ನಾಳೆ (ಮೇ 15) ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಎನ್.ಎಸ್.‌ ಕಿಲ್ಲೆ ಸಂಸ್ಮರಣೆ, ಸನ್ಮಾನ

0

ಪುತ್ತೂರು: ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.‌ ಕಿಲ್ಲೆ ಸಂಸ್ಮರಣೆ ಕಾರ್ಯಕ್ರಮ ಮೇ 15 ರಂದು ಸಂಜೆ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ. ನ್ಯಾಯವಾದಿ ಮಹೇಶ್ ಕಜೆ ಕಿಲ್ಲೆ ಸಂಸ್ಮರಣೆ ಮಾಡಲಿದ್ದಾರೆ.

 

ಕಡಮಜಲು ಸುಭಾಸ್ ರೈರವರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂಭ್ರಮದ ಅಂಗವಾಗಿ ಸಮಾಜ ಸೇವ ಸನ್ಮಾನವು ಸಾಮಾಜಿಕ ಕಾರ್ಯಕರ್ತ, ಮುಗೇರು ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರಿಗೆ ನಡೆಯಲಿದೆ. ಮೂಡಂಬೈಲು ಡಾ. ರವಿಶೆಟ್ಟಿ ಕತ್ತಾರ್ ರವರು ಸನ್ಮಾನಿಸಲಿದ್ದಾರೆ. ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ, ಕಿಲ್ಲೆ ಪ್ರತಿಷ್ಠಾನದ ಉಪಾಧ್ಯಕ್ಷ ಬೆದ್ರುಮಾರು ಜೈಶಂಕರ ರೈ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ, ಕಿಲ್ಲೆ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಕುಮಾರ್ ರೈ ಕೋರಂಗರವರಿಗೆ ಗೌರವಾರ್ಪಣೆ ನಡೆಯಲಿದೆ.

ಇದೇ ವೇಳೆ ಕಿಲ್ಲೆಯವರ ಮರಿಮಗ ಶರಣ್ ಮತ್ತು ಆಜ್ಞಾ ರವರ ವಿವಾಹ ‘ತಮ್ಮಣ’ ನಡೆಯಲಿದೆ ಎಂದು ದೇಶಭಕ್ತ ಎನ್.ಎಸ್. ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here