ಮೇ. 28- ಪುತ್ತೂರು ಬಂಟರ ಭವನದಲ್ಲಿ ಯುವ ಬಂಟೆರೆ ಆಯನ-2022 ಅಮಂತ್ರಣ ಪತ್ರ ಬಿಡುಗಡೆ

0

  • ವಿಶಿಷ್ಟ ರೀತಿಯ ಕಾರ್‍ಯಕ್ರಮ- ಕಾವು ಹೇಮನಾಥ ಶೆಟ್ಟಿ
  • ಪೂರ್ಣ ಸಹಕಾರ- ಶಶಿಕುಮಾರ್ ರೈ ಬಾಲ್ಯೊಟ್ಟು
  • ಮನೆ ಮನೆಗೆ ಅಮಂತ್ರಣ- ಸಾಜ ರಾಧಾಕೃಷ್ಣ ಆಳ್ವ
  • ಮಹಿಳಾ ಬಂಟರ ಸಂಘದಿಂದ ಪೂರ್ಣ ಸಹಕಾರ- ಸಬಿತಾ ಭಂಡಾರಿ
  • ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಶಶಿರಾಜ್ ರೈ ಮುಂಡಾಲಗುತ್ತು

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

 

 

ಪುತ್ತೂರು: ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಮೇ.28ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಲಿರುವ ಯುವ ಬಂಟರೆ ಆಯನ ೨೦೨೨ ಕಾರ್‍ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಮೇ.16 ರಂದು ಜರಗಿತು.

ವಿಶಿಷ್ಟ ರೀತಿಯ ಕಾರ್‍ಯಕ್ರಮ- ಕಾವು ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಬಂಟ ಸಮಾಜವನ್ನು ಬಲಿಷ್ಠವಾಗಿ ಕಟ್ಟುವ ಕಾರ್‍ಯ ಆಗಬೇಕು ಯುವ ಬಂಟರ ಸಂಘದ ಆಶ್ರಯದಲ್ಲಿ ನಡೆಯುವ ಯುವ ಬಂಟೆರೆ ಆಯನ ಕಾರ್‍ಯಕ್ರಮ ವಿಶಿಷ್ಟ ಕಾರ್‍ಯಕ್ರಮವಾಗಿದ್ದು, ಈ ಕಾರ್‍ಯಕ್ರಮದಲ್ಲಿ ಬಂಟ ಸಮಾಜದ ಎಲ್ಲರೂ ಭಾಗವಹಿಸುವ ಮೂಲಕ, ಮಾದರಿ ಕಾರ್‍ಯಕ್ರಮ ಆಗಬೇಕು ಎಂದು ಹೇಳಿದರು.

ಪೂರ್ಣ ಸಹಕಾರ- ಶಶಿಕುಮಾರ್ ರೈ ಬಾಲ್ಯೊಟ್ಟು
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಯುವ ಬಂಟರ ಸಂಘದ ನೇತೃತ್ರದಲ್ಲಿ ನಡೆಯುವ ಯುವ ಬಂಟೆರೆ ಆಯನ ಕಾರ್‍ಯಕ್ರಮದಲ್ಲಿ ಬಂಟ ಸಮುದಾಯದ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಆಮೂಲಕ ಯುವ ಬಂಟರ ಸಂಘಟನೆ ತಾಲೂಕಿನದ್ಯಾಂತ ಬಲಿಷ್ಠವಾಗಬೇಕು ಎಂದರು. ಯುವ ಬಂಟರ ಪ್ರತಿಯೊಂದು ಕರ್‍ಯ ಚಟುವಟಿಕೆಗೆ ತಾಲೂಕು ಬಂಟರ ಸಂಘದ ಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.

ಮನೆ ಮನೆಗೆ ಅಮಂತ್ರಣ- ಸಾಜ ರಾಧಾಕೃಷ್ಣ ಆಳ್ವ
ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ಯುವ ಬಂಟರ ಸಂಘದ ವರು ಪ್ರತಿ ಮನೆ ಮನೆಗೆ ತೆರಳಿ, ಕಾರ್‍ಯಕ್ರಮದ ಅಮಂತ್ರಣ ಪತ್ರವನ್ನು ನೀಡಬೇಕು, ಅಮೂಲಕ ಕಾರ್‍ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಭಾಂದವರು ಭಾಗವಹಿಸುವ ಕಾರ್‍ಯ ನಡೆಯಬೇಕು ಎಂದು ಹೇಳಿದರು.

ಮಹಿಳಾ ಬಂಟರ ಸಂಘದಿಂದ ಪೂರ್ಣ ಸಹಕಾರ- ಸಬಿತಾ ಭಂಡಾರಿ
ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿರವರು ಮಾತನಾಡಿ ಯುವ ಬಂಟರ ಆಯನ ಕಾರ್‍ಯಕ್ರಮಕ್ಕೆ ತಾಲೂಕು ಮಹಿಳಾ ಬಂಟರ ಸಂಘದ ಪೂರ್ಣ ಸಹಕಾರ ಇದೆ ಎಂದು ತಿಳಿಸಿ, ಯುವ ಸಮುದಾಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ- ಶಶಿರಾಜ್ ರೈ ಮುಂಡಾಲಗುತ್ತು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಲಗುತ್ತುರವರು ಮಾತನಾಡಿ ಯುವ ಬಂಟರ ಸಂಘದ ವಿಶಿಷ್ಟ ಕಾರ್‍ಯಕ್ರಮವಾದ ಯುವ ಬಂಟರೆ ಆಯನ ಮಾದರಿ ಕಾರ್‍ಯಕ್ರಮವಾಗಿದ್ದು, ಸಮಾಜ ನಭಾಂದವರಿಗೆ ಇಷ್ಟ ಆಗುವ ಈ ಕಾರ್‍ಯಕ್ರಮದಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ರಮೇಶ್ ರೈ ಡಿಂಬ್ರಿ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ತಾಲೂಕು ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಪ್ರಜ್ವಲ್ ರೈ ಸಣ್ಣತಡ್ಕ, ಕೋಶಾಧಿಕಾರಿ ಕೆ.ಸಿ.ಅಶೋಕ್ ಶೆಟ್ಟಿ, ಜತೆ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಯುವ ಬಂಟರ ಆಯನ ೨೦೨೨ರ ಪ್ರಧಾನ ಸಂಚಾಲಕರಾದ ಬೊಳೀಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತಾಲೂಕು ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ವಾಣಿ ಶೆಟ್ಟಿ ನೆಲ್ಯಾಡಿ, ಮಾಜಿ ಕಾರ್‍ಯದರ್ಶಿ ಸ್ವರ್ಣಲತಾ ಜೆ. ರೈ ಮಿತ್ರಂಪಾಡಿ, ಅಮಿತಾ ಶೆಟ್ಟಿ, ಯುವ ಬಂಟರ ಸಂಘದ ಪದಾಧಿಕಾರಿಗಳಾದ ಹರ್ಷಕುಮಾರ್ ರೈ ಮಾಡಾವು, ಭಾಗ್ಯೇಶ್ ರೈ ಕೆಯ್ಯೂರು, ಗೌತಮ್ ರೈ ಸಾಂತ್ಯ, ಯುವರಾಜ ಪೂಂಜಾ, ಸಂದೇಶ್ ರೈ ಬೋಳೊಡಿ, ರವಿಚಂದ್ರ ರೈ ಕುಂಬ್ರ, ಮನ್ಮಥ ಶೆಟ್ಟಿ, ನವೀನ್ ರೈ ಪಂಜಳ, ಬಂಟರ ಭವನದ ಭಾಸ್ಕರ್ ರೈರವರುಗಳು ಉಪಸ್ಥಿತರಿದ್ದರು.

ಮೇ. 28ರಂದು ನಡೆಯಲಿರುವ ಯುವ ಬಂಟೆರೆ ಆಯನ ಕಾರ್‍ಯಕ್ರಮದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಬಂಟ ಕಲಾ ವೈಭವ ಸ್ವರ್ಧೆಯಲ್ಲಿ ಪುತ್ತೂರ್ದ ಮುತ್ತು( ಪುತ್ತೂರು ನಗರ) ನೇತ್ರಾವತಿ( ಉಪ್ಪಿನಂಗಡಿ) ಕದಂಬ( ಸವಣೂರು) ಕುಮಾರಧಾರ( ಪಾಣಾಜೆ) ಹಾಗೂ ಸತ್ಯದ ಸಿರಿ( ನೆಟ್ಟಿಗೆ ಮುಡ್ನೂರು) ತಂಡಗಳು ಭಾಗವಹಿಸಲಿದೆ.

ಬಂಟ ಸ್ಮೃತಿ
ಕಾರ್‍ಯಕ್ರಮದಲ್ಲಿ ಬಂಟ ಸಮಾಜದ ಐದು ಮಂದಿಯ ಸ್ಮೃತಿ ಕಾರ್‍ಯಕ್ರಮ ನಡೆಯಲಿದೆ, ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ, ಪುತ್ತೂರು ಬಂಟರ ಸಂಘದ ಸ್ಥಾಪಕಾಧ್ಯಕ್ಷ ಮಿತ್ತಳಿಕೆ ಅಮ್ಮು ಶೆಟ್ಟಿ, ರಾಜಕೀಯ ಸೇವೆ- ಕಾವು ಅಂತಪ್ಪ ಶೆಟ್ಟಿ, ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಆನಾಜೆ ಗಣೇಶ್ ರೈ ಹಾಗೂ ಕಲಾ ಸೇವೆ- ಕುದ್ಕಾಡಿ ವಿಶ್ವನಾಥ ರೈರವರ ಸ್ಮೃತಿ ಕಾರ್‍ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ. ಸ್ನಾತಕೋತ್ತರ ಪದವಿ ಪಡೆದವರಿಗೆ ಗೌರವ 2019-20, 2020-21, 2021-22 ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಪಡೆದವರನ್ನು ಕಾರ್‍ಯಕ್ರಮದಲ್ಲಿ ಗೌರವಿಸಲಾಗುವುದು ಹೆಚ್ಚಿನ ವಿವರಗಳಿಗೆ- 9902250463, 9740783211 ಹಾಗೂ 9902212348ಇವರನ್ನು ಸಂಪರ್ಕ ಮಾಡಬಹುದು ಎಂದು ಯುವ ಬಂಟರ ಸಂಘದ ಪ್ರಕಟನೆ ತಿಳಿಸಿದೆ

LEAVE A REPLY

Please enter your comment!
Please enter your name here