ಬಜತ್ತೂರು ಬಿಲ್ಲವ ಗ್ರಾಮ ಸಮಿತಿ, ಮಹಿಳಾ ಗ್ರಾಮ ಸಮಿತಿ ಮಹಾಸಭೆ, ಪುಸ್ತಕ ವಿತರಣೆ

0

ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಮುದ್ಯ ಶ್ರೀಪಂಚಲಿಂಗೇಶ್ವರ ಸಭಾಭವನದಲ್ಲಿ ಬಜತ್ತೂರು ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ಪುಸ್ತಕ ವಿತರಣಾ ಕಾರ್‍ಯಕ್ರಮ ನಡೆಯಿತು. ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕಾರ್ಯದರ್ಶಿ ನಾಗೇಶ್ ಬಲ್ನಾಡು, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಬೆದ್ರೋಡಿ ವಿದ್ಯಾನಗರ ಚಾಮುಂಡೇಶ್ವರಿ ಕ್ಷೇತ್ರದ ವಿನಯ ಶಾಂತಿ, ಉಪ್ಪಿನಂಗಡಿ ವಲಯ ಬಿಲ್ಲವ ಗ್ರಾಮ ಸಮಿತಿ ಸಂಚಾಲಕ ಅಶೋಕ್ ಕುಮಾರ್ ಪಡ್ಪು, ಬಜತ್ತೂರು ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷೆ ಮಮತ ನೀರಕಟ್ಟೆರರು ಕಾರ್ಯಕ್ರಮ ಉದ್ಘಾಟಿಸಿದರು. ಬಜತ್ತೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಸೋಮ ಸುಂದರ ಕೊಡಿಪಾನ ಅಧ್ಯಕ್ಷತೆ ವಹಿಸಿದ್ದರು.

ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜುನ MSW ವಿದ್ಯಾರ್ಥಿನಿ ಸ್ಮಿತಾ, ಮೂರ್ತೆದಾರರ ಬ್ಯಾಂಕ್‌ನ ನಿರ್ದೇಶಕಿ ಸುನೀತಾ ಸೋಮಸುಂದರ, ಬಜತ್ತೂರು ಗ್ರಾಮ ಪಂಚಾಯತ್ ಸದಸ್ಯೆ ಮಾಧವ ಒರುಂಬೋಡಿ, ಸಂತೋಷಕುಮಾರ್ ಪರ್ದಾಜೆ, ವಿಮಲ ಬೆದ್ರೋಡಿ, ನಮನ ತುಳುವ ನಳಿಕೆದ ಬೊಲ್ಲಿ ಪ್ರಶಸ್ತಿ ವಿಜೇತೆ ಸಾನ್ವಿ ಕೊಡಿಪಾನರವರನ್ನು ಸನ್ಮಾನಿಸಲಾಯಿತು. ಮಮತ ನೀರಕಟ್ಟೆ, ಮಹಾಲಕ್ಷ್ಮಿ, ಇಂದಿರಾರವರು ಸನ್ಮಾನಿತರ ಪರಿಚಯ ಮಾಡಿದರು. ಬಿಲ್ಲವಗ್ರಾಮ ಸಮಿತಿ ಸದಸ್ಯರು. ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಶ್ರೀಧರ ಬರೆಮೇಲು ವರದಿ ವಾಚಿಸಿದರು. ಸ್ವಸ್ತಿ, ಸಾನ್ವಿ, ಪ್ರೀತಿಕಾ, ಸಮೀಕ್ಷಾ ಪ್ರಾರ್ಥಿಸಿದರು. ಸುನೀತ ಕೊಡಿಪಾನ ಸ್ವಾಗತಿಸಿದರು. ಸುಜಾತ ಸ್ವಾಗತಿಸಿದರು. ನಾರಾಯಣ ಪೂಜಾರಿ ನೀರಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here