ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಪುಣ್ಯಸ್ಮರಣೆ

0

 

ಪುತ್ತೂರು:ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರುರವರ 58ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

 


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ್ ರೈ ಅವರು ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅಭಿವೃದ್ಧಿಗೆ ನಾಂದಿ ಹಾಡಿದ ಜವಾಹರಲಾಲ್ ನೆಹರು ಅವರನ್ನು ಯಾವತ್ತೂ ನಾವು ಕೊಂಡಾಡಬೇಕು ಮತ್ತು ಸ್ಮರಿಸುವಂತಾಗಬೇಕುನೆಹರು ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಭಾರತವು ಜಗತ್ತಿನಲ್ಲಿ ಅತ್ಯಂತ ಬಡರಾಷ್ಟ್ರವೆಂದು ಗುರುತಿಸಿಕೊಂಡಿತ್ತು.ಒಂದು ಸೂಜಿ ಕಾರ್ಖಾನೆಯೂ ಇಲ್ಲದಂತಹ ಸಂದರ್ಭದಲ್ಲಿ ಈ ದೇಶದಲ್ಲಿ ಅಭಿವೃದ್ದಿಗಾಗಿ ಕೈಗಾರಿಕೆಗಳನ್ನು, ಕೃಷಿಯನ್ನು ಹಾಗು ಬೇರೆ ಬೇರೆ ಅಭಿವೃದ್ಧಿಗಳನ್ನು ಮಾಡಿ ಜಗತ್ತಿನಲ್ಲೇ ಭಾರತವನ್ನು ಅತ್ಯಂತ ಪ್ರಬಲ ದೇಶವನ್ನಾಗಿ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಆದರೆ ಬಿಜೆಪಿಗರು ಇಂದು ಗಾಂಧಿ, ನೆಹರು ಕುಟುಂಬವನ್ನು ಹೀಯಾಳಿಸುವ ಮೂಲಕ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ, ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ದಿನೇಶ್ ಪಿ.ವಿ, ಕಾರ್ಯದರ್ಶಿ ಶೆರಿಲ್ ರೋಡ್ರಿಗಸ್, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸ್ವಿಕೇರ,ನಗರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೃಷ್ಣಪ್ಪ, ಡೆನ್ನಿಸ್ ಲೋಬೊ ಮತ್ತಿತರರು
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here