ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾರಂಭೋತ್ಸವ “ಹೂಮಳೆ”

0

  • ಆಟ ಪಾಠದೊಂದಿಗೆ ಶಿಕ್ಷಣ ಕಲಿಕೆ ಸಾಗಿದಾಗ ಮಕ್ಕಳಲ್ಲಿ ಉತ್ತಮ ಫಲಿತಾಂಶ- ವಂದನಾ ರೈ
  • ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ರಾಷ್ಟಕ್ಕೆ ಮಾದರಿ- ಹೇಮನಾಥ ಶೆಟ್ಟಿ
  • ಪರಿಪೂರ್ಣ ವಿದ್ಯಾರ್ಥಿ- ಯಶೋಧ ರಾಮಚಂದ್ರ
  • ಪೂರ್ಣ ರೀತಿಯ ಸಹಕಾರ- ಚಿಕ್ಕಪ್ಪ ನಾಕ್
  • ಶಿಕ್ಷಣವೇ ಸಂಪತ್ತು- ಡಾ.ಶ್ರೀಪ್ರಕಾಶ್

ಚಿತ್ರ- ಜೀತ್ ಪುತ್ತೂರು

ಪುತ್ತೂರು: ಶಿಕ್ಷಣ ಕಲಿಕೆ ಹೊರೆಯಾಗಬಾರದು, ಅದು ಪ್ರೀತಿಯ ಪಾಠವಾಗಬೇಕು, ಮಕ್ಕಳಲ್ಲಿ ಉತ್ಸಾಹವನ್ನು ತುಂಬಿಸಿದಾಗ, ಅವರು ಶಿಕ್ಷಣ ಕಲಿಕೆಯನ್ನು ಪ್ರೀತಿ ಮಾಡುತ್ತಾರೆ, ಆಟದೊಂದಿಗೆ ಪಾಠ, ಪಠ್ಯೇತೇರ ಚಟುವಟಿಕೆಯಲ್ಲಿ ಮಕ್ಕಳು ಭಾಗಿಯಾಗಬೇಕು, ಓದುವಿನ ಜೊತೆ ಉತ್ತಮ ಹವ್ಯಾಸಗಳು ಮಕ್ಕಳನ್ನು ಮತ್ತಷ್ಟು ಪ್ರಬ್ದುತೆಯನ್ನು ಮೂಡಿಸುತ್ತದೆ ಎಂದು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಂದನಾ ರೈ ಹೇಳಿದರು.

 

ಅವರು ಮೇ. ೧೯ ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾರಂಭೋತ್ಸವ “ಹೂಮಳೆ” ಕಾರ್‍ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ, ಮಕ್ಕಳೊಂದಿಗೆ ವಿವಿಧ ಹಾಡು, ಸ್ವರ್ಧೆಗಳೊಂದಿಗೆ ಭಾಗವಹಿಸಿದರು. ಸುಮಾರು ೧ ಗಂಟೆಗಳ ಕಾಲ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾತು, ಸಂಗೀತ, ಆಟದೊಂದಿಗೆ ರಂಜಿಸಿದರು. ವಿದ್ಯಾರ್ಥಿಗಳು ಪಠ್ಯವನ್ನು ಪ್ರೀತಿಯ ವಸ್ತುವಾಗಿ ಸ್ವೀಕರಿಸಬೇಕು ಎಂದು ಹೇಳಿ, ಪೋಷಕರು ಮತ್ತು ಶಿಕ್ಷಕರುಗಳು ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ರಾಷ್ಟಕ್ಕೆ ಮಾದರಿ- ಹೇಮನಾಥ ಶೆಟ್ಟಿ
ಕಾರ್‍ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ನಮ್ಮ ಸಂಸ್ಥೆಯ ೨೨ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಯು ಅತ್ಯಂತ ಶ್ರೇಷ್ಟವಾದದ್ದು, ಈ ಸಾಧನೆಯು ದೇಶದಲ್ಲಿಯೇ ಮಾಡಿದ ಮೊಟ್ಟ ಮೊದಲ ವಿದ್ಯಾ ಸಂಸ್ಥೆ ಎಂದರೆ ರಾಮಕೃಷ್ಣ ಪ್ರೌಢಶಾಲೆ ಎಂಬುದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿ, ನಮ್ಮ ಸಂಸ್ಥೆಯಲ್ಲಿ ೮ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗೆ ನಾವು ಅಂಕವನ್ನು ಪರಿಗಣಿಸುವುದಿಲ್ಲ, ಆ ಮಗುವನ್ನು ನಾವು ೮ನೇ ತರಗತಿಯಿಂದ ಉತ್ತಮ ವಿದ್ಯಾರ್ಥಿಯಾಗಿ ಬೆಳೆಸಿ, ಎಲ್ಲಾ ರೀತಿಯ ಶಿಕ್ಷಣ ಹಾಗೂ ಪಠ್ಯೇತರ ಶಿಕ್ಷಣವನ್ನು ನೀಡುತ್ತೇವೆ ಎಂದರು.

ಪರಿಪೂರ್ಣ ವಿದ್ಯಾರ್ಥಿ- ಯಶೋಧ ರಾಮಚಂದ್ರ
ಮುಖ್ಯ ಅತಿಥಿಯಾದ ಸುಳ್ಯ ಶ್ರೀ ಅಮರಜ್ಯೋತಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರರವರು ಮಾತನಾಡಿ ಜೀವನದ ನೈಜ ಅನುಭವಗಳಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿ ಅಗುತ್ತದೆ. ಮಕ್ಕಳಲ್ಲಿ ನೈತಿಕತೆ, ಸೌಜನ್ಯತೆಯನ್ನು ಬೆಳೆಸುವ ಕಾರ್‍ಯ ಶಿಕ್ಷಣ ಸಂಸ್ಥೆಯಲ್ಲಿ ಆದಾಗ ಆ ವಿದ್ಯಾರ್ಥಿ ಪರಿಪೂರ್ಣ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ.

ಪೂರ್ಣ ರೀತಿಯ ಸಹಕಾರ- ಚಿಕ್ಕಪ್ಪ ನಾಯಕ್
ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ನಿರ್ದೇಶಕ ಹಾಗೂ ಉದ್ಯಮಿ ಚಿಕ್ಕಪ್ಪ ನಾಯಕ್ ಅರಿಯಡ್ಕರವರು ಮಾತನಾಡಿ ಉತ್ತಮ ಪ್ರಜೆಗಳಾಗಿ ಭಾರತ ಮಾತೆಯ ಸೇವೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿ, ಶಿಕ್ಷಣ ಕಲಿಕೆಗೆ ಪೂರ್ಣ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಶಿಕ್ಷಣವೇ ಸಂಪತ್ತು- ಡಾ.ಶ್ರೀಪ್ರಕಾಶ್
ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಶ್ರೀಪ್ರಕಾಶ್‌ರವರು ಮಾತನಾಡಿ ಶಿಕ್ಷಣ ಕಲಿಕೆಯಲ್ಲಿ ರಾಮಕೃಷ್ಣ ಪ್ರೌಢಶಾಲೆಯು ಅತ್ಯುತ್ತಮವಾದ ಹೆಸರನ್ನು ಪಡೆದಿದೆ. ಶಿಕ್ಷಣವೇ ಸಂಪತ್ತು ಎಂಬುದನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಹಾಗೂ ನೆಟ್ಟಣಿಗೆ-ಮುಡ್ನೂರು ಗ್ರಾ.ಪಂ, ಅಧ್ಯಕ್ಷ ರಮೇಶ್ ರೈ ಸಾಂತ್ಯರವರುಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಿಯಾರಾಮ್ ಪ್ರಾರ್ಥನೆಗೈದರು.ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಎ, ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಎಂ, ಕಾರ್‍ಯಕ್ರಮ ನಿರೂಪಿಸಿದರು. ಶಿಕ್ಷಕಿ ಗಾಯತ್ರಿ ಸಹಕರಿಸಿದರು.

ವಿಶಿಷ್ಟ ಕಾರ್‍ಯಕ್ರಮಕ್ಕೆ ಸಾಕ್ಷಿಯಾದ ಶಾಲಾ ಪ್ರಾರಂಭೋತ್ಸವ
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾರಂಭೋತ್ಸವ ವಿಶಿಷ್ಟ ರೀತಿಯಲ್ಲಿ ಅನಾವರಣಗೊಂಡಿತು. ಹೊಸದಾಗಿ ಸೇರ್ಪಡೆಗೊಂಡು ಎಲ್ಲಾ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಪುಸ್ತುಕ ಕೊಡುಗೆ ಹಾಗೂ ಶಿಕ್ಷಕ ವೃಂದಕ್ಕೆ ಮತ್ತು ಸಿಬ್ಬಂಧಿಗಳಿಗೆ ಉಡುಗರೆಯನ್ನು ನೀಡಲಾಯಿತು. ಮಕ್ಕಳಿಂದ ವಿಶಿಷ್ಟ ರೀತಿಯ ಸಾಂಸ್ಕೃತಿಕ ಕಾರ್‍ಯಕ್ರಮ ನೇರವೇರಿತು. ಶಿಕ್ಷಕಿ ವಂದನಾ ರೈಯವರು ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಹುಟ್ಟಿಕೊಳ್ಳಲು ಬೇಕಾದ ಅಂಶಗಳನ್ನು ಎಳೆಎಳೆಯಾಗಿ ತೋರಿಸಿಕೊಟ್ಟರು. ಒಟ್ಟಿನಲ್ಲಿ ಶಾಲಾ ಪ್ರಾರಂಭೋತ್ಸವದ ದಿನವೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಯಲು ಕಾರಣವಾಯಿತು.

ಅರ್ಥಿಕ ಸಂಕಷ್ಟದಲ್ಲಿ ಇರುವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗೆ ಉಚಿತ ಶಿಕ್ಷಣ
ನಮ್ಮ ಸಂಸ್ಥೆಯಲ್ಲಿ ದಾನಿಗಳ ಸಹಕಾರದಿಂದ ಅರ್ಥಿಕ ಸಂಕಷ್ಟದಲ್ಲಿ ಇರುವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ಸಂಸ್ಥೆಯು ಬದ್ಧವಾಗಿದೆ ಎಂದು ತಿಳಿಸಿದರು.ಕಾವು ಹೇಮನಾಥ ಶೆಟ್ಟಿ ಸಂಚಾಲಕರು ಶ್ರೀ ರಾಮಕೃಷ್ಣ ಪ್ರೌಡಶಾಲೆ ಪುತ್ತೂರು

LEAVE A REPLY

Please enter your comment!
Please enter your name here