ಮುಂದಿನ ಸಭೆಯಲ್ಲಿ ಅಧಿಕಾರಿಗಳು ಪೂರ್ಣ ಮಾಹಿತಿಯೊಂದಿಗೆ ಬರದಿದ್ದರೆ ಕ್ಷಮೆಯಿಲ್ಲ-ತಾಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ವಿ.ಸುನಿಲ್ ಕುಮಾರ್

0

ಪುತ್ತೂರು: ರಾಜ್ಯ ಸರಕಾರದಿಂದ ಬೇರೆ ಬೇರೆ ಯೋಜನೆಗಳೇನು ಪ್ರಕಟವಾಗುತ್ತದೆಯೋ ಆ ಯೋಜನೆಗಳ ಅನುಷ್ಠಾನ ನಮ್ಮ ತಾಲೂಕು ಮಟ್ಟದಲ್ಲಿ ಯಾವ ರೀತಿ ಮಾಡಬೇಕೆಂಬ ಕುರಿತು ತಕ್ಷಣ ಪ್ಲಾನ್ ಮಾಡಬೇಕು. ಆದರೆ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೇ ಅಧಿಕಾರಿಗಳು ಸೂಕ್ತ ವರದಿಯೊಂದಿಗೆ ಬಾರದಿರುವುದು ನೀವು ಹೇಗೆ ಕೆಲಸ ಮಾಡುತ್ತಿದ್ದೀರಿ ಎಂದು ಗೊತ್ತಾಗಿದೆ. ಮುಂದಿನ ಸಭೆಗೆ ಬರುವಷ್ಟರಲ್ಲಿ ಅಧಿಕಾರಿಗಳು ಪೂರ್ಣ ಮಾಹಿತಿಯೊಂದಿಗೆ ಬರಬೇಕು. ಇಲ್ಲವಾದರೆ ಯಾವ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.

 

ಪುತ್ತೂರು ತಾ.ಪಂ ಸಭಾಂಗಣದಲ್ಲಿ ಅವರು ತಾಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಇಲಾಖೆ ಕಾರ್ಯಕ್ರಮಗಳ ಕುರಿತು ಸರಿಯಾದ ಮಾಹಿತಿ ಇಲ್ಲದೆ ಬಂದ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಮಾತನಾಡಿದರು. ಹಲವು ಭಾರಿ ಯೋಜನೆ ಜಾರಿ ಆಗುತ್ತದೆ. ಆದರೆ ಇಲ್ಲಿ ಬರುವಾಗ ಆರೇಳು ತಿಂಗಳು ಹಿಡಿಯುತ್ತದೆ. ಇವತ್ತಿನ ಮಿಟಿಂಗ್‌ನಲ್ಲಿ ಸೂಕ್ತ ವರದಿಯೊಂದಿಗೆ ಅಧಿಕಾರಿಗಳು ಬಂದಿಲ್ಲ. ಪೂರ್ಣ ವರದಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಬರುವುದಿಲ್ಲ ಎಂದಾದರೆ ನೀವು ಹೇಗೆ ಕೆಲಸ ಮಾಡುತ್ತಿದ್ದೀರಿ ಎಂದು ಗೊತ್ತಾಗುತ್ತಿದೆ. ಮುಂದಿನ ಮೀಟಿಂಗ್ ಬರುವಷ್ಟರಲ್ಲಿ ಪೋನ್‌ನಲ್ಲಿ ಕೇಳಿದಾಗಲೂ ಬೇಸಿಕ್ ದಾಟಗಳಾದರೂ ತಮ್ಮಲ್ಲಿ ಇರಬೇಕು. ಆದರೆ ಅದನ್ನೂ ಕೂಡಾ ಪುಸ್ತಕ ನೋಡಿ ಹೇಳುತ್ತೇನೆ ಎಂದಾದರೆ ನಾವು ಒಂದು ವರ್ಷ ಎರಡು ವರ್ಷ ಕೆಲಸ ಮಾಡುವ ಅಧಿಕಾರಿಗಳಿಗೆ ಇಡಿ ತಾಲೂಕಿನ ಸಮಗ್ರ ಚಿತ್ರಣ ಇಲ್ಲ ಎಂದು ತಿಳಿದ ಕೊಳ್ಳಬೇಕಾಗಿದೆ. ಮೊದಲನೆ ಸಭೆ ಎಂದು ತೀವ್ರವಾಗಿ ತೆಗೆದುಕೊಂಡಿಲ್ಲ. ಮುಂದೆ ಎರಡನೇ ಸಭೆಯಲ್ಲಿ ಯಾವ ಕಾರಣಕ್ಕೂ ಕ್ಷಮಿಸುವ ಪ್ರಶ್ನೇಯ ಇಲ್ಲ ಎಂದರು. ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಮೆಸ್ಕಾಂ ಮಂಗಳೂರು ಅಧೀಕ್ಷಕ ಕೃಷ್ಣರಾಜ್, ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಹೆಚ್ ಭಂಡಾರಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here