಂಬುದು ಪೋಷಕರ ಆಗ್ರಹವಾಗಿದೆ.

ಪರಿಶೀಲಿಸುತ್ತೇವೆ; ಭಾರತಿ
ಪರಿಶೀಲಿಸಿ ತಕ್ಷಣ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದುಭಾರತಿ, ಸಿಡಿಪಿಒ ಇಲಾಖೆ ಅಧಿಕಾರಿ

ಕೊಯಿಲತ್ತಡ್ಕ ಅಂಗನವಾಡಿಯ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವಲ್ಲಿ ಕ್ರಮಕೈಗೊಳ್ಳುತ್ತೇವೆ. ಮಧ್ಯಾಹ್ನ ಕಟ್ಟದೊಳಗೆ ಬಿಸಿಲಿನ ತಾಪಕ್ಕೆ ಮಕ್ಕಳು ಹೈರಾಣಾಗುತ್ತಿದ್ದಾರೆ ಎಂದು ಕೆಲವು ಪೋಷಕರು ಮಾಹಿತಿ ನೀಡಿದ್ದಾರೆ. ಸಂಬಂಧಿಸಿದವರ ಗಮನಕ್ಕೆ ತಂದು ಹೊರಾಂಗಣಕ್ಕೆ ಶೀಟ್ ಅಳವಡಿಸಲಾಗುವುದು–  ವಿನೋದ್ ಶೆಟ್ಟಿ ಮುಡಾಲ, ಸ್ಥಳೀಯ ವಾರ್ಡ್ ಸದಸ್ಯರು

LEAVE A REPLY

Please enter your comment!
Please enter your name here