ಶ್ರೀಕ್ಷೇತ್ರ ಶರವೂರಿನಲ್ಲಿ ಕಮಲಾಕ್ಷ ರೈಯವರಿಗೆ ಶ್ರದ್ಧಾಂಜಲಿ ಸಭೆ

0

ಆಲಂಕಾರು : ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ನಾಯಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಶರವೂರು ಶ್ರೀದುರ್ಗಾಪರಮೇಶ್ವರಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತುರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಶ್ರೀಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

 

 

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆಯವರು ನುಡಿನಮನ ಸಲ್ಲಿಸಿ ಕಮಲಾಕ್ಷ ರೈಯವರು ಮಾರ್ಗದರ್ಶಕರಾಗಿ, ಸಜ್ಜನರಾಗಿ ಶ್ರೀಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಅವರ ಅತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಮನವಳಿಕೆ ಗುತ್ತಿನ ಯಾಜಮಾನ ರಮಾನಾಥ ರೈ ಮನವಳಿಕೆಗುತ್ತುರವರು ಮಾತನಾಡಿ ಕಮಲಾಕ್ಷ ರೈಯವರು ತನ್ನ ಸ್ವಂತಕ್ಕೆ ಅಲೋಚನೆ ಮಾಡದೇ ಸಮಾಜಕೋಸ್ಕರ ಅಲೋಚನೆ ಮಾಡುವ ವ್ಯಕ್ತಿ ಶ್ರೀಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಉತ್ತಮ ಕೆಲಸ ಕಾರ್ಯವನ್ನು ನಿರ್ವಹಿಸಿದವರು ಎಂದು ತಿಳಿಸಿ ಅಗಲಿದ ಅತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಮರುವಂತಿಲ ನಾಗಪ್ಪ ಗೌಡರು ಮಾತನಾಡಿ ಕಮಲಾಕ್ಷ ರೈ ಯವರು ಶ್ರೀಕ್ಷೇತ್ರ ಶರವೂರಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವನ್ನು ಭದ್ರಪಡಿಸಿದರು. ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಸಂಪತ್ತು ಮಾಡಿದ್ದಾನೆ ಎನ್ನುವುದಕ್ಕಿಂತ ಅವನ ವ್ಯಕ್ತಿತ್ವ ಮುಖ್ಯ. ಕಮಲಾಕ್ಷ ರೈ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎನ್ನುವುದಕ್ಕೆ ಅವರು ಮೃತರಾಜಂಗ ಸೇರಿದ ಜನಸ್ತೋಮವೇ ಸಾಕ್ಷೀ ಎಂದು ತಿಳಿಸಿ ಅವರ ಒಡನಾಟದ ಬಗ್ಗೆ ತಿಳಿಸಿದರು.

ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಪೂವಪ್ಪ ನಾಯ್ಕ್ ಎಸ್.ರವರು ಮಾತನಾಡಿ ಕಮಲಾಕ್ಷ ರೈ ಯವರು ಬಾಲ್ಯದಿಂದಲೇ ದೈವ ಭಕ್ತರಾಗಿದ್ದರು. ಅವರು ಅಯ್ಯಪ್ಪ ವೃತಧಾರಿಯಾಗಿ ಅನೇಕ ದೇವತಾ ಕಾರ್ಯವನ್ನು ಮಾಡಿದವರು ಹಾಗು ಸಮರ್ಪಣಾ ಭಾವದಿಂದ ಸಮಾಜದಲ್ಲಿ ಇನ್ನಿತರ ಕ್ಷೇತ್ರಗಳಲ್ಲಿ ಕೆಲಸ ಕಾರ್ಯವನ್ನು ಮಾಡಿದವರು ಎಂದು ತಿಳಿಸಿದರು.

ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮಾತನಾಡಿ ಕಮಲಾಕ್ಷ ರೈಯವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಕಾರ್ಯವನ್ನು ಮಾಡಿದವರು ಹಾಗು ರಾಜಕೀಯ ಕ್ಷೇತ್ರಗಳಲ್ಲಿಯೂ ವಿವಿಧ ಸಂಘಟನೆಯಲ್ಲಿ ಕೆಲಸ ಕಾರ್ಯಮಾಡಿದವರು ಎಂದು ಹೇಳಿ ಹಾಗು ಅವರ ಒಡನಾಟದ ಬಗ್ಗೆ ತಿಳಿಸಿ ಮೃತರ ಅತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಕಮಲಾಕ್ಷ ರೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಕಮಲಾಕ್ಷ ರೈ ಪರಾರಿಗುತ್ತು ಹಾಗು ಇತ್ತಿಚೆಗೆ ನಿಧನರಾದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಬಾಬು ಪೂಜಾರಿ ಮಡ್ಯೊಟ್ಟುರವರ ಅತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಸದಸ್ಯರಾದ ಶೀನಪ್ಪ ಕುಂಬಾರ ಪ್ರಶಾಂತ್ ಕುಮಾರ್ ರೈ ಮನವಳಿಕೆ, ಲಕ್ಷ್ಮೀನಾರಾಯಣ ಅಡೀಲು, ಬಾಬು ಕುಪ್ಲಾಜೆ ಮರುವಂತಿಲ, ಅಶಾ ಈಶ್ವರಭಟ್, ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ, ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರು, ವಿವಿಧ ದೈವ, ದೇವಸ್ಥಾನಗಳ ಅಡಳಿತ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here