ವಿವೇಕ್ ಸ್ಟೋರ್ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಮುಖ್ಯರಸ್ತೆ ಶ್ರೀಧರ ಭಟ್ ಅಂಗಡಿ ಬಳಿಯ ಹೆಗ್ಡೇಸ್ ಆರ್ಕೆಡ್‌ನಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯವಹರಿಸುತ್ತಿದ್ದ ವಿವೇಕ್ ಸ್ಟೋರ್‍ಸ್ ನವೀಕೃತಗೊಂಡು ಮೇ.23ರಂದು ಶುಭಾರಂಭಗೊಂಡಿತು.

ಮಳಿಗೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕುಟುಂಬ ಪ್ರಬೋಧನ್, ವಿವೇಕಾನಂದ ವಿದ್ಯಾ ವರ್ಧಕ ಸಂಘದ ಖಜಾಂಚಿಯಾಗಿರುವ ಅಚ್ಯುತ ನಾಯಕ್ ದೀಪ ಬೆಳಗಿಸಿ, ಉದ್ಘಾಟಿಸಿ ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳೆಂಜ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ಮ್ಹಾಲಕರ ತಾಯಿ ವಿಮಳಾ ಹೆಗ್ಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ವ್ಯವಸ್ಥಾ ಪ್ರಮುಖ್, ನ್ಯಾಯವಾದಿ ಅರುಣ್ ಬಿ.ಕೆ., ಚಂದು ಶೆಟ್ಟಿ ಮೆಟಲ್ಸ್‌ನ ಸುನೀತಾ ರವೀಂದ್ರ ಶೆಟ್ಟಿ, ವಿನ್ನರ್ ಸಾಪ್ಟ್‌ಡ್ರಿಂಕ್ಸ್‌ನ ರಮೇಶ್ ಪ್ರಭು, ಪುರಸಭಾ ಮಾಜಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಸಂಪದ ಟ್ರೇಡರ್‍ಸ್‌ನ ಶೈಲಾ ರಾಜೇಶ್, ಸರಿತಾ ಅಶೋಖ್ ಹೆಗ್ಡೆ, ಕಲಾವತಿ ಹೆಗ್ಡೆ, ಪ್ರಮೋದ್ ಕುಮಾರ್, ಪವಿತ್ರ, ಇಂದುಶೇಖರ್ ಪಿ.ಬಿ., ಶಿವಕುಮಾರ್ ಕಲ್ಲಿಮಾರ್, ಚಂದ್ರಶೇಖರ್, ಮೋಹನ್, ಧೀರಜ್ ಶೆಟ್ಟಿ, ಸುಕೃತಿ, ಅಲ್ತಾಫ್, ಬಾಳಪ್ಪ ಗೌಡ, ಕಿಶನ್, ಮೋಹನ್ ಮೊದಲಾದವರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.  ಮಾಲಕರಾದ ಚೇತನಾ ವೆಂಕಟೇಶ್ ಸ್ವಾಗತಿಸಿ, ಸತ್ಕರಿಸಿದರು. ತನ್ಮಯ್ ಹೆಗ್ಡೆ ಉಪಸ್ಥಿತರಿದ್ದರು.

ತನ್ಮಯ್ ಚಿಪ್ಸ್ ಕಾರ್ನರ್:
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಆತ್ಮನಿರ್ಭರ ಭಾರತ ಯೋಜನೆಯ ಮುಖಾಂತರ ಬಾಳೆಕಾಯಿ ಚಿಪ್ಸ್ ತಯಾರಿಕಾ ಸಂಸ್ಥೆ ತನ್ಮಯ್ ಚಿಪ್ಸ್ ಕಾರ್ನರ್ ಎಂಬ ಉದ್ಯಮ ಪ್ರಾರಂಭಿಸಿ ಅದರಲ್ಲಿ ಯಶಸ್ಸು ಕಂಡು ಆತ್ಮ ವಿಶ್ವಾಸದ ಬದುಕು ಸಾಧಿಸಿ ದಿನಂಪ್ರತಿ ಸುಮಾರು 25 ಕೆಜಿಗೂ ಅಧಿಕ ಚಿಪ್ಸ್ ಮಾರಾಟ ಮಾಡಲಾಗುತ್ತಿದೆ. ಇದೀಗ ನವೀಕೃತಗೊಂಡಿರುವ ನಮ್ಮ ಮಳಿಗೆಯಲ್ಲಿ ಸ್ವಾಧಿಷ್ಟಕರವಾದ ಚಿಪ್ಸ್‌ಗಳನ್ನು ಗ್ರಾಹಕರ ಬೇಡಿಕೆಯಂತೆ ಸ್ಥಳದಲ್ಲಿಯೇ ತಯಾರಿಸಿ ಕೊಡಲಾಗುವುದು.

ನಮ್ಮಲ್ಲಿ ದಿನಸಿ ಸಾಮಾಗ್ರಿಗಳು, ಎಲ್ಲಾ ರೀತಿಯ ಪೂಜಾ ಸಾಮಾಗ್ರಿಗಳು, ಗಂಜಿ ಊಟ, ಜ್ಯೂಸ್, ಉಪಾಹಾರಗಳು ಲಭ್ಯವಿದೆ ಎಂದು ಮಾಲಕರಾದ ಚೇತನಾ ವೆಂಕಟೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here