ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನ

0

ಪುತ್ತೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ 2022-23ನೇ ಸಾಲಿನಲ್ಲಿ ಸಕಾಲ ಸೇವೆಯಾದ ವಿದ್ಯಾರ್ಥಿ ರಿಯಾಯಿತಿ ದರದ ಬಸ್ ಪಾಸ್‌ನ್ನು ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ (serviceonline.gov.in/karnataka)ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದು.

ನಿಗಮದ ಬಸ್ ಪಾಸ್ ಪಡೆಯುವ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ ಅರ್ಜಿಯ ಪ್ರತಿಯನ್ನು ಸಂಬಂಧಿಸಿದ ಶಾಲಾ/ಕಾಲೇಜು ಮುಖ್ಯಗುರು/ಪ್ರಾಂಶುಪಾಲರ ಸೀಲು ಸಹಿಯೊಂದಿಗೆ ಹಾಗೂ ಅಪ್‌ಲೋಡ್ ಮಾಡಿದ ದಾಖಲೆಗಳ ಪ್ರತಿಗಳನ್ನು ಹಾಗೂ ಪಾಸಿನ ಶುಲ್ಕವನ್ನು ಶಾಲಾ/ಕಾಲೇಜು ಮುಖಾಂತರ ಕರಾರಸಾ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್‌ನಲ್ಲಿ ಸಲ್ಲಿಸಿ ಪಾಸುಗಳನ್ನು ಪಡೆಯಬಹುದು ಎಂದು ಕರಾರಸಾ ನಿಗಮದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here