ಕಾರ್ಪಾಡಿ: ಬೈಲುವಾರು ಸಮಿತಿ ರಚನೆ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಗೆಣಸಿನ ಕುಮೇರ್ ಕೆಳಗಿನ ಬೈಲ್ ಮತ್ತು ಮೇಲಿನ ಬೈಲಿನ ಬೈಲುವಾರ್ ಸಮಿತಿ ಮೇ 24 ರಂದು ರಚಿಸಲಾಯಿತು.

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಉಪಸ್ಥಿತಿಯಲ್ಲಿ ಸಮಿತಿ ರಚನೆಯಾಗಿ, ಕೆಳಗಿನ ಬೈಲ್ ಅಧ್ಯಕ್ಷರಾಗಿ, ಶ್ರೀನಿವಾಸ ಶೆಟ್ಟಿ ಗೆಣಸಿನಕುಮೇರ್, ಕಾರ್ಯದರ್ಶಿಯಾಗಿ ಗಂಗಾಧರ ರೈ ಕಲ್ಕೊಟೆ, ಉಪಾಧ್ಯಕ್ಷರಾಗಿ ನಾರಾಯಣ ನಾಯ್ಕ್ ಗೆಣಸಿನಕುಮೇರ್ ಆಯ್ಕೆಯಾದರು. ಸದಸ್ಯರಾಗಿ ಜಿಟಿ ನಾರಾಯಣ ಶೆಟ್ಟಿ, ಕಲ್ಕೊಟೆ ಕಿಟ್ಟಣ್ಣ ರೈ, ಪುರುಷೋತ್ತಮ ಶೆಟ್ಟಿ, ಪುರಂದರ ರೈ, ಜಿಟಿ ಸುಭಾಷ್ ಶೆಟ್ಟಿ, ಸಂತೋಷ್ ರೈ, ಕೃಷ್ಣಪ್ಪ ನಾಯ್ಕ, ರಘು ಶೆಟ್ಟಿ, ಜಗನ್ನಾಥ ರೈ, ಪ್ರಸನ್ನ ಕುಲಾಲ್, ಕೊರಗಪ್ಪ ನಾಯ್ಕ್ , ಗುಡ್ಡಪ್ಪ ನಾಯ್ಕ್, ಗೋವಿಂದ ನಾಯ್ಕ್, ವಿಶ್ವನಾಥ ರೈ, ಪುರುಷೋತ್ತಮ ನಾಯಕ್ , ಸೋಮಶೇಖರ ನಾಯಕ್, ಶಂಕರ ನಾಯಕ್, ಉದಯ ಚಂದ್ರ, ಹರೀಶ್ ನಾಯ್ಕ್ , ರಾಮ ನಾಯ್ಕ್, ಕುಂಞಣ್ಣ ಶೆಟ್ಟಿ ಮತ್ತಿತರರನ್ನು ಸೇರಿಸಲಾಯಿತು. ದೇವಳದ ಭೂ ಖರೀದಿ ಸಮಿತಿ ಕಾರ್ಯದರ್ಶಿ ಮಹಾಬಲ ರೈ ಒಳತ್ತಡ್ಕ ಸಮಿತಿ ರಚನೆಯನ್ನು ನಡೆಸಿಕೊಟ್ಟರು.

ಮೇಲಿನ ಬೈಲು ಸಮಿತಿ ಅಧ್ಯಕ್ಷರಾಗಿ ಪಂಚಾಯತ್ ಸದಸ್ಯರಾದ ರುಕ್ಮಯ ಮೂಲ್ಯ, ಕಾರ್ಯದರ್ಶಿಯಾಗಿ ಗಣೇಶ ರೈ, ಉಪಾಧ್ಯಕ್ಷರಾಗಿ ಮಹಾಬಲ ಕುಲಾಲ್, ಸದಸ್ಯರಾಗಿ, ಶ್ರೀನಿವಾಸ ರೈ, ವೆಂಕಟರಮಣ ಭಟ್, ಕಂಪ ರುಕ್ಮಯ ಮೂಲ್ಯ, ಜಿಕೆ ನಾರಾಯಣ ಮೂಲ್ಯ, ಕೊರಗಪ್ಪ ಮೂಲ್ಯ, ರಾಮ ಮೂಲ್ಯ, ಸೇಸಪ್ಪ ಮೂಲ್ಯ,ಕುಶಲ ಮೂಲ್ಯ, ಸದಾಶಿವ ಮೂಲ್ಯ, ರಾಧಾಕೃಷ್ಣ ಗೌಡ, ವಿಠಲ ಮಡಿವಾಳ, ತಿಮ್ಮಪ್ಪ ಮೂಲ್ಯ, ಸುಂದರ ಮೂಲ್ಯ, ವಾಸು ಮೂಲ್ಯ, ಜಿಟಿ ನಾರಾಯಣ ಮೂಲ್ಯರನ್ನು ಸೂಚಿಸಲಾಯಿತು. ಬಳಿಕ ರಕ್ತೇಶ್ವರಿ ದೈವಸ್ಥಾನದ ಪತ್ತನಾಜೆ ತಂಬಿಲ ವೇದಮೂರ್ತಿ ದಿನೇಶ್ ಮರಡಿತ್ತಾಯರ ನೇತೃತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here