ವಿಟ್ಲ: ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯಲ್ಲಿ ಪುಟಾಣಿಗಳ ಸ್ಪರ್ಧೆ

0

  • ಸೂಕ್ತ ಪ್ರತಿಭೆಗಳ ಅನಾವರಣಕ್ಕಾಗಿ ಈ ಶಾಲೆ ವೇದಿಕೆಯಾಗಲಿದೆ: ಎಲ್.ಎನ್.ಕೂಡೂರು

ವಿಟ್ಲ: ವಿಠಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯಲ್ಲಿ ಏ.30 ರಂದು ನಡೆದ  ಪುಟಾಣಿಗಳ ಸ್ಪರ್ಧೆಯನ್ನು ಶಾಲಾ ಹತ್ತನೇ ತರಗತಿ ವಿದ್ಯಾರ್ಥಿನಿ ಶಾನ್ವಿರವರು ದೀಪಬೆಳಗಿಸಿ  ಉದ್ಘಾಟಿಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಅಧ್ಯಕ್ಷರಾದ ಎಲ್.ಎನ್.ಕೂಡೂರುರವರು ಮಾತನಾಡಿ ಮಕ್ಕಳಿಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳು ನಮ್ಮಲ್ಲಿ‌ಲಭ್ಯವಿದೆ‌. ಸೂಕ್ತ ಪ್ರತಿಭೆಗಳ ಅನಾವರಣಕ್ಕೆ ಈ ಶಾಲೆ ವೇದಿಕೆಯಾಗಲಿದೆ ಎಂದರು.

ಶಾಲಾ ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮಕ್ಕಳನ್ನು ಶ್ರೀಮಂತವಾಗಿಸುವ ಶಿಕ್ಷಣ ಬೇಡ ಅವರನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವ  ಪ್ರಯತ್ನ ಮುಖ್ಯ. ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಿ ಸಮಾಜದ ಓರ್ವ ಪ್ರಜ್ಞಾವಂತ ಪ್ರಜೆಯನ್ನಾಗಿಸುವ  ಪ್ರಯತ್ನ ನಮ್ಮ ಶಿಕ್ಷಣ ಸಂಸ್ಥೆಯ ವೈಶಿಷ್ಠ್ಯವಾಗಿದೆ. ಮುಂದಿನ ದಿನಗಳಲ್ಲಿ ಪ್ರೀ ನರ್ಸರಿ ತರಗತಿಯನ್ನು ಆರಂಭಿಸುತ್ತೇವೆ. ಜೀವನ ಶಿಕ್ಷಣವನ್ನು ನೀಡುವ ಕೆಲಸ ನಮ್ಮಿಂದಾಗಲಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಧರ ಶೆಟ್ಟಿ ಡಿ., ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ನಿರ್ದೇಶಕರಾದ ಹಸನ್ ವಿಟ್ಲ, ಮೋನಪ್ಪ ಶೆಟ್ಟಿ ದೇವಸ್ಯ, ಆಡಳಿತಾದಿಕಾರಿ ರಾಧಾಕೃಷ್ಣ ಎರುಂಬು, ವಿಠಲ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಸಹಶಿಕ್ಷಕ ಬಿ.ಕೆ.ರಮೇಶ್, ಉಪಪ್ರಾಂಶುಪಾಲರಾದ ಜ್ಯೋತಿ ಶೆಣೈ, ಹೇಮಲತಾ, ನಿವೃತ್ತ ಶಿಕ್ಷಕ ಕೃಷ್ಣ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹಶಿಕ್ಷಕಿ  ಸವಿತಾ  ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಮನಸ್ವಿ, ಶ್ರದ್ದಾ, ಶಾನ್ವಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here