ಕುಂಜಾರು ಸುರೇಶ್ ಸಪಲ್ಯರವರ ಉತ್ತರಕ್ರಿಯೆ, ಶ್ರದ್ಧಾಂಜಲಿ

0

ಪುತ್ತೂರು: ತನ್ನ ಜೀವಿತವಾದಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಕಾರ್ಯವೆಸಗಿದ ಕುಂಜಾರು ನಿವಾಸಿ ಸುರೇಶ್ ಸಪಲ್ಯ ಕುಂಜಾರು ಅವರ ಉತ್ತರ ಕ್ರಿಯೆ ಮೇ ೫ರಂದು ಕುಂಜಾರು ಮನೆಯಲ್ಲಿ ಜರುಗಿದ್ದು, ಇದೇ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಲಾಯಿತು. ಸುರೇಶ್ ಕುಂಜಾರು ಅವರ ಭಾವ ಚಿತ್ರದ ಎದುರು ಮನೆ ಮಂದಿ ದೀಪ ಪ್ರಜ್ವಲಿಸಿದರು. ಬಳಿಕ ನುಡಿನಮನ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು.

ಸುರೇಶ್ ಸಪಲ್ಯರವರು ಎಜ್ಯುಕೇಶನ್ ಇನ್‌ಸ್ಪೆಕ್ಟರ್:
ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಶ್ರೀಧರ್ ಕುಂಜಾರು ಅವರು ನುಡಿನಮನ ಸಲ್ಲಿಸಿದರು. ಸುರೇಶ್ ಸಪಲ್ಯ ಅವರು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಎಜ್ಯುಕೇಶನ್ ಇನ್‌ಸ್ಪೆಕ್ಟರ್ ಇದ್ದಂತೆ. ವಿದ್ಯಾರ್ಥಿಗಳ ಶಾಲಾ ಚಟುವಟಿಕೆಯಲ್ಲಿ ಅಂಕಗಳು, ಪರೀಕ್ಷೆಯ ಬರವಣಿಗೆ ಕುರಿತು ಮಾಹಿತಿ ಪಡೆದಿರುವುದಲ್ಲದೆ ಅನೇಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ನೆರವು ನೀಡುತ್ತಿದ್ದರು. ಇದರ ಜೊತೆಗೆ ಎಲ್ಲರೊಂದಿಗೆ ಉತ್ತಮ ಸ್ನೇಹಮಯಿಯಾಗಿ ಬೆರೆಯುತ್ತಿದ್ದರು ಎಂದರು. ಈ ಸಂದರ್ಭದಲ್ಲಿ ಸುರೇಶ್ ಸಪಲ್ಯ ಕುಂಜಾರು ಅವರ ಪತ್ನಿ ಪತ್ನಿ ಕಲಾವತಿ, ಪುತ್ರರಾದ ನಾಗರಾಜ್, ವಿಶ್ವರಾಜ್, ಪುತ್ರಿ ಶ್ವೇತಾ, ಸೊಸೆ ಪೂಜಾ, ಅಳಿಯ ದೀಪಕ್, ಸಹೋದರರಾದ ಕೇಶವ ಕುಂಜಾರು, ದೇವದಾಸ್, ನವೀನ್ ಕುಂಜಾರು, ಸಹೋದರಿಯರಾದ ರೇವತಿ, ಸುನಂದ, ಹೇಮಾವತಿ, ವಿಶಾಲಾಕ್ಷಿ, ಹರಿಣಾಕ್ಷಿ ಸೇರಿದಂತೆ ಗ್ರಾ.ಪಂ ಸದಸ್ಯೆ ರಮಣಿ ಡಿ ಗಾಣಿಗ, ಗಿರಿಧರ ಗೌಡ, ಮಾಜಿ ಸದಸ್ಯ ಶೀನಪ್ಪ, ಕುಂಜಾರು ಮದಗ ಜನಾರ್ದನ ದೇವಸ್ಥಾನದ ಮಾಜಿ ಸದಸ್ಯ ಶ್ರೀಧರ್ ಕುಂಜಾರು, ಪಡ್ನೂರು ಶ್ರೀರಾಮ್ ಫ್ರೆಂಡ್ಸ್‌ನ ಗೌರಾಧ್ಯಕ್ಷ ನವೀನ್ ಪಡ್ನೂರು, ಕೆಮ್ಮಿಂಜೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಗೌಡ ಮತ್ತಿತರರು ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here