ಕರ್ನಾಟಕ ರಿಕ್ಷಾ ಚಾಲಕ-ಮಾಲಕರ ಸಂಘದ ಮಹಾಸಭೆ

0

ಪುತ್ತೂರು: ಕರ್ನಾಟಕ ರಿಕ್ಷಾ ಚಾಲಕ-ಮಾಲಕರ ಸಂಘದ ಮಹಾಸಭೆಯು ಮೇ.14ರಂದು ಬ್ಲಡ್ ಬ್ಯಾಂಕ್ ಬಳಿಯ ಅನುರಾಗ ವಠಾರದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಕೆ ಜಯರಾಮ ಕುಲಾಲ್ ಅವರು ಮಾತನಾಡಿ ಕಳೆದ 13 ವರ್ಷಗಳಿಂದ ರಿಕ್ಷಾ ಚಾಲಕರ ಪರವಾಗಿ ಹೋರಾಟ ಮಾಡಿಕೊಂಡು ಬಂದ ಸಂಘಟನೆ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ರಿಕ್ಷಾ ಚಾಲಕರಿಗೆ ಆಹಾರದ ಕಿಟ್‌ಗಳನ್ನು ದಾನಿಗಳ ಮತ್ತು ಶಾಸಕರ ಸಹಕಾರದಿಂದ ವಿತರಿಸಲಾಗಿದೆ. ಸರಕಾರದಿಂದ ಸಹಾಯಧನ ನೀಡಬೇಕೆಂದು ಮನವಿಯನ್ನು ಮಾಡಿದ್ದೇವೆ ಎಂದ ಅವರು ಮುಂದಿನ ದಿನಗಳಲ್ಲಿ ಸಂಘದ ಮೂಲಕ ಅನೇಕ ಕಾರ್ಯಚಟುವಟಿಕೆ ನಡೆಯಲಿದೆ ಎಂದರು.

ಕೃಷ್ಣರಾಜ ವೈಲಾಯ ಇದಬೆಟ್ಟು ಅವರು ಮಹಾಸಭೆಯನ್ನು ಉದ್ಘಾಟಿಸಿದರು. ಕೋವಿಡ್ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಲೇಖನಿ ಸಾಮಾಗ್ರ ಒದಗಿಸಿದ ಅವರನ್ನು ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ ಬಿ ಪುರಂದರ ಭಟ್ ಅವರು ಮಾತನಾಡಿ ಕುಟುಂಬ ಸಮೇತ ಮಹಾಸಭೆಯಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆ. ಪಕ್ಷ, ಜಾತಿ, ಧರ್ಮ, ಬೇಧವಿಲ್ಲದ ಒಟ್ಟಾಗಿ ಸೇರಿ ಸಂಘವನ್ನು ಮುನ್ನಡೆಸುವ ಎಂದು ಹೇಳಿದರು. ಕಾನೂನು ಸಲಹೆಗಾರ ದೇವಾನಂದ ಕೆ ಅವರು ಮಾತನಾಡಿ ಸಂಘದ ಸದಸ್ಯರಿಗೆ ಕಾನೂನಿನ ಅರಿವು ಬೇಕಾದಲ್ಲಿ ಮಾಹಿತಿ ನೀಡಲು ಸಿದ್ದನಿದ್ದೇನೆ ಎಂದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ನಾಸೀರ್ ಇಡಬೆಟ್ಟು, ಸಲಹೆಗಾರ ಗಿರೀಶ್ ನಾಯ್ಕ್ ಸೊರಕೆ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಬಳಿಕ ಎಲ್ಲಾ ಸದಸ್ಯರ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here