ಮೇ 7: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಸಮಾರಂಭ, ಕುಟುಂಬ ಸಮ್ಮಿಲನ

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ, ಪುತ್ತೂರು ಇದರ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಮೇ 7 ರಂದು ಬೆಳಗ್ಗೆ 10 ರಿಂದ ಸಂಜೆ 5ರ ತನಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರು ತಿಳಿಸಿದ್ದಾರೆ.

ಅವರು ಪುತ್ತೂರು ಸುದ್ದಿ ಮೀಡಿಯಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 1972ರಲ್ಲಿ ಪಿಂಚಣಿದಾರರ ಸಂಘ ಎಂಬ ಹೆಸರಿನಲ್ಲಿ ನಮ್ಮ ಸಂಘ ಸ್ಥಾಪನೆಯಾಯಿತು. 30 ವರ್ಷಗಳ ಹಿಂದೆ ಅದು ನಿವೃತ್ತ ನೌಕರರ ಸಂಘ ಎಂದು ಮರುನಾಮಕರಣಗೊಂಡಿತು. ಇಡೀ ರಾಜ್ಯದಲ್ಲಿ ಸಂಘ ರಚನೆಯಾಗಿ ೫೦ ವರ್ಷಗಳಾಗಿವೆ. ಪುತ್ತೂರು ಸಂಘದಲ್ಲಿ 872 ಸದಸ್ಯರಿದ್ದು ತಾಲೂಕಿನಲ್ಲಿ ಸುವರ್ಣ ಸಂಭ್ರಮವನ್ನು ಇಡೀ ದಿನದ ವಿಶೇಷ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದವರು ನುಡಿದರು.

ಸುವರ್ಣ ಸಂಭ್ರಮದ ಸಂಚಾಲಕ ಡಾ| ಮಾಧವ ಭಟ್ ಅವರು ಮಾತನಾಡಿ ಬೆ.10 ಗಂಟೆಗೆ ಸಂಸದ ನಳಿನ್ ಕುಮಾರ್ ಕಟೀಲ್ ದೀಪಪ್ರಜ್ವಲನ ಮಾಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ. ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಅವರು ಸ್ವರ್ಣ ಸಂಧ್ಯಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಗರಸಭಾ ಅಧ್ಯಕ್ಷ ಜೀವಂಧ ಜೈನ್, ಸಹಾಯಕ ಆಯುಕ್ತ ಗಿರೀಶ್ ನಂದನ್, ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್ ಮುಖ್ಯ ಅತಿಥಿಗಳಾಗಿದ್ದಾರೆ. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರೊ.ಎ.ವಿ. ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅಧಿವೇಶನ ಆರಂಭ:
ಬೆಳಿಗ್ಗೆ ಗಂಟೆ 11.30ರಿಂದ 1ನೇ ಅಧಿವೇಶನದಲ್ಲಿ ಡಾ. ಶ್ರೀಪತಿ ರಾವ್ ಅವರು ಆರೋಗ್ಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. 9೦ ವರ್ಷ ಮೀರಿದ ಸಂಘದ ಸದಸ್ಯರಾದ ಯು. ವೆಂಕಟೇಶ ಕಿಣಿ, ಬಿ.ಎಸ್. ಕುಲಾಲ್, ಕೆ. ಗಣಪತಿ ಭಟ್, ವಿ. ಕೃಷ್ಣ, ಹಿಲ್ಡಾ ಡಿಸೋಜಾ, ಆಸೀಸ್ ಪಿಂಟೋ ಮತ್ತು ರಾಜ ನಾಕ್ ಅವರನ್ನು ತಹಸೀಲ್ದಾರ್ ರಮೇಶ್ ಬಾಬು ಅವರು ಸನ್ಮಾನ ಮಾಡಲಿದ್ದಾರೆ. ಅಪರಾಹ್ನ ಗಂಟೆ 2ರಿಂದ ನಡೆಯುವ ೨ನೇ ಅಧಿವೇಶನದಲ್ಲಿ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್ ಅವರು ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಘದ ಪೂರ್ವ ಪದಾಧಿಕಾರಿಗಳನ್ನು ತಾ.ಪಂ. ಕಾರ್ಯನಿರ್ವಹಾಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಸನ್ಮಾನಿಸಲಿದ್ದಾರೆ. ಗಂಟೆ ೩.೩೦ರಿಂದ ನಡೆಯುವ ೩ನೇ ಅಧಿವೇಶನದಲ್ಲಿ ಎಸ್‌ಬಿಐ ಮುಖ್ಯ ವ್ಯವಸ್ಥಾಪಕರಾದ ಸಿ.ವಿ. ಶಶಿಕಿರಣ್ ಅವರು ಬ್ಯಾಂಕ್ ಮಾಹಿತಿ ನೀಡಲಿದ್ದಾರೆ ಎಂದು ಡಾ| ಮಾಧವ ಭಟ್ ತಿಳಿಸಿದರು.

ಸಂಜೆ ಸಮಾರೋಪ:
ಸಮಾರೋಪ ಸಮಾರಂಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ದಾನಿಗಳಿಗೆ ಸನ್ಮಾನ ನೆರವೇರಿಸಲಿದ್ದಾರೆ. ಬೆಳ್ತಂಗಡಿ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಗೌರವ ಉಪಸ್ಥಿತರಿರುತ್ತಾರೆ ಎಂದು ಡಾ| ಮಾಧವ ಭಟ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಕಾಂಚನ ಸುಂದರ ಭಟ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ನಾಯ್ಕ್, ಸ್ಮರಣ ಸಂಚಿಕೆ ಸಮಿತಿ ಸದಸ್ಯ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು.

ಸಾಧಕರಿಗೆ ಸಮ್ಮಾನ
ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಭಾರಧ್ವಾಜ್ ಮತ್ತು ಹರೇಕಳ ಹಾಜಬ್ಬ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ. ಸವಣೂರು ಸೀತಾರಾಮ ರೈ, ಲೆ.ಕರ್ನಲ್ ಜಿ.ಡಿ. ಭಟ್, ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ್, ಕೃಷಿ ಪಂಡಿತರಾದ ಬೆಳ್ತಂಗಡಿಯ ಬಿ.ಕೆ. ದೇವರಾವ್ ಕಿಲ್ಲೂರು, ಮೂಲಿಕಾ ವೈದ್ಯೆ ಶಾರದಾ ಕೊಡೆಂಕಿರಿ ಅವರನ್ನು ಗೌರವಿಸಲಾಗುತ್ತದೆ. ಇದರ ಜೊತೆಗೆ 60 ವರ್ಷ ಮೇಲ್ಪಟ್ಟು 7೦, 75, 80, ಹೀಗೆ ನಿವೃತ್ತ ನೌಕರನ್ನು ಸಂಘದ ಮಹಾಸಭೆಯಲ್ಲಿ ಗೌರವಿಸುವ ವಿಶೇಷ ಕಾರ್ಯಕ್ರಮಕ್ಕೂ ನಿರ್ಣಯ ಕೈಗೊಳ್ಳಲಾಗಿದೆ.
ಕಾಂಚನ ಸುಂದರ ಭಟ್, ಅಧ್ಯಕ್ಷರು ಸುವರ್ಣ ಮಹೋತ್ಸವ ಸಮಿತಿ

LEAVE A REPLY

Please enter your comment!
Please enter your name here