ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ಸ್ವಚ್ಛತಾ ಶ್ರಮದಾನ

0

ಪುತ್ತೂರು:   ಅರಿಯಡ್ಕ ಗ್ರಾಮದ  ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣುಯುವ ಶಕ್ತಿ ಬಳಗ ಮಜ್ಜರಡ್ಕ ಸಂಘಟನೆಯ ಸದಸ್ಯರ ಸಹಕಾರದೊಂದಿಗೆ ದೈವಸ್ಥಾನ ದ ವಠಾರದಲ್ಲಿ ಮತ್ತು ಕೊಂಬರಡ್ಕದಿಂದ ಕೊಲ್ಲಾಜೆ ಯವರೆಗೆ 1.5ಕಿಲೋಮೀಟರ್ ಪ್ಲಾಸ್ಟಿಕ್ ಮತ್ತು ಕಸ ಗಡ್ಡಿ,ಗಿಡ ಗಂಟಿಗಳ ಸ್ವಚ್ಛತಾ ಕಾರ್ಯಾದೊಂದಿಗೆ ಶ್ರಮದಾನ ಏ.24ರಂದು ನಡೆಯಿತು.

ಕರ್ಕೇರ ಕುಟುಂಬ ತರವಾಡು ದೈವಸ್ಥಾನದ ಆಡಳಿತ ಮುಖ್ಯಸ್ಥ ಕೋಚಣ್ಣ ಪೂಜಾರಿ, ಉಪಾಧ್ಯಕ್ಷರುಗಳಾದ, ಉಮೇಶ ಕೂರೆಲು, ಬಾಲಕೃಷ್ಣ ದೋಲ,ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೋಡಿ, ಕಾರ್ಯದರ್ಶಿಗಳಾದ ನಾಗೇಶ ಪುಣಚ, ವಿಠಲ ಹಳೇನೇರೆಂಕಿ,  ಸದಸ್ಯರಾದ ರಾಜೇಶ್ ಗುತ್ತು, ಬಲ್ನಾಡು, ರಮೇಶ, ಭವಿತ್ ಮಜ್ಜಾರು, ಕೊಂಬರಡ್ಕ ಮನೆ ಯಜಮಾನ ಮೋನಪ್ಪ ಪೂಜಾರಿ, ಮಹಿಳಾ ಸದಸ್ಯರಾದ ರಮ್ಯ ಗುತ್ತು ಬಲ್ನಾಡು, ಗುಲಾಬಿ ಕೆಯ್ಯುರು, ಶೋಭ ರಾಮಕೃಷ್ಣ ಸರ್ವೇ ದೋಲ, ಪುಷ್ಪ ಕೊಡಿಯಡ್ಕ, ಜಾನಕಿ ಗಾಳಿಮುಖ, ಹಾಗು ತರವಾಡು ಮನೆಯ ಪ್ರಮುಖ ಸದಸ್ಯರುಗಳು ಹಾಗು ಶ್ರೀವಿಷ್ಣು ಯುವ ಶಕ್ತಿ ಬಳಗ ಮಜ್ಜರಡ್ಕದ ಅಧ್ಯಕ್ಷ ಉದಯ ಸ್ವಾಮಿನಗರ, ಸಂಘಟಕ ರಾಜೇಶ್ ಮಯೂರ  ಹಾಗು ಸಂಘಟನೆಯ ಪ್ರಮುಖ ಸದಸ್ಯರುಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here