ಪೆಟ್ ಪ್ಲಾನೆಟ್‌ನ 5ನೇ ಶಾಖೆ ದರ್ಬೆಯಲ್ಲಿ ಶುಭಾರಂಭ

0

ಪುತ್ತೂರು: ಮಂಗಳೂರಿನ ವಾಮಂಜೂರು, ಬಿ.ಸಿ ರೋಡ್, ಸುಳ್ಯ ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿರುವ ಸಾಕು ಪ್ರಾಣಿಗಳ ಆಹಾರ, ಔಷಧಿ, ಪರಿಕರಗಳ ಮಾರಾಟ ಮಳಿಗೆ ಪೆಟ್ ಪ್ಲಾನೆಟ್‌ನ 5ನೇ ಶಾಖೆಯು ಮೇ.27ರಂದು ಪುತ್ತೂರಿನ ದರ್ಬೆಯ ಕೆ.ಎಂ ಗೌಡ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಮಳಿಗೆಯನ್ನು ಪಶು ಸಂಗೋಪನಾ ಇಲಾಖೆಯ ಹಿರಿಯ ಪಶುವೈದ್ಯಾಧಿಕಾರಿ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ದೀಪ ಬೆಳಗಿಸಿದರು. ಸದಸ್ಯ ಶಿವರಾಮ ಸಪಲ್ಯ, ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಮಾಜಿ ಸದಸ್ಯ ನವೀನ್ ಚಂದ್ರ, ದ.ಕ ಹಾಲು ಉತ್ಪಾದಕರ ಒಕ್ಕೂಟದ ವೈದ್ಯಾಧಿಕಾರಿ ಡಾ.ಅನುದೀಪ್, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮ್ಹಾಲಕ ಪ್ರವೀಣ್ ರಾಜ್ ಹಾಗೂ ರಶ್ಮಿಲಾ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

 

 

LEAVE A REPLY

Please enter your comment!
Please enter your name here