ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಸ್ವಚ್ಚತಾ ಸಿಬ್ಬಂದಿ ಸೇರಿದಂತೆ ಇಬ್ವರು ಪ್ರಯಾಣಿಕರಿಗೆ ಬೀದಿ ನಾಯಿ ಕಡಿತ

0

ಪುತ್ತೂರು: ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಬಳಿ ರೈಲ್ವೇ ಸ್ವಚ್ಚತಾ ಸಿಬಂದಿ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ಬೀದಿ ನಾಯಿಯೊಂದು ಕಚ್ಚಿದ ಘಟನೆ ಎ.27 ರಂದು ನಡೆದಿದೆ. ಸುಮಾರು ಆರರಿಂದ ಏಳು ನಾಯಿಗಳು ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಒಡಾಡಿಕೊಂಡಿದ್ದು ನಾಯಿಗಳ ಗುಂಪಿನಲ್ಲಿದ್ದ ಒಂದು ನಾಯಿ ರೈಲ್ವೇ ಸ್ವಚ್ಚತಾ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಕಚ್ಚಿದೆ. ಘಟನೆ ಕುರಿತು ರೈಲ್ವೇ ಸ್ಟೇಷನ್ ಮಾಸ್ಟರ್ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ಕೊಡಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here